Jun 14, 2023, 3:40 PM IST
ಬೆಂಗಳೂರು (ಜೂ.14): ಅವಳು ವಿದ್ಯಾವಂತೆ. ಫಿಸಿಯೋ ಥೆರಪಿಸ್ಟ್ ಆಗಿದ್ದ ಅವಳು ಮದುವೆಯಾಗಿ ಗಂಡನ ಮನೆ ಸೇರಿದ್ಲು. ಅತ್ತೆ, ಗಂಡ ಮತ್ತು ಮಗನೊಂದಿಗೆ ಖುಷಿಖುಷಿಯಾಗಿ ಜೀವನ ಮಾಡಿಕೊಂಡು ಹೋಗ್ತಿದ್ಲು.. ಆದ್ರೆ ಇದೇ ಸುಂದರ ಕುಟುಂಬಕ್ಕೆ ವಿಲನ್ನ ಎಂಟ್ರಿಯಾಗಿತ್ತು.. ಆ ವಿಲನ್ ಬೇರೆಯಾರೂ ಆಗಿರಲಿಲ್ಲ. ಆಕೆಯ ಹೆತ್ತ ತಾಯಿಯೇ ಆಗಿದ್ಲು..
ತಾಯಿಯ ಎಂಟ್ರಿಯಿಂದ ಮಗಳ ಕುಟುಂಬದಲ್ಲಿ ಸುನಾಮಿಯೇ ಎದ್ದುಬಿಡ್ತು.. ಮಗಳ ಜೀವನ ಚೆನ್ನಾಗಿರಲಿ ಅಂತ ಹಾರೈಸಬೇಕಿದ್ದ ತಾಯಿಯೇ ಮಗಳ ಕುಟುಂಬಕ್ಕೆ ಶಾಪವಾಗಿಟ್ಟಿದ್ಲು. ಅದೆಷ್ಟರ ಮಟ್ಟಿಗೆ ಅಂದ್ರೆ ಮಗಳೇ ತಾಯಿಯ ಕುತ್ತಿಗೆಗೆ ಕೈಹಾಕುವಷ್ಟು. ಹೌದು.. ಮಗಳೇ ತಾಯಿಯನ್ನ ಕೊಲೆ ಮಾಡಿದ್ಲು.. ಅಷ್ಟೇ ಅಲ್ಲ ತಾಯಿಯ ಬಾಡಿಯನ್ನ ಸ್ಯೂಟ್ಕೇಸ್ನಲ್ಲಿ ಹಾಕೊಂಡು ಪೊಲೀಸ್ ಠಾಣೆಗೆ ತಂದಿದ್ಲು.
Bengaluru: ಅತ್ತೆಯೊಂದಿಗೆ ಜಗಳವಾಡ್ತಿದ್ದ ಅಮ್ಮನನ್ನೇ ಕೊಲೆ ಮಾಡಿ ಸೂಟ್ಕೇಸ್‌ನಲ್ಲಿ ಶವ ತಂದ ಮಗಳು
ಜೇನಿನಗೂಡಿನಂತಿದ್ದ ಕುಟುಂಬಕ್ಕೆ ತಾಯಿಯೇ ವಿಲನ್ ಆದ್ಲು: ಅಲ್ಲಿವರೆಗೆ ಗಂಡ ಅತ್ತೆ ಮಗು ಮಾತ್ರ ಇದ್ದ ಸೊನಾಲಿ ಕುಟುಂಬಕ್ಕೆ ಸೊನಾಲಿಯ ತಾಯಿಯ ಎಂಟ್ರಿಯಾಗುತ್ತೆ. ಅಲ್ಲೇ ನೋಡಿ ಎಡವಟ್ಟಾಗೊದು.. ಅಲ್ಲಿಯವರೆಗೆ ಜೇನಿನಗೂಡಿನಂತಿದ್ದ ಕುಟುಂಬದಲ್ಲಿ ಎಲ್ಲವೂ ಬದಲಾಗೋದಕ್ಕೆ ಶುರುವಾಗುತ್ತೆ. ಸೊನಾಲಿಯ ತಾಯಿ ಆ ಮನೆಯ ಅಧಿಕಾರವನ್ನ ತೆಗೆದುಕೊಳ್ತಾಳೆ. ಮಗಳನ್ನ ಮತ್ತು ಆಕೆಯ ಕುಟುಂಬವನ್ನ ಕಾಡೋದಕ್ಕೆ ಶುರು ಮಾಡ್ತಾಳೆ. ಎಲ್ಲರೂ ಆಕೆ ಕೊಡುವ ಟಾರ್ಚರ್ನ ತಡೆದುಕೊಳ್ತಾರೆ. ಮಗಳ ಸಂಸಾರಕ್ಕೆ ತಲೆ ಹಾಕಿ ತಾಯಿ ಹೆಣವಾಗಿದ್ದಾಳೆ. ಸೊನಾಲಿ ಜೈಲು ಪಾಲಾಗಿದ್ದಾಳೆ. ಆದ್ರೆ ಆಕೆಯನ್ನೇ ನಂಬಿಕೊಂಡಿದ್ದ ಆಕೆಯ ವಿಶೇಷ ಚೇತನ ಮಗನಿಗೆ ಈಗ ದಿಕ್ಕಿಲ್ಲದಂತಾಗಿದ್ದಾನೆ.