ನಿಶಾ ನರಸಪ್ಪ ಕಿರುತೆರೆಯ ಮಂದಿಯ ಜೊತೆ ಒಂದಷ್ಟು ಸಂಪರ್ಕ ಇಟ್ಟುಕೊಂಡಿದ್ದು,ಇದನ್ನೇ ಬಂಡವಾಳ ಮಾಡಿಕೊಂಡು ಇದೀಗ ಹಲವರಿಗೆ ವಂಚಿಸಿದ್ದಾಳೆ.
ವನ್ಷಿಕಾ ಮಾಸ್ಟರ್ ಆನಂದ್ ಮಗಳು. ಈಗ ನೀವು ಯಾವುದೇ ಸಾಮಾಜಿಕ ಜಾಲತಾಣ ನೋಡಿದ್ರು ಕೂಡ ವನ್ಷಿಕಾಳದ್ದೆ (Vanshika) ಹವಾ. ಫೇಸ್ ಬುಕ್, ಇನ್ಸ್ಟ್ರಾಗ್ರಾಂ, ಯೂ ಟ್ಯೂಬ್ ಎಲ್ಲೇ ನೋಡಿ ಈ ಪುಟ್ಟ ಹುಡ್ಗಿಯ ವೀಡಿಯೋಗಳದ್ದೇ ಹವಾ ಇರುತ್ತೆ. ಇಂತಹ ವನ್ಷಿಕಾಳ ಹೆಸ್ರನ್ನು ಇಟ್ಕೊಂಡ ಖತರ್ನಾಕ್ ಆಸಾಮಿ ಒಬ್ಳು ಸಾರ್ವಜನಿಕರಿಗೆ ವಂಚನೆ(Cheating) ಮಾಡೋದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿದ್ದಾಳೆ. ಸ್ಯಾಂಡಲ್ ವುಡ್ , ಸೀರಿಯಲ್ ಹಾಗೂ ಸಿನಿಮಾದಲ್ಲಿ ಆಕ್ಟಿಂಗ್ ಚಾನ್ಸ್ ಕೊಡಿಸ್ತೇನೆ, ಹೀರೋ ಮಾಡ್ತೇವೆ. ಅದು ಇದು ಅಂತ ವಂಚನೆ ಮಾಡಿರೋ ಪ್ರಕರಣಗಳನ್ನ ನೋಡಿದ್ದೇವೆ. ಅದೇ ರೀತಿ ಸದ್ಯ ಟ್ರೆಂಡಿಂಗ್ ನಲ್ಲಿರೋದು ಮಕ್ಕಳ ರಿಯಾಲಿಟಿ ಶೋ (Reality show). ಅದನ್ನೆ ಬಂಡವಾಳ ಮಾಡಿಕೊಂಡಿದ್ದ ನಿಶಾ (Nisha)ಒಬ್ಬಳು ಮಾಸ್ಟರ್ ಆನಂದ್ ಪುತ್ರಿಯ ಹೆಸ್ರು ದುರ್ಬಳಕೆ ಮಾಡಿಕೊಂಡಿರೋ ಆರೋಪ ಕೇಳಿ ಬಂದಿದೆ. ಕಿರುತೆರೆ ಹಾಗೂ ರಿಯಾಲಿಟಿ ಶೋನಲ್ಲಿ ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿರೋ ಬಾಲ ನಟಿ ವನ್ಷಿಕಾ ಹೆಸರನ್ನು ಬಳಸಿಕೊಂಡು ಹತ್ತಾರೂ ಜನರಿಗೆ ವಂಚನೆ ಮಾಡಿರೋ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ವೀಕ್ಷಿಸಿ: ಸುಪ್ರೀಂ ಅಂಗಳದಲ್ಲಿ ಯಮುನೆ ಪ್ರತಾಪ: ಜಲಪ್ರಳಯದ ಹಿಂದಿದೆಯಾ ಯಾರೂ ಅರಿಯದ ರಹಸ್ಯ ?