Sep 22, 2023, 11:54 AM IST
ಚೈತ್ರಾ ಕುಂದಾಪುರ ಗ್ಯಾಂಗ್‌ನಿಂದ ಕೋಟಿ ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಸಿಸಿಬಿ ವಿಚಾರಣೆ ವೇಳೆ ಚೈತ್ರಾ ಕುಂದಾಪುರ(Chaitra Kundapur) ತಪ್ಪೊಪ್ಪಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಕಸ್ಟಡಿಯಲ್ಲಿರುವಾಗಲೇ ಹೇಳಿಕೆ ಕೊಟ್ಟು ಚೈತ್ರಾ ವಿವಾದ ಸೃಷ್ಟಿಸಿದ್ದಳು. ಸ್ವಾಮೀಜಿ ಬಂಧನವಾದ್ರೆ ಪ್ರಭಾವಿಗಳ ಹೆಸರು ಹೊರಬರುತ್ತೆ ಎಂದು ಚೈತ್ರಾ ಹೇಳಿದ್ದಳು. ಇದೀಗ ಸಿಸಿಬಿ(CCB) ವಿಚಾರಣೆಯಲ್ಲಿ ಚೈತ್ರಾ ಕುಂದಾಪುರ ತಪ್ಪೊಪ್ಪಿಕೊಂಡಿದ್ದಾಳೆ. ಸ್ವಾಮೀಜಿ ಬಂಧಿಸಿ ಮುಖಾಮುಖಿ ವಿಚಾರಣೆಯನ್ನು ಸಿಸಿಬಿ ಪೊಲೀಸರು(police) ನಡೆಸಿದ್ದಾರೆ. ಈ ವೇಳೆ ಪ್ರಭಾವಿಗಳೂ ಇಲ್ಲ, ಯಾರೂ ಇಲ್ಲ ಎಂದ ಚೈತ್ರಾ ಕುಂದಾಪುರ ಹೇಳಿದ್ದಾಳಂತೆ. ಪ್ರಕರಣದ ಹಾದಿ ತಪ್ಪಿಸಲು ಹೇಳಿಕೆ ಕೊಟ್ಟಿದ್ದಾಗಿ ಚೈತ್ರಾ ಯೂ ಟರ್ನ್ ಹೊಡೆದಿದ್ದಾಳೆ. ಒಂದೊಂದು ಪಾತ್ರವನ್ನೂ ಕ್ರಿಯೇಟ್ ಮಾಡಿರೋದಾಗಿ ಚೈತ್ರಾ ತಪ್ಪೊಪ್ಪಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಅಲ್ಲದೇ ಈಗಾಗಲೇ ನನ್ನ ಹೆಸರು ಹಾಳಾಗಿದೆ ಎಂದು ತನಿಖಾಧಿಕಾರಿ ಮುಂದೆ ಚೈತ್ರಾ ಕಣ್ಣೀರು ಹಾಕಿದ್ದಾಳೆ.
ಇದನ್ನೂ ವೀಕ್ಷಿಸಿ: ದಳಪತಿಗಳ ಮೈತ್ರಿ ಮಾತು: ಬಿಜೆಪಿ ಬಳಿ ಯಾವೆಲ್ಲ ಬೇಡಿಕೆ ಇಡಲಿದೆ ಜೆಡಿಎಸ್..?