ಪ್ರೇಯಸಿಗಾಗಿ ಹೆಂಡ್ತಿಯನ್ನೇ ಕೊಂದ ಪಾಪಿ ಪತಿ, ಪತ್ನಿಗೆ ಅಕ್ರಮ ಸಂಬಂಧ ಕಟ್ಟಲು ಗೆಳೆಯನನ್ನು ಕಳಿಸಿದ್ದ!

Jul 8, 2022, 4:28 PM IST

ಮಂಡ್ಯ, (ಜುಲೈ.08): ಅದೊಂದು ಸುಂದರ ಕುಟುಂಬ. ಗಂಡ, ಹೆಂಡತಿ ಇಬ್ಬರು ಮಕ್ಕಳು. ಹಣಕಾಸಿಗೆ ಯಾವುದೇ ತೊಂದರೆ ಇರಲಿಲ್ಲ. ಸಂತೋಷವಾಗಿ ಜೀವನ ಸಾಗಿಸಲು ಯಾವುದಕ್ಕೂ ಬರ ಇರಲಿಲ್ಲ. ಆದ್ರೆ ಬರ ಇದ್ದಿದ್ದು ನಂಬಿಕೆಗೆ. 9 ವರ್ಷಗಳ ಕಾಲ ನೆಮ್ಮದಿಯಾಗಿ ಜೀವನ ಸಾಗಿಸಿದ್ದ ಆ ಸಂಸಾರಕ್ಕೆ ಒಂದು ವರ್ಷದಿಂದ ಗರ ಬಡೆದುಬಿಟ್ಟಿತ್ತು. ಗಂಡನಿಗೆ ಹೆಣ್ಣಿನ ಹುಚ್ಚು ಹಿಡಿದುಬಿಟ್ಟಿತ್ತು. 

ನಾದಿನಿ ಮೇಲೆ ವ್ಯಾಮೋಹ : ಹೆಚ್‌ಐವಿಯಿಂದ ಬಳಲುತ್ತಿದ್ದ ಪತ್ನಿಯ ಕೊಂದ ಪತಿ

ಮನೆಯಲ್ಲಿ ಹೆಂಡತಿ ಇದ್ರೂ ಊರು ತುಂಬೆಲ್ಲಾ ರಸಿಕನಂತೆ ಓಡಾಡಿಕೊಂಡಿದ್ದ. ಒಂದು ದಿನ ಹೆಂಡತಿಗೇ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡುಬಿಟ್ಟ. ಅಲ್ಲಿಂದ ಶುರುವಾದ ಇವರಿಬ್ಬರ ಅಕ್ರಮ ಸಂಬಂಧದ ವಾರ್ ಹೆಂಡತಿಯ ಕೊಲೆಯೊಂದಿಗೆ ಅಂತ್ಯವಾಗಿದೆ. ಹೀಗೆ ಗಂಡನ ಕಾಮದಾಟಕ್ಕೆ ಬಲಿಯಾದ  ಹೆಂಡತಿಯ ದುರಂತ ಕಥೆಯೇ ಇವತ್ತಿನ ಎಫ್.ಐ.ಆರ್...