Sreeleela in Pushpa 2: ಪುಷ್ಪ2 ಐಟಂ ಸಾಂಗ್‌ನಲ್ಲಿ ಸೊಂಟ ಬಳುಕಿಸುತ್ತಾರಾ ಶ್ರೀಲೀಲಾ ?

Jan 19, 2024, 12:06 PM IST

ಸದ್ಯ ಇದೀಗ ಸೌತ್ ಸೆನ್ಸೇಷನ್ ನಟಿ ಅಂದ್ರೆ ಶ್ರೀಲೀಲಾ. ಟಾಲಿವುಡ್(Tollywood) ನಂ1 ನಟಿಯಾಗಿ ಖ್ಯಾತಿಗಳಿಸಿರೋ ಶ್ರೀಲೀಲಾ(Sreeleela) ಡಾನ್ಸ್‌ಗೆ ಫಿದಾ ಆಗದೆ ಇರೋ ಪ್ರೇಕ್ಷಕರೇ ಇಲ್ಲ. ಮಹೇಶ್ ಬಾಬುನೆ ಶ್ರೀಲೀಲಾ ಡಾನ್ಸ್‌ಗೆ ಫಿದಾ ಆಗಿದ್ದರು. ಗುಟಂಟೂರು ಖಾರಂ ಸಿನಿಮಾದಲ್ಲಿ ಶ್ರೀಲೀಲಾ ಡಾನ್ಸ್ ಆ ರೇಂಜಿಗಿತ್ತು. ಅಂಥದ್ದು ಅಲ್ಲು ಅರ್ಜುನ್(Allu Arjun) ನಟನೆಯ ಪುಷ್ಪ 2ನಲ್ಲಿ(Pushpa 2 movie) ಇದೀಗ ಶ್ರೀಲೀಲಾ ಸೊಂಟ ಬಳುಕಿಸಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗುತ್ತಿದೆ. ಪುಷ್ಪಾ 2ನ ಒಂದೇ ಒಂದು ಸ್ಪೆಷಲ್ ಸಾಂಗಿಗೆ ಶ್ರೀಲೀಲಾ 2 ಕೋಟಿ ಸಂಭಾವನೆ ಕೇಳಿದ್ದಾರೆನ್ನಲಾಗಿದೆ. ಅಂದಹಾಗೆ ಸುಕುಮಾರ್ ನಿರ್ದೇಶನದ ಪುಷ್ಪಾ2 ಮೇಲೆ ಬಾರೀ ನಿರೀಕ್ಷೆ ಇದೆ. ಅಲ್ಲೂ ಅರ್ಜುನ್ ರಶ್ಮಿಕಾ ನಟನೆಯ ಈ ಸಿನಿಮಾಗೆ ಇದೀಗ ಶ್ರೀಲೀಲಾ ಐಟಂ ಸಾಂಗ್ ಮಾಡಿದ್ರೆ ಡಬಲ್ ಧಮಾಖದಂತೆಯೆ ಆಗುತ್ತದೆ. 

ಇದನ್ನೂ ವೀಕ್ಷಿಸಿ:  'ಬಿಲ್ಲ ರಂಗ ಬಾಷಾ' Big ಅಪ್‌ಡೇಟ್‌! ಯಾವಾಗಿನಿಂದ ಚಿತ್ರೀಕರಣ ಆರಂಭ ಗೊತ್ತಾ?