ಸಲಾರ್‌ನಲ್ಲಿ ಯಶ್ ಹೆಸರು ಬಂದಿದ್ದೇಕೆ?: ರಾಕಿ ಭಾಯ್‌ಗೂ ಪ್ರಭಾಸ್‌ಗೂ ಇರೋ ಲಿಂಕ್ ಏನು?

ಸಲಾರ್‌ನಲ್ಲಿ ಯಶ್ ಹೆಸರು ಬಂದಿದ್ದೇಕೆ?: ರಾಕಿ ಭಾಯ್‌ಗೂ ಪ್ರಭಾಸ್‌ಗೂ ಇರೋ ಲಿಂಕ್ ಏನು?

Published : Dec 23, 2023, 12:34 PM IST

ಸಲಾರ್ ಇದು ಪ್ರಭಾಸ್ ಸಿನಿಮಾ ನಿಜಾ.. ಆದ್ರೆ ಕೆಜಿಎಫ್ ಕೋಟೆ ಕಟ್ಟಿದ್ದ ಡೈರೆಕ್ಟರ್ ಪ್ರಶಾಂತ್ ನೀಲ್ ಹಾಗು ಪ್ರೊಡ್ಯೂಸರ್ ಹೊಂಬಾಳೆ ಫಿಲಮ್ಸ್ನ ವಿಜಯ್ ಕಿರಗಂದೂರು ಸಾರಥ್ಯದಲ್ಲಿ ಬಂದ ಸಿನಿಮಾ. ಹಾಗಿದ್ಮೇಲೆ ಅಲ್ಲಿ ಕೆಜಿಎಫ್ ಕಿಂಗ್ ರಾಕಿಂಗ್ ಯಶ್ ಇರಲೇ ಬೇಕಲ್ವಾ. 

ಸಲಾರ್ ಇದು ಪ್ರಭಾಸ್ ಸಿನಿಮಾ ನಿಜಾ.. ಆದ್ರೆ ಕೆಜಿಎಫ್ ಕೋಟೆ ಕಟ್ಟಿದ್ದ ಡೈರೆಕ್ಟರ್ ಪ್ರಶಾಂತ್ ನೀಲ್ ಹಾಗು ಪ್ರೊಡ್ಯೂಸರ್ ಹೊಂಬಾಳೆ ಫಿಲಮ್ಸ್ನ ವಿಜಯ್ ಕಿರಗಂದೂರು ಸಾರಥ್ಯದಲ್ಲಿ ಬಂದ ಸಿನಿಮಾ. ಹಾಗಿದ್ಮೇಲೆ ಅಲ್ಲಿ ಕೆಜಿಎಫ್ ಕಿಂಗ್ ರಾಕಿಂಗ್ ಯಶ್ ಇರಲೇ ಬೇಕಲ್ವಾ. ಇಷ್ಟು ದಿನ ಆಗಿದ್ದು ಅದೇ ಚರ್ಚೆ. ಸಲಾರ್ನಲ್ಲಿ ರಾಕಿ ರಂಗಿದೆ ಅಂತ ಸಿಕ್ಕಾಪಟ್ಟೆ ಟಾಕ್ ಆಗಿತ್ತು. ಯಶ್ ಇನ್ ಸಲಾರ್.. ಈ ಸುದ್ದಿ ಕಳೆದ ಎರಡು ವರ್ಷದಿಂದಲೂ ಇದೆ. ರಾಕಿ ಸಲಾರ್ ಮಹೂರ್ಥಕ್ಕೆ ಹೋಗಿದ್ದೇ ಹೋಗಿದ್ದು. ಯಶ್ ಸಲಾರ್ ಪಾರ್ಟ್ ಆಗ್ತಾರೆ. ಗೆಸ್ಟ್ ರೋಲ್ನಲ್ಲಿ ಮಿಂಚ್ತಾರೆ ಅಂತೆಲ್ಲಾ ಕಥೆ ಕಾದಂಬರಿ ಹುಟ್ಟಿದ್ವು. ಈ ಬಗ್ಗೆ ಸಲಾರ್ ಟೀಂ ಕೂಡ ತುಟಿ ಬಿಚ್ಚದೇ ಏನೆಲ್ಲಾ ಸುದ್ದಿ ಆಗುತ್ತೋ ಎಲ್ಲವೂ ಆಗ್ಲಿ ಅಂತ ಸುಮ್ಮನಾಗಿತ್ತು. ಈಗ ಸಲಾರ್ ರಿಲೀಸ್ ಆಗಿದೆ. ಸಲಾರ್ ನೋಡಿದವರು ಯಶ್ ಬರುತ್ತಿದ್ದಂತೆ ಶಿಳ್ಳೆ ಚಪ್ಪಾಳೆ ಹೊಡೆಯುತ್ತಿದ್ದಾರೆ. 

ಹಾಗಾದ್ರೆ ಸಲಾರ್ನಲ್ಲಿ ಯಶ್ ಇದ್ದಾರಾ ಅದಕ್ಕೆ ಉತ್ತರ ಎಸ್ ಅಂತ ಹೇಳ್ಬಹುದು. ಸಲಾರ್ನಲ್ಲಿ ಯಶ್ ಇದ್ದಾರೆ. ಆದ್ರೆ ಯಶ್ ಯಾವ್ ಫ್ರೇಮ್ನಲ್ಲೂ ಕಾಣಿಸಲ್ಲ. ಹಾಗಾದ್ರೆ ಮತ್ತಿನ್ನೇಗೆ ಯಶ್ ಬಂದು ಹೋಗ್ತಾರೆ. ಅದಕ್ಕೆ ಉತ್ತರ ಸಲಾರ್ ನೋಡಿದ್ರೆ ಗೊತ್ತಾಗುತ್ತೆ. ರಾಕಿ ಸಲಾರ್ ಫಾರ್ಟ್ ಆಗಿರೋದು ನಿಜ. ಯಶ್ ಇಲ್ಲಿ ನಟಿಸಿಲ್ಲ. ಯಶ್ ಹೆಸರು ಸಲಾರ್ ಟೈಟಲ್ ಕಾರ್ಡ್ನಲ್ಲಿ ಬಂದು ಹೋಗುತ್ತೆ. ರಾಕಿಂಗ್ ಸ್ಟಾರ್ ಯಶ್ಗೆ ಸ್ಪೆಷಲ್ ಥ್ಯಾಕ್ಸ್ ಅಂತ ಸಲಾರ್ ಟೀಂ ಹೇಳಿದೆ. ಯಶ್ ಸಲಾರ್ ಪಾರ್ಟ್ ಒಂದರಲ್ಲಿ ನಟಿಸಿಲ್ಲ. ಆದ್ರೆ ಯಶ್ಗ್ಯಾಕೆ ಸಲಾರ್ನಲ್ಲಿ ವಿಶೇಷ ಧನ್ಯವಾದ ಹೇಳಿದ್ದಾರೆ.? ಇದಕ್ಕೆ ಉತ್ತರ ಸಲಾರ್ ಪಾರ್ಟ್2ನಲ್ಲಿ ಸಿಗುತ್ತೆ ಅಂತ ಟಾಕ್ ಇದೆ. ಹಾಗಾದ್ರೆ ಯಶ್ ಸಲಾರ್ ಪಾರ್ಟ್2ಗೆ ಎಂಟ್ರಿ ಕೊಡ್ತಾರಾ. ಅದಕ್ಕೂ ಪ್ರಶಾಂತ್ ನೀಲ್ ಉತ್ತರ ಕೊಟ್ಟಿಲ್ಲ. ಅಂತಹ ಯಾವ್ದೇ ಚಾಯೆಯೂ ಸಲಾರ್ನಲ್ಲಿಲ್ಲ. ಆದ್ರೆ ಯಶ್ ಹೆಸರು ಮಾತ್ರ ಬಂದು ಹೋಗುತ್ತೆ. ಈ ಮೂಲಕ ಯಶ್ ಹೆಸರು ಸಲಾರ್ ನಲ್ಲೂ ಇದ್ದಾರೆ ಅಂತ ಹೇಳ್ಬಹುದೇನೋ.

04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
05:01ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!
Read more