ಸೀರೆ ಅಂಗಡಿಯಲ್ಲಿ ನಾರಿಯರ ಕೈಚಳಕ: ಸೀರೆಯೊಳಗೆ ಸೀರೆ ಸೇರಿಸಿಕೊಂಡು ಪರಾರಿ: ವೀಡಿಯೋ

ಸೀರೆ ಅಂಗಡಿಯಲ್ಲಿ ನಾರಿಯರ ಕೈಚಳಕ: ಸೀರೆಯೊಳಗೆ ಸೀರೆ ಸೇರಿಸಿಕೊಂಡು ಪರಾರಿ: ವೀಡಿಯೋ

Published : Aug 27, 2023, 12:33 PM IST

ದುಬಾರಿ ಸೀರೆಯುಟ್ಟು ಚಿನ್ನಾಭರಣ ಧರಿಸಿ ಸ್ಕಾರ್ಫಿಯೋ ವಾಹನದಲ್ಲಿ ಬಂದು ದೊಡ್ಡ ದೊಡ್ಡ ಸೀರೆ ಅಂಗಡಿಗಳಲ್ಲಿ ಲಕ್ಷಾಂತರ ಮೌಲ್ಯದ ಸೀರೆ ಕದ್ದು ಪರಾರಿಯಾಗುತ್ತಿದ್ದ ಗುಂಟೂರು ಮೂಲದ ಸೀರೆ ಕಳ್ಳರ ಗ್ಯಾಂಗೊಂದನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ದುಬಾರಿ ಸೀರೆಯುಟ್ಟು ಚಿನ್ನಾಭರಣ ಧರಿಸಿ ಸ್ಕಾರ್ಫಿಯೋ ವಾಹನದಲ್ಲಿ ಬಂದು ದೊಡ್ಡ ದೊಡ್ಡ ಸೀರೆ ಅಂಗಡಿಗಳಲ್ಲಿ ಲಕ್ಷಾಂತರ ಮೌಲ್ಯದ ಸೀರೆ ಕದ್ದು ಪರಾರಿಯಾಗುತ್ತಿದ್ದ ಗುಂಟೂರು ಮೂಲದ ಸೀರೆ ಕಳ್ಳರ ಗ್ಯಾಂಗೊಂದನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆ ಜೊತೆಯಾಗಿ ನಗರದ ದೊಡ್ಡ ದೊಡ್ಡ ಶಾಪ್‌ಗಳಿಗೆ ಬರುತ್ತಿದ್ದ ಈ ಸೀರೆ ಕಳ್ಳರ ಗ್ಯಾಂಗ್‌ ಮೆಲ್ಲನೆ ಸೀರೆಯೊಳಗೆ ಸೀರೆ ಸೇರಿಸಿ ಲಕ್ಷಾಂತರ ಮೌಲ್ಯದ ಸೀರೆ ಕದ್ದು ಪರಾರಿಯಾಗುತ್ತಿದ್ದರು.  ಹೀಗೆ ಸೀರೆ ಕದ್ದು ಪರಾರಿಯಾಗುತ್ತಿದ್ದ ವೇಳೆ ಒಂದು ಸೀರೆ ಬಿದ್ದೋಗಿದ್ದು, ಇದನ್ನು ಗಮನಿಸಿದ ಶಾಪ್‌ನ ಸಿಬ್ಬಂದಿ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸಿಸಿಟಿವಿ ಪರಿಶೀಲಿಸಿದಾಗ ಈ ನಾರಿಯರ ಕೈಚಳಕ ಗಮನಕ್ಕೆ ಬಂದಿದೆ.  ಇವರ ಕೃತ್ಯ ಅಂಗಡಿಗಳ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು ಅಂಗಡಿ ಮಾಲೀಕರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆಗೆ ಇಳಿದ ರಾಜಧಾನಿಯ ಅಶೋಕ ನಗರ ಹಾಗೂ ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಈಗ ಸೀರೆ ಕಳ್ಳ ನಾರಿಯರ ಗ್ಯಾಂಗ್ ಬಂಧಿಸಿದ್ದಾರೆ. ಗುಂಟೂರು ಮೂಲದ ರಮಣ, ರತ್ನಲು, ಚಿಕ್ಕಮ್ಮ ಬಂಧಿತರು. ಇವರು 50 ಲಕ್ಷದಿಂದ 60 ಲಕ್ಷ ಮೌಲ್ಯದ ಸೀರೆಗಳನ್ನೇ ಎಗ್ಗರಿಸುತ್ತಿದ್ದರು ಎಂದು ತಿಳಿದು ಬಂದಿದೆ. 

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more