Apr 26, 2024, 9:57 AM IST
ಬಾಲಿವುಡ್‌ನಲ್ಲಿ ತಯಾರಾಗುತ್ತಿರುವ ರಾಮಾಯಣ ಸಿನಿಮಾದಲ್ಲಿ(Ramayana Movie) ಯಶ್ ಪಾರ್ಟ್ ಆಗಿದ್ದಕ್ಕೆ ಕಾರಣ ಬಿಚ್ಚಿಟ್ಟಿದ್ದಾರೆ ರಾಕಿಂಗ್ ಸ್ಟಾರ್. ಅಂತಾರಾಷ್ಟ್ರೀಯ ಪತ್ರಿಕೆಯೊಂದರ ಜೊತೆ ಮಾತನಾಡಿರೋ ಯಶ್(Yash), ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಪ್ರರ್ದಶಿಸುವುದು ನನ್ನ ಬಹುದಿನಗಳ ಕನಸು. ಅದರ ಹುಡುಗಾಟದಲ್ಲಿ ನಾನು ಅತ್ಯುತ್ತಮ VFC ಸ್ಟುಡಿಯೋ ಕಂಡುಕೊಂಡಿದ್ದೇನೆ. ಅದರ ಹಿಂದಿನ ಪ್ರೇರಕ ಶಕ್ತಿ ಭಾರತೀಯ ನಮಿತ್. ಭಾರತೀಯ ಸಿನಿಮಾದ ದೃಷ್ಟಿಯಲ್ಲಿ ನನ್ನ ಮತ್ತು ನಮಿತ್ ಆಲೋಚನೆಗಳು ಹೊಂದುತ್ತವೆ. ನಾವು ವಿವಿಧ ಯೋಜನೆಗಳ ಬಗ್ಗೆ ಚರ್ಚೆ ಮಾಡಿದೆವು. ಆಗ ರಾಮಾಯಣದ ವಿಷಯವೂ ಬಂದಿತು. ನನ್ನ ಮನಸ್ಸಿನಲ್ಲಿ ಅದರ ಬಗ್ಗೆ ಒಂದು ಆಲೋಚನೆ ಇತ್ತು. ಹೀಗಾಗಿ ನಾನು ಸಹ ನಿರ್ಮಾಪಕನಾದೆ ಎಂದಿದ್ದಾರೆ ಯಶ್. ರಾಮಾಯಣ ನಿರ್ಮಾಪಕರಲ್ಲಿ ಯಶ್ ಕೂಡ ಒಬ್ರು. ನಮಿತ್ ಮಲ್ಹೋತ್ರಾ ಅವರು ‘ರಾಮಾಯಣ’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇವರ ಜೊತೆ ನಿರ್ಮಾಣದಲ್ಲಿ ಯಶ್ ಕೂಡ ಕೈ ಜೋಡಿಸಿದ್ದಾರೆ. ಈ ಸಿನಿಮಾದಲ್ಲಿ ಯಶ್ ರಾವಣನ ರೋಲ್ ಕೂಡ ಮಾಡುತ್ತಿದ್ದಾರೆ. ಆದ್ರೆ ಅದರ ಬಗ್ಗೆ ತುಟಿ ಬಿಚ್ಚದ ರಾಕಿ ರಾಮಾಯಣ ನಿರ್ಮಾಣ ಮಾಡುತ್ತಿರೋದಕ್ಕೆ ಕಾರಣ ಮಾತ್ರ ತಿಳಿಸಿದ್ದಾರೆ. ಈ ರಾಮಾಯಣ ಮೂರು ಪಾರ್ಟ್ನಲ್ಲಿ ಪ್ಯಾನ್ ವರ್ಲ್ಡ್ ಸಿನಿಮಾ ಆಗಿ ಸಿದ್ಧವಾಗುತ್ತಿದೆ. ಸಿನಿಮಾದ ಶೂಟಿಂಗ್ ಕೂಡ ಈಗಾಗ್ಲೆ ಆರಂಭ ಆಗಿದೆ.
ಇದನ್ನೂ ವೀಕ್ಷಿಸಿ: ನಮ್ಮ ಒಂದೊಂದು ವೋಟು ಒಂದೊಂದು ಇಟ್ಟಿಗೆ ಇದ್ದಂತೆ! ಸುವರ್ಣನ್ಯೂಸ್ ಜತೆ ನಟ ರಮೇಶ್ ಅರವಿಂದ್ ಮಾತು!