‘ಗ್ರಾಮಾಯಣ’ ಸಿನಿಮಾಗೆ ಚಾಲನೆ: ಹಳ್ಳಿ ಹೈದನಾಗಿ ಗಾಜನೂರ ಕುಡಿ

‘ಗ್ರಾಮಾಯಣ’ ಸಿನಿಮಾಗೆ ಚಾಲನೆ: ಹಳ್ಳಿ ಹೈದನಾಗಿ ಗಾಜನೂರ ಕುಡಿ

Published : Jun 10, 2023, 02:07 PM IST

‘ಗ್ರಾಮಾಯಣ’ ಸಿನಿಮಾದ ಮುಹೂರ್ತ ಸಮಾರಂಭವು, ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿದೆ. ಈ ಚಿತ್ರದಲ್ಲಿ ವಿನಯ್ ರಾಜಕುಮಾರ್ ನಾಯಕರಾಗಿ ನಟಿಸುತ್ತಿದ್ದಾರೆ. ಅನೇಕ ಸ್ಟಾರ್‌ ನಟರು ಸಿನಿಮಾಗೆ ಹಾರೈಸಿದ್ದಾರೆ.
 

ಗ್ರಾಮಾಯಣ ಸಿನಿಮಾ ಕೆಲ ವರ್ಷಗಳ ಹಿಂದೆ ಘೋಷಣೆಯಾಗಿ ಟೀಸರ್ ಕೂಡ ರಿವೀಲ್ ಆಗಿತ್ತು. ವಿನಯ್ ರಾಜ್ ಕುಮಾರ್, ಗ್ರಾಮಾಯಣದಲ್ಲಿ ಹಳ್ಳಿ ಹೈದನಾಗಿ ಕಾಣಿಸಿದ್ರು. ಅಣ್ಣಾವ್ರ ಹುಟ್ಟೂರು ಗಾಜನೂರಿನಲ್ಲಿ ಶುರುವಾಗಬೇಕಿದ್ದ ಗ್ರಾಮಾಯಣ ಕೊನೆಗೆ ಅದ್ಯಾಕೋ ಸೈಲೆಂಟ್ ಆಗಿತ್ತು. ಭರ್ತಿ ಮೂರು ವರ್ಷಗಳ ಬಳಿಕ, ಇದೀಗ ಗ್ರಾಮಾಯಣ ಅದ್ದೂರಿಯಾಗಿ ಟೇಕಾಫ್ ಆಗಿದೆ. ಜಿ. ಮನೋಹರ್ ನಾಯ್ಡು ನಿರ್ಮಾಣ, ದೇವನೂರು ಚಂದ್ರು ನಿರ್ದೆಶನದ ಈ ಸಿನಿಮಾಗೆ, ಬೆನ್ನೆಲುಬಾಗಿ ನಿಂತಿರುವವರು ಖ್ಯಾತ ನಿರ್ಮಾಪಕ ಕೆ.ಪಿ.ಶ್ರೀಕಾಂತ್. ಅವರೇ ಮುಂದೆ ನಿಂತು ಮುಹೂರ್ತ ಸಮಾರಂಭವನ್ನು ಅಚ್ಚುಕಟ್ಟಾಗಿ ಮಾಡಿ ಅರ್ಧಕ್ಕೆ ನಿಂತಿದ್ದ ಸಿನಿಮಾಗೆ ಮರು ಜೀವ ಕೊಟ್ಟಿದ್ದಾರೆ. ಅಶ್ವಿನಿ ಪುನೀತ್ ಕ್ಯಾಮೆರಾ ಚಾಲನೆ ಮಾಡಿದ್ರೆ, ರಿಯಲ್ ಸ್ಟಾರ್ ಉಪ್ಪಿ ಫಸ್ಟ್ ಶಾರ್ಟ್’ಗೆ ಕ್ಲಾಪ್ ಮಾಡಿದ್ರು. ನಟರಾದ ದುನಿಯಾ ವಿಜಯ್, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ರಾಜ್.ಬಿ. ಶೆಟ್ಟಿ, ನಿರ್ದೆಶಕರಾದ ಪವನ್ ಒಡೆಯರ್, ಆರ್.ಚಂದ್ರು, ಸಿಂಪಲ್ ಸುನಿ ಸೇರಿದಂತೆ ಅನೇಕ ಸ್ಟಾರ್‌ಗಳು ದೊಡ್ಮನೆ ಕುಡಿಯ ಗ್ರಾಮಾಯಣಕ್ಕೆ ಮನದುಂಬಿ ಹಾರಿಸಿದ್ದಾರೆ.
 

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more