ಫಸ್ಟ್ ಡೇ ಹ್ಯಾಟ್ರಿಕ್ ಬಾರಿಸಿದ ಡಂಕಿ..! ಶಾರುಖ್ ಖಾನ್‌ ನೋಡಿ ಫಿದಾ ಆದ ಪ್ರೇಕ್ಷಕ..!

ಫಸ್ಟ್ ಡೇ ಹ್ಯಾಟ್ರಿಕ್ ಬಾರಿಸಿದ ಡಂಕಿ..! ಶಾರುಖ್ ಖಾನ್‌ ನೋಡಿ ಫಿದಾ ಆದ ಪ್ರೇಕ್ಷಕ..!

Published : Dec 22, 2023, 10:38 AM IST

2023 ವರ್ಷದಲ್ಲಿ ಬ್ಯಾಕ್ ಟು ಬ್ಯಾಕ್ ಸಕ್ಸಸ್ ಮೂವಿಸ್ ಕೊಟ್ಟ ಶಾರುಖ್ ಖಾನ್‌ ಅವರ ಮತ್ತೊಂದು ಸಿನಿಮಾ ತೆರೆಗೆ ಬಂದಪ್ಪಳಿಸಿದೆ. ಅದುವೇ ಡಂಕಿ.. ಹೌದು, ಬಹುನಿರೀಕ್ಷಿತ ಡಂಕಿ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಿದೆ. ವಿಶ್ವಾದ್ಯಂತ ಇರುವ ಶಾರುಖ್ ಖಾನ್‌ ಅಭಿಮಾನಿಗಳು ಈ ಡಂಕಿ ಸಿನಿಮಾಗಾಗಿ ಕಾಯುತ್ತಿದ್ದರು.

ನ್ಯೂಜಿಲೆಂಡ್‌ನಲ್ಲಿ ಫಸ್ಟ್ ಶೋ ನಡೆದಿದ್ದು ಅಲ್ಲಿನ ಸಿನಿಮಾ ಪ್ರೇಕ್ಷಕರು ಟ್ವಿಟರ್ ಮೂಲಕ ತಮ್ಮ ಪ್ರತಿಕ್ರಿಯೆ ಕೊಟ್ಟರು. ಸಿನಿಮಾ ಪ್ರಿಯರು ಶಾರುಖ್( Shah Rukh Khan ) ಹಾಗೂ ರಾಜ್‌ಕುಮಾರ್ ಹೀರಾನಿ(Rajkumar Hirani ) ಅವರನ್ನು ಹೊಗಳಿದ್ದಾರೆ. ಡಂಕಿ(Dunki) ಮೂಲಕ ಒಂದು ದೇಶಭಕ್ತಿ ಸಿನಿಮಾ ಕೊಟ್ಟಿದ್ದಕ್ಕೆ ಚಪ್ಪಾಳೆ ತಟ್ಟಿದ್ದಾರೆ. ವಿಕ್ಕಿ ಕೌಶಲ್ ಅಂತೂ ತಮ್ಮ ಅಭಿನಯದಿಂದ ಪ್ರೇಕ್ಷಕರನ್ನು ಮೋಡಿ ಮಾಡುತ್ತಾರೆ ಎನ್ನಲಾಗಿದೆ. ಮೊದಲ ದಿನವೇ ಡಂಕಿ ಸಿನಿಮಾ ನೋಡಲು ಪ್ರೇಕ್ಷಕರ ತುಂಬಾ ಉತ್ಸುಕರಾಗಿದ್ದಾರೆ. ಚಿತ್ರ ವೀಕ್ಷಣೆಗೆ ಮುಂಗಡ ಟಿಕೆಟ್(Ticket) ಬುಕ್ಕಿಂಗ್‌ ಕೂಡ ಜೋರಾಗಿದೆ. ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್‌ನಿಲ್ಕ್‌ನ ವರದಿಗಳ ಪ್ರಕಾರ, ಮೊದಲ ದಿನ ಡಂಕಿ ಸುಮಾರು 25 ರಿಂದ 30 ಕೋಟಿ ರೂಪಾಯಿ ಗಳಿಸುವ ಸಾಧ್ಯತೆ ಹೆಚ್ಚಿದೆ. ಭಾರತದಲ್ಲಿ ಡಂಕಿ ಸರಿಸುಮಾರು 4,000 ಚಿತ್ರಮಂದಿಗಳಲ್ಲಿ ಬಿಡುಗಡೆಯಾಗಿದ್ದು, ಮೊದಲ ದಿನವೇ 15,000 ಪ್ರದರ್ಶನಗಳು ಕಾಣಲಿವೆ. ಆರಂಭದ ದಿನವೇ ಡಂಕಿ ನಿರೀಕ್ಷೆಗೂ ಮೀರಿ ಭರ್ಜರಿ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ. PK ಸಿನಿಮಾ ಆರಂಭಿಕ ದಿನದಲ್ಲಿ 26 ಕೋಟಿ ರೂ. ಗಳಿಸಿತ್ತು. ಡಂಕಿ ಚಿತ್ರದ ಕಲೆಕ್ಷನ್ ದಾಖಲೆಯನ್ನು ಮುರಿಯಲಿದ್ದು, ಮೊದಲ ದಿನವೇ 34.25 ಕೋಟಿ ರೂ. ಹೆಚ್ಚು ಗಳಿಕೆ ಮಾಡಲಿದೆ ಎಂದು ಅಂದಾಜು ಮಾಡಲಾಗಿದೆ. ಡಂಕಿ ಚಿತ್ರಕ್ಕಾಗಿ ಮುಂಗಡ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದ್ದು, ಮೊದಲ ದಿನವೇ 5,58,766 ಟಿಕೆಟ್‌ಗಳು ಬುಕ್ ಆಗಿವೆ. PVR, ಐನಾಕ್ಸ್ ಮತ್ತು ಸಿನೆಪೊಲಿಸ್‌ನಿಂದ ಟಿಕೆಟ್ಗಳು ಮಾರಾಟವಾಗಿವೆ. ಮುಂಗಡ ಬುಕ್ಕಿಂಗ್‌ಗಳ ವಿಷಯದಲ್ಲಿ ಶಾರುಖ್ ಖಾನ್ ಚಲನಚಿತ್ರವು ಹವಾ ಸೃಷ್ಟಿ ಮಾಡಿದೆ. ಡಂಕಿ ಚಿತ್ರವು ಮುಂಗಡ ಬುಕಿಂಗ್ನಿಂದ ಒಟ್ಟು 15.41 ಕೋಟಿ ರೂ. ಗಳಿಕೆ ಮಾಡಿದೆ.

ಇದನ್ನೂ ವೀಕ್ಷಿಸಿ:  ‘ಸಲಾರ್’ ಅಬ್ಬರಕ್ಕೆ ಬ್ರೇಕ್ ಹಾಕೋದಕ್ಕೆ ‘ಡಂಕಿ’ ಮಾಸ್ಟರ್ ಪ್ಲಾನ್..? ಹೊಂಬಾಳೆ ಫಿಲ್ಮ್ಸ್‌ಗೆ ಆಗ್ತಿದೆಯಾ ಅನ್ಯಾಯ..!

05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
Read more