ಬಾಲಿವುಡ್ ಅನ್ನೇ ಕನ್ನಡಕ್ಕೆ ಕರೆಸುತ್ತೇನೆ ಎಂದಿದ್ದ ಯಶ್: ರಾಕಿಂಗ್ ಸ್ಟಾರ್ ಚಿತ್ರದಲ್ಲಿ ಶಾರುಖ್ ಖಾನ್!

ಬಾಲಿವುಡ್ ಅನ್ನೇ ಕನ್ನಡಕ್ಕೆ ಕರೆಸುತ್ತೇನೆ ಎಂದಿದ್ದ ಯಶ್: ರಾಕಿಂಗ್ ಸ್ಟಾರ್ ಚಿತ್ರದಲ್ಲಿ ಶಾರುಖ್ ಖಾನ್!

Published : Feb 07, 2024, 12:27 PM IST

ರಾಕಿಂಗ್ ಸ್ಟಾರ್ ಯಶ್ ಒಂದ್ ಮಾತು ಹೇಳಿದ್ರು. ಯಶ್ ನೀವು ಬಾಲಿವುಡ್ಗೆ ಹೋಗುತ್ತೀರಾ.? ಅಂತ ಕೇಳಿದ್ದಕ್ಕೆ ಇಲ್ಲ ಇಲ್ಲ ನಾನ್ ಯಾಕೆ ಅಲ್ಲಿಗೆ ಹೋಗಲಿ. ಅವರೇ ನಮ್ಮಲ್ಲಿಗೆ ಬರಬೇಕು ಹಾಗೆ ಮಾಡುತ್ತೇನೆ ಅಂದಿದ್ರು ಯಶ್. ಅಂದು ಯಶ್ ಹೇಳಿದ್ದ ಈ ಮಾತು ನಿಜ ಆಗ್ತಿದೆಯಾ..?
 

ರಾಕಿಂಗ್ ಸ್ಟಾರ್ ಯಶ್ ಒಂದ್ ಮಾತು ಹೇಳಿದ್ರು. ಯಶ್ ನೀವು ಬಾಲಿವುಡ್ಗೆ ಹೋಗುತ್ತೀರಾ.? ಅಂತ ಕೇಳಿದ್ದಕ್ಕೆ ಇಲ್ಲ ಇಲ್ಲ ನಾನ್ ಯಾಕೆ ಅಲ್ಲಿಗೆ ಹೋಗಲಿ. ಅವರೇ ನಮ್ಮಲ್ಲಿಗೆ ಬರಬೇಕು ಹಾಗೆ ಮಾಡುತ್ತೇನೆ ಅಂದಿದ್ರು ಯಶ್. ಅಂದು ಯಶ್ ಹೇಳಿದ್ದ ಈ ಮಾತು ನಿಜ ಆಗ್ತಿದೆಯಾ..? ಅಂತದೊಂದು ಚರ್ಚೆ ಈಗ ಸ್ಯಾಂಡಲ್ವುಡ್ನಲ್ಲಿ ಶುರುವಾಗಿದೆ. ಯಾಕಂದ್ರೆ ರಾಕಿಂಗ್ ಸ್ಟಾರ್ ಯಶ್ ತನ್ನ ಟಾಕ್ಸಿಕ್ ಸಿನಿಮಾಗಾಗಿ ಬಾಲಿವುಡ್ನ ಬಿಗ್ ಸ್ಟಾರ್ರನ್ನ ಕರೆತರುತ್ತಿದ್ದಾರೆ. ಯಶ್ರ ಟಾಕ್ಸಿಕ್ನಲ್ಲಿ ಬಾಲಿವುಡ್ನ ಕಿಂಗ್ ಖಾನ್ ಶಾರುಖ್ ನಟಿಸುತ್ತಾರೆ ಅನ್ನೋ ಸುದ್ದಿ ಸದ್ದು ಮಾಡುತ್ತಿದೆ. ಯಶ್ ನಟಿಸುತ್ತಿರೋ ಟಾಕ್ಸಿಕ್ ಸಿನಿಮಾ ಪ್ಯಾನ್ ವರ್ಲ್ಡ್ ಮಾರ್ಕೇಟ್ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ಪ್ಯಾನ್ ವರ್ಲ್ಡ್ನಲ್ಲಿ ಹೆಸರು ಮಾಡಿರೋ ಕಲಾವಿಧರು ಈ ಸಿನಿಮಾನಲ್ಲಿ ನಟಿಸಬೇಕಿದೆ. ಹೀಗಾಗಿ ಯಶ್ ಆ್ಯಂಡ್ ಟೀಂ ಇಂಡಿಯಾದ ಟಾಪ್ ಸ್ಟಾರ್ಗಳನ್ನ ಟಾಕ್ಸಿಕ್ಗೆ ಕರೆತರೋ ಪ್ರಯತ್ನದಲ್ಲಿರೋದಂತು ನಿಜ. 

ಆ ಲೀಸ್ಟ್‌ನಲ್ಲಿ ಈಗ ಮೊದಲಿಗೆ ಸಿಕ್ಕಿರೋ ಹೆಸರು ನಟ ಶಾರುಖ್ ಖಾನ್. ವರದಿಗಳ ಪ್ರಕಾರ, ಚಿತ್ರತಂಡದವರು ಈಗಾಗಲೇ ಶಾರುಖ್ ಖಾನ್ ಜೊತೆ ಮಾತುಕತೆ ನಡೆಸಿದ್ದಾರೆ. ಅತಿಥಿ ಪಾತ್ರ ಮಾಡುವಂತೆ ಅವರ ಬಳಿ ಕೇಳಲಾಗಿದೆ ಎಂಬ ಸುದ್ದಿ ಹರಡಿದೆ. ಟಾಕ್ಸಿಕ್ಗೆ ನಟ ಯಶ್ ಕೂಡ ಬಂಡವಾಳ ಹೂಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಜೊತೆ ಯಶ್ ಕೈ ಜೋಡಿಸಿದ್ದು 150 ರಿಂದ 200 ಕೋಟಿ ಬಂಡವಾಳದಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ.  ಗೀತು ಮೋಹನ್ ದಾಸ್ ಗೋವಾ ಡ್ರಗ್ ಮಾಫಿಯಾದ ಕಥೆ ಹೆಣೆದಿದ್ದಾರೆ. ಗೋವಾ ಅಂದ್ರೆ ವಿದೇಶಿಗರಿಗೆ ಹಾಟ್ಸ್ಪಾಟ್. ಅಲ್ಲಿ ನಡೆಯೋ ಡ್ರಗ್ಸ್ ದಂದೆಯ ಕರಾಳಮುಖವನ್ನ ವರ್ಲ್ಡ್ ವೈಡ್ ರೀಚ್ ಮಾಡೋ ಐಡಿಯಾ ಯಶ್ ಹಾಗು ನಿರ್ದೇಶಕಿ ಗೀತೂ ಮೋಹನ್ ದಾಸ್ರದ್ದು. ಈ ಸ್ಟೋರಿಗೆ ಪರಭಾಷೆಯೆಯ ದಿಗ್ಗಜರು ಎಂಟ್ರಿ ಕೊಟ್ರೆ ಟಾಕ್ಸಿಕ್ ಇನ್ನೊಂದು ಲೆವೆಲ್ಗೆ ರೀಚ್ ಆಗೋದ್ರಲ್ಲಿ ನೋ ಡೌಟ್. ಟಾಕ್ಸಿಕ್ ಕ್ರೇಜ್ ಮುಗಿಲು ಮುಟ್ಟೋದು ಗ್ಯಾರಂಟಿ.

05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
Read more