ಮಕ್ಕಳ ಮದುವೆಯೇ ಕುಟುಂಬದ ಸಾವಿಗೆ ಕಾರಣವಾ..?
ಸತ್ತು 5 ವರ್ಷವಾದ್ರೂ ಯಾರಿಗೂ ಗೊತ್ತೇ ಆಗಲಿಲ್ಲ..!
ಬಾಗಿಲು ತೆರೆದು ಒಳಗೋದ ಪೊಲೀಸರಿಗೆ ಶಾಕ್..!
ಅದು ಕೋಟೆ ನೋಡು ಅಂತಲೆ ಪ್ರಖ್ಯಾತಿ ಪಡೆದಿರುವ ಚಿತ್ರದುರ್ಗ(Chitradurga) ಜಿಲ್ಲೆ. ಇವತ್ತು ಇದೇ ಜಿಲ್ಲೆ ಇಡೀ ರಾಜ್ಯವನ್ನ ಬೆಚ್ಚಿಬೀಳಿಸಿದೆ. ಕಾರಣ ಪಾಳು ಬಿದ್ದ ಮನೆಯೊಂದರಲ್ಲಿ ಸಿಕ್ಕ ಐದು ಅಸ್ತಿಪಂಜರಗಳು(Skeletons). ಮಲಗಿದವರು ಅಲ್ಲೇ ಸ್ಕೆಲಿಟನ್ಗಳಾಗಿದ್ರೆ ಮತ್ತಬ್ಬರು ಕೂತ ಜಾಗದಲ್ಲೇ ಉಸಿರು ಚೆಲ್ಲಿದ್ರು. ಅಕ್ಕಪಕ್ಕದವರೇ ಹೇಳೋ ಹಾಗೆ ಆ ಮನೆ 10 ವರ್ಷದಿಂದ ಸೈಲೆಂಟಾಗೇ ಇದೆ. ಇವರುಗಳ ಪ್ರಕಾರ ಇದು 4 ವರ್ಷಕ್ಕಿಂತ ಮುಂಚಿತವಾಗಿಯೇ ನಡೆದಿರೋ ಘಟನೆ. ಆದ್ರೆ ಕೇಸ್ ದಾಖಲಿಸಕೊಂಡು ತನಿಖೆ ನಡೆಸಿದ ಪೊಲೀಸರು(Police) 2019ರಲ್ಲೇ ಈ ಘಟನೆ ನಡೆದಿದೆ ಅಂತ ಕನ್ಫರ್ಮ್ ಆಗಿ ಹೇಳ್ತಿದ್ದಾರೆ. ಅದಕ್ಕೆ ಸಾಕ್ಷಿ ಮನೆಯಲ್ಲಿ ಸಿಕ್ಕಿದ ಕರೆಂಟ್ ಬಿಲ್ ಮತ್ತು ಕ್ಯಾಲೆಂಡರ್. ವಯಸ್ಸಿಗೆ ಬಂದ ಮಗಳಿಗೆ ಮದುವೆಯಾಗಿಲ್ಲ.. ಮಗಳ ಮದುವೆಯಾಗದೇ ಗಂಡು ಮಕ್ಕಳಿಗೆ ಮದುವೆ ಮಾಡೋ ಹಾಗಿಲ್ಲ. ಯಾರೇ ಮನೆಗೆ ಬಂದರೂ ಮಗಳ ಮದುವೆಯದ್ದೇ ಪ್ರಶ್ನೆಗಳು. ಇದೇ ಕಾರಣಕ್ಕೆ ಆ ಕುಟುಂಬ ತಮ್ಮವರನ್ನ ದೂರವೇ ಇಟ್ಟಿತ್ತು. ಆದ್ರೆ ಖಿನತೆಗೊಳಾಗಾಗುವ ಆ ಕುಟುಂಬ ಆವತ್ತೊಂದು ದಿನ ಒಂದು ಕೆಟ್ಟ ನಿರ್ಧಾರ ಮಾಡಿಬಿಡುತ್ತೆ. ಅದೇ ಸಾಮೂಹಿಕ ಆತ್ಮಹತ್ಯೆ. ಮನೆಯಲ್ಲಿದ್ದವರೆಲ್ಲಾ ವಿಷ ಉಂಡು ಒಂದೇ ದಿನ ಎಲ್ಲರೂ ಪ್ರಾಣಬಿಟ್ಟಿದ್ರು. ಆದ್ರೆ ಅವರ ಸಾವಿನ ವಿಷ್ಯ ಇವತ್ತಿನವರೆಗೂ ಯಾರಿಗೂ ಗೊತ್ತೇ ಆಗಿರಲಿಲ್ಲ. ಕಳ್ಳರು ಮನೆ ನುಗ್ಗಿ ಕಳ್ಳತನ ಮಾಡಿದ್ರು.. ಮನೆ ಭೂತದ ಮನೆ(House) ಆಯ್ತು. ವಾಸನೆ ಬಂದಿತ್ತು.. ಆದ್ರೂ ಯಾರೋಬ್ಬರೂ ತಲೆಕೆಡಸಿಕೊಂಡಿರಲಿಲ್ಲ.. ಆದ್ರೆ ಇವತ್ತು ಆ ದೃಶ್ಯಕ್ಕೆ ಇಡೀ ರಾಜ್ಯವೇ ಬೆಚ್ಚಿ ಬಿದ್ದಿದೆ.
ಇದನ್ನೂ ವೀಕ್ಷಿಸಿ: ಅಯೋಧ್ಯಾ ಧಾಮ್ ಜಂಕ್ಷನ್ ರೈಲು ನಿಲ್ದಾಣ ಉದ್ಘಾಟನೆ: ಮಕ್ಕಳ ಜೊತೆ ಪ್ರಧಾನಿ ಮೋದಿ ಮಾತುಕತೆ