ತಂಗಿಯ ಪ್ರೀತಿಗೆ ಅಣ್ಣನೇ ವಿಲನ್..! ಓದದೇ ಇದ್ದವನನ್ನ ಪ್ರೀತಿಸಿದ್ದೇ ತಪ್ಪಾಯ್ತು..!

May 24, 2024, 4:04 PM IST

ಅವನಿನ್ನು 21 ವರ್ಷ ಹುಡುಗ. ಮನೆಯಲ್ಲಿ ಬಡತನ ಇದ್ದಿದ್ರಿಂದ ಓದನ್ನ ಅರ್ಧಕ್ಕೆ ನಿಲ್ಲಿಸಿ ಅಪ್ಪನ ವ್ಯಾಪಾರದಲ್ಲಿ ಸಹಾಯ ಮಾಡ್ತಿದ್ದ. ಹಣ್ಣು ವ್ಯಾಪಾರ ಮಾಡಿಕೊಂಡು ಮನೆಗೆ ನೆರವಾಗಿದ್ದ. ಆದ್ರೆ ಇಂಥವನು ಆವತ್ತು ನಡುರಸ್ತೆಯಲ್ಲೇ ಬರ್ಬರವಾಗಿ ಕೊಲೆಯಾಗಿಬಿಟ್ಟ(Murder). ಅವನನ್ನ ಹಂತಕ ಸ್ಕ್ರೂ ಡ್ರೈವರ್‌ನಲ್ಲಿ ಚುಚ್ಚಿ ಚುಚ್ಚಿ ಕೊಂದುಬಿಟ್ಟಿದ್ದ. ಇನ್ನೂ ಕೊಲೆನಡೆದ ಕೆಲವೇ ನಿಮಿಷಗಳಲ್ಲೇ ಪೊಲೀಸರು ಹಂತಕನನ್ನೂ ಬಂಧಿಸಿದ್ರು. ಆದ್ರೆ ಬಂಧನ ನಂತರವೇ ಗೊತ್ತಾಗಿದ್ದು ಆ ಕೊಲೆಯ ಹಿಂದೆ ಒಂದು ಲವ್ ಸ್ಟೋರಿ(Love story) ಇತ್ತು ಅಂತ. ಶಾಲಾ ದಿನಗಳಲ್ಲಿ ಶುರುವಾಗಿದ್ದ ಪ್ರೀತಿಯನ್ನ ಆ ಜೋಡಿ ಪೋಷಿಸುತ್ತಲೇ ಬಂದಿದ್ರು. ಆದ್ರೆ ಇವತ್ತು ಮುಸ್ಕಾನ್ ಅಣ್ಣಾನೇ ತಂಗಿಯ(Sister) ಪ್ರೀತಿಗೆ ಎಳ್ಳುನೀರು ಬಿಟ್ಟಿದ್ದಾನೆ. ನಡುರಸ್ತೆಯಲ್ಲಿ ಮುಸ್ಕಾನ್ ಅಣ್ಣ ಇಬ್ರಾಹಿಂನ ಚುಚ್ಚಿ ಚುಚ್ಚಿ ಕೊಂದಿದ್ದಾನೆ. ಕಳೆದ 4 ವರ್ಷದಿಂದ ಮುಸ್ಕಾನ್ ಮತ್ತು ಇಬ್ರಾಹಿಂ ಪ್ರೀತಿಸುತ್ತಿದ್ರು. ಊರೂರು ಸುತ್ತುತ್ತಿದ್ರು. ಆದ್ರೆ ಎಷ್ಟು ದಿನ ಅಂತ ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲು ಕುಡಿಯೋಕೆ ಸಾಧ್ಯ..? ಒಂದು ದಿನ ಇವರಿಬ್ಬರ ಪ್ರೀತಿಯ ವಿಷಯ ಮುಸ್ಕಾನ್ ಕುಟುಂಬಕ್ಕೆ ಗೊತ್ತಾಗಿಬಿಡ್ತು. ಆಗ ಇಬ್ರಾಹಿಂ ಕುಟುಂಬದವರನ್ನ ಕರೆಸಿ ವಾರ್ನ್ ಕೂಡ ಮಾಡಿ ಕಳಿಸಿದ್ದರು. ಆದ್ರೆ ಇಬ್ರಾಹಿಂ ಮಾತ್ರ ಮುಸ್ಕಾನ್‌ಳನ್ನ ಬಿಟ್ಟಿರೋದಕ್ಕೆ ಸಾಧ್ಯವೇ ಆಗೋದಿಲ್ಲ. ಮುಸ್ಕಾನ್ಗೂ ಕೂಡ.. ಕುಟುಂಬದವರ ವಾರ್ನಿಂಗ್ ನಂತರವೂ ಇಬ್ಬರೂ ಕದ್ದುಮುಚ್ಚಿ ಓಡಾಡಿಕೊಂಡಿದ್ರು. ಆದ್ರೆ ಆವತ್ತು ಈ ಜೋಡಿ ಮುಸ್ಕಾನ್ ಅಣ್ಣನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿತ್ತು.. ಅಷ್ಟೇ.. ಆ ಸ್ಥಳದಲ್ಲೇ ಇಬ್ರಾಹಿಂ ಕಥೆ ಮುಗಿಸಿದ್ದ ಅಣ್ಣ. ಮನೆಗೆ ಆಸರೆ ಆಗಿದ್ದ ಇಬ್ರಾಹಿಂ ಕಳೆದುಕೊಂಡ ಆತನ ಕುಟುಂಬ ಇವತ್ತು ಕಂಗಾಲಾಗಿದೆ. ತಂಗಿಯ ಪ್ರೀತಿಯ ಜೊತೆಗೆ ಪ್ರಿಯಕರನ ಕೊಂದ ಮುಜಮಿಲ್ ಕೂಡ ಜೈಲು ಪಾಲಾಗಿದ್ದಾನೆ. 

ಇದನ್ನೂ ವೀಕ್ಷಿಸಿ:  ಬೆಂಗಳೂರಲ್ಲಿ ನಡೆಯುತ್ತಿದೆಯಾ ಮಕ್ಕಳ ಮತಾಂತರ..? ಪಶ್ಚಿಮ ಬಂಗಾಳ ಮೂಲದ ಕುಟುಂಬದ ಮೇಲೆ ಆರೋಪ!