Mar 26, 2022, 8:04 PM IST
ಬೆಂಗಳೂರು(ಮಾ. 26) ಜಿಮ್ ನಲ್ಲಿ (Gym) ಕುಸಿದು ಬಿದ್ದು ಮಹಿಳೆ ಮೃತಪಟ್ಟಿರುವ ಘಟನೆ ಬೆಂಗಳೂರಿನಿಂದ (Bengaluru) ವರದಿಯಾಗಿದೆ. ಮಲ್ಲೇಶ್ ಪಾಳ್ಯ ಜಿಮ್ ಸೇರಿಕೊಂಡಿದ್ದರು. ವ್ಯಾಯಾಮ (Workout) ಮಾಡುತ್ತಿರುವಾಗ ಅಲ್ಲಿಯೇ ಕುಸಿದು ಬೀಳುತ್ತಾರೆ. ಸಿಸಿಟಿವಿಯಲ್ಲಿ(CCTV) ಸಾವಿನ ದೃಶ್ಯ ಸೆರೆಯಾಗಿದೆ.
ಈ ಆಹಾರ ಬಿಡದಿದ್ದರೆ ಹಾರ್ಟ್ ಅಟ್ಯಾಕ್ ಪಕ್ಕಾ
ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಿರುವವರು ತಕ್ಷಣ ನೆರವಿಗೆ ಧಾವಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಹಿಳೆಯ (Woman) ಪ್ರಾಣ ಹಾರಿ ಹೋಗಿತ್ತು. ಖಾಸಗಿ ಕಂಪನಿ ಒಂದರಲ್ಲಿ ಮ್ಯಾನೇಜರ್ ಆಗಿದ್ದ ಮಹಿಳೆಗೆ ಮದುವೆ ಆಗಿರಲಿಲ್ಲ.