Jul 8, 2023, 10:23 AM IST
ಬೆಂಗಳೂರು: ಬಿಟ್ ಕಾಯಿನ್ ಹಗರಣದ (Bit Coin Scam) ತನಿಖೆಗೆ ಎಸ್ಐಟಿ ರಚನೆ ವಿಚಾರವಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್ ಮಾಹಿತಿ ಲಭಿಸಿದೆ. ಸರ್ಕಾರದ ಆದೇಶದ ಮೇರೆಗೆ ಎಸ್‌ಐಟಿ( ತಂಡವನ್ನು ರಚನೆ ಮಾಡಲಾಗಿದೆ. ಕ್ರೈಮ್ ನಂಬರ್ 153/2020 ಇದನ್ನು ಮಾತ್ರ ಎಸ್‌ಐಟಿ ತನಿಖೆ ನಡೆಸಲಿದೆ. ಕಾಟನ್‌ಪೇಟೆಯಲ್ಲಿ ದಾಖಲಾದ ಪ್ರಕರಣದ ತನಿಖೆ ಯಾಕೆ ಎಂಬ ಪ್ರಶ್ನೆ ಇದೀಗ ಮೂಡಿದೆ. ಅಸಲಿ ತನಿಖೆ ಆರೋಪಿ ಶ್ರೀಕೃಷ್ಣ( Srikrishna) ಅಲಿಯಾಸ್ ಶ್ರೀಕಿ ವಿರುದ್ಧನಾ ಅಥವಾ ಕಾಂಗ್ರೆಸ್ ಆರೋಪಿಸಿದವರ ಮೇಲೆ ಮಾತ್ರನಾ ಎಂಬ ಅನುಮಾನ ಇದೀಗ ಮೂಡಿದೆ. ಇಲ್ಲ ಯಾರ ಬಾಯಿ ಮುಚ್ಚಿಸಲು ತನಿಖೆ ನಡೆಯುತ್ತಿದೆ ಎಂಬ ಪ್ರಶ್ನೆ ಇದೀಗ ಮೂಡಿದೆ. ಇಂಟರ್ ನ್ಯಾಷನಲ್ ಹ್ಯಾಕರ್ ಶ್ರೀಕಿ ವಿರುದ್ಧ ಐದು ಪ್ರಕರಣಗಳು ಇವೆ. ಆದ್ರೆ ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿರುವುದು ಯಾಕೆ ಎಂದು ಅನುಮಾನ ಶುರುವಾಗಿದೆ.
ಇದನ್ನೂ ವೀಕ್ಷಿಸಿ: Udupi Rain: ಮಳೆ ನಿಂತರೂ ತಗ್ಗದ ನೆರೆ: ಜಾರಂದಾಯ ದೇಗುಲಕ್ಕೆ ಜಲದಿಗ್ಬಂಧನ