RCB ತಂಡದಲ್ಲಿ ಕೆಜಿಎಫ್ -2 ಕ್ರೇಜ್, ಗನ್ ಹಿಡಿದು ಪೋಸ್ ಕೊಟ್ಟ ಹರ್ಷಲ್-ಡುಪ್ಲೆಸಿಸ್.!

RCB ತಂಡದಲ್ಲಿ ಕೆಜಿಎಫ್ -2 ಕ್ರೇಜ್, ಗನ್ ಹಿಡಿದು ಪೋಸ್ ಕೊಟ್ಟ ಹರ್ಷಲ್-ಡುಪ್ಲೆಸಿಸ್.!

Published : Apr 20, 2022, 02:44 PM IST

ಕೆಜಿಎಫ್ -2 ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸ್ತಿದೆ. ಸಿನಿ ಪ್ರಿಯರು ಇನ್ನೂ ಚಿತ್ರ ನೋಡಲು ಥಿಯೇಟರ್‌ಗೆ ದಾಂಗುಡಿ ಇಡುತ್ತಿದ್ದಾರೆ. ಸದ್ಯ ಈ ಚಿತ್ರವನ್ನ RCB ಪ್ಲೇಯಸ್ ವೀಕ್ಷಿಸಿದ್ದಾರೆ. 

 

ಬೆಂಗಳೂರು (ಏ. 20): ಕೆಜಿಎಫ್ -2 ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸ್ತಿದೆ. ಸಿನಿ ಪ್ರಿಯರು ಇನ್ನೂ ಚಿತ್ರ ನೋಡಲು ಥಿಯೇಟರ್‌ಗೆ ದಾಂಗುಡಿ ಇಡುತ್ತಿದ್ದಾರೆ. ಸದ್ಯ ಈ ಚಿತ್ರವನ್ನ RCB ಪ್ಲೇಯಸ್ ವೀಕ್ಷಿಸಿದ್ದಾರೆ. 

ಕನ್ನಡ, ತಮಿಳು, ತೆಲುಗು, ಹಿಂದಿ ಮಲಯಾಳಂ ಯಾವ ಚಿತ್ರರಂಗಕ್ಕೆ ಹೋದ್ರು ಕೆಜಿಎಫ್-2 ಸಿನಿಮಾವನ್ನ ಕೊಂಡಾಡುತ್ತಾರೆ. ಈ ಚಿತ್ರದ ಬಗ್ಗೆ ಆಲ್ ಮೋಸ್ಟ್ ಎಲ್ಲರಿಂದಲೂ ಮೆಚ್ಚುಗೆಯ ಮಾತುಗಳು ಕೇಳುತ್ತಿವೆ. ಇದೀಗ ಕೆಜಿಎಫ್-2 ಬಿರುಗಾಳಿ ಆರ್ಸಿಬಿ ತಂಡಕ್ಕೂ ತಟ್ಟಿದೆ. ಈ ಸಿನಿಮಾ ನೋಡಿ ನಮ್ಮ ಆರ್ಸಿಬಿ ಹುಡುಗರು ಜೈಕಾರ ಕೂಗಿದ್ದಾರೆ. 

ಕಳೆದ ಮ್ಯಾಚ್‌ನಲ್ಲಿ ಡೆಲ್ಲಿ ತಂಡವನ್ನ ಮಣಿಸಿದ ಜೋಶ್‌ನಲ್ಲಿದ್ದ ಆರ್ಸಿಬಿ ಮತ್ತು ಟೀಮ್ ಮರುದಿನವೇ ಕೆಜಿಎಫ್-2 ಚಿತ್ರವನ್ನ ವೀಕ್ಷಿಸಿದೆ. ಆರ್ಸಿಬಿ ಕಲಿಗಳಿಗಾಗಿ ಹೋಟೆಲ್‌ನಲ್ಲಿ ಪ್ರತ್ಯೇಕ್ಷ ಶೋ ವ್ಯವಸ್ಥೆ ಮಾಡಲಾಗಿತ್ತು. ಇಡೀ ಟೀಂ ಒಟ್ಟಿಗೆ ಕೂತು ಸಿನಿಮಾ ನೋಡಿದ್ದಾರೆ. 

ಆರ್ಸಿಬಿ ಮತ್ತು ಟೀಮ್ ಬರಿ ಕೆಜಿಎಫ್-2 ಸಿನಿಮಾ ನೋಡಿ ಸುಮ್ಮನಾಗಿಲ್ಲ. ಚಿತ್ರದ ಫೈಟಿಂಗ್ ನಲ್ಲಿ ರಾಕಿಂಗ್ ಸ್ಟಾರ್ ಬಳಸಿದ ಮಿಷಿನ್ ಗನ್ ಹಿಡಿದು ಪೋಸ್ ಕೊಟ್ಟಿದ್ದಾರೆ. ಆರ್ಸಿಬಿ ಫೈಯರ್ ಬೋಲರ್ ಹರ್ಷಲ್ ಪಟೇಲ್ ಹಾಗೂ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ಪೋಟೋಗೆ ಪೋಸ್ ಕೊಟ್ಟಿರೋ ಫೋಟೋ ವೈರಲ್ ಆಗುತ್ತಿವೆ. 

ಇತ್ತೀಚೆಗಷ್ಟೇ ಸ್ಯಾಂಡಲ್ವುಡ್ನ ದೊಡ್ಡ ನಿರ್ಮಾಣ ಸಂಸ್ಥೆ  ಹೊಂಬಾಳೆ ಫಿಲ್ಮ್ಸ್, ಆರ್ಸಿಬಿ ಜೊತೆ ಕೈ ಜೋಡಿಸಿತ್ತು. ಮನರಂಜನೆ, ಗ್ಲಾಮರ್, ಸಿನಿಮಾ ಮತ್ತು ಕ್ರೀಡೆಗಳ ಅದ್ಭುತ ಸಂಗಮದ ವಿಚಾರವಾಗಿ 3 ವರ್ಷ ಒಪ್ಪಂದಕ್ಕೆ ಸಹಿ ಹಾಕಿದ್ದವು.  ಹೀಗಾಗಿ ಇಡೀ ಆರ್ಸಿಬಿ ತಂಡ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರೋ ಕೆಜಿಎಫ್-2 ಸಿನಿಮಾ ನೋಡಿ ಸಂಭ್ರಮಿಸಿ ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದಾರೆ. 


 

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more