Dec 14, 2023, 10:11 AM IST
ಕಿಂಗ್ ಖಾನ್ ಶಾರುಖ್ ಈಗ ಸಕ್ಸಸ್ ಟ್ರ್ಯಾಕ್‌ನಲ್ಲಿದ್ದಾರೆ. ಜವಾನ್ ಹಾಗೂ ಪಠಾಣ್ ಸಿನಿಮಾದಿಂದ ಬಾಕ್ಸಾಫೀಸ್‌ನಲ್ಲಿ ನೂರಾರು ಕೋಟಿ ದೋಚಿರೋ ಶಾರುಖ್(Shah Rukh Khan) ಮತ್ತೆ ಬಾಲಿವುಡ್ಗೆ ಬಲ ಕೊಟ್ಟಿದ್ದಾರೆ. ಈಗ ಆ ಎರಡು ಸಿನಿಮಾಗಳ ಸಕ್ಸಸ್ ಟ್ರ್ಯಾಕ್ನಲ್ಲಿರೋ ಶಾರುಖ್ ಡಂಕಿಯನ್ನ(Dunky movie) ಗೆಲುವಿನ ರೇಸ್‌ಗೆ ಬಿಟ್ಟಿದ್ದಾರೆ. ಇದೇ ಡಿಸೆಂಬರ್ 22ಕ್ಕೆ ಶಾರುಖ್ ನಟನೆಯ ಡಂಕಿ ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ. ಆದ್ರೆ ಶಾರುಖ್ ಸಕ್ಸಸ್‌ಗೆ ಕಡಿವಾಣ ಹಾಕೋಕೆ ಬಾಹುಬಲಿ ಪ್ರಭಾಸ್ ಸಜ್ಜಾಗಿದ್ದಾರೆ. ಪ್ರಭಾಸ್(Prabhas) ನಟನೆಯ ಸಲಾರ್(Salar) ಕೂಡ ಇದೇ ಈಯರ್ ಎಂಡ್ಗೆ ಡಿಸೆಂಬರ್ 22ಕ್ಕೆ ವಿಶ್ವದಾದ್ಯಂತ ತೆರೆ ಕಾಣುತ್ತಿದೆ. ಶಾರುಖ್ ನಟನೆಯ ಡಂಕಿ ಹಾಗು ಪ್ರಭಾಸ್ ನಟನೆಯ ಸಲಾರ್ ಸಿನಿಮಾಗಳ ಮಧ್ಯೆ ಟಫ್ ಕಾಂಪಿಟೇಷನ್ ಇದೆ. ಸಲಾರ್ ಗೆಲ್ಲಲೇ ಬೇಕಾದ ಅನಿವಾರ್ಯತೆ ಪ್ರಭಾಸ್ ಮೇಲಿದೆ. ಯಾಕಂದ್ರೆ ಬಾಹುಬಲಿ ನಂತರ ಪ್ರಭಾಸ್ ನಟನೆಯ ಸಿನಿಮಾಗಳು ಅಟ್ಟರ್ ಫ್ಲಾಫ್ ಆಗಿದ್ವು. ಆದ್ರೆ ನಿರ್ದೇಶಕ ಪ್ರಶಾಂತ್ ನೀಲ್ ಹಾಗು ಸಲಾರ್ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಸೇರಿ ಪ್ರಭಾಸ್‌ಗೆ ಸಕ್ಸಸ್ ಕೊಡೋ ಸೂಚನೆ ಕೊಟ್ಟಿವೆ. ಹೀಗಾಗಿ ಡಂಕಿ ಹಾಗು ಸಲಾರ್ ಮಧ್ಯೆ ಬಾಕ್ಸಾಫೀಸ್ ಕದನ ಏರ್ಪಡೋದು ಕನ್ಫರ್ಮ್. ಇನ್ನು ಸ್ಯಾಂಡಲ್‌ವುಡ್‌ನಲ್ಲೂ ಡಿಸೆಂಬರ್ ಕೊನೆಯವಾ ದೊಡ್ಡ ಸಿನಿಮಾ ರಿಲೀಸ್ ಆಗ್ತಿದೆ. ಅದೇ ನಟ ದರ್ಶನ್(Darshan) ಹಾಗು ಮಾಲಾಶ್ರೀ ಮಗಳು ಆರಾಧನಾ ಅಭಿನಯಿಸಿರೋ ಕಾಟೇರ(Katera movie). ಈ ಸಿನಿಮಾ ಡಿಸೆಂಬರ್ 29ರಂದು ತೆರೆ ಕಾಣುತ್ತಿದೆ. ತರುಣ್ ಸುಧೀರ್ ನಿರ್ದೇಶನದ ರಾಕ್ ಲೈನ್ ವೆಂಕಟೇಷನ್ ನಿರ್ಮಾಣದ ಕಾಟೇರ ಸಲಾರ್ ಹಾಗು ಡಂಗಿ ಜತೆ ಒಂದು ವಾರದ ನಂತರ ಬಾಕ್ಸಾಫೀಸ್ ಕದನಕ್ಕೆ ನಿಲ್ಲಲಿದೆ.
ಇದನ್ನೂ ವೀಕ್ಷಿಸಿ: ಗೆದ್ದೇ ಬಿಡ್ತು ಧನ್ವೀರ್ ಜಯತೀರ್ಥ ಜೋಡಿಯ ಸಿನಿಮಾ: ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳಿಗೆ ಕೈವ ಸೆಲೆಬ್ರಿಟಿ ಶೋ..!