ಸಲ್ಮಾನ್ ಖಾನ್ ಸೆಕ್ಯುರಿಟಿಗೆ ಕೋಟಿ ಕೋಟಿ ವೆಚ್ಚ: 25 ಭದ್ರತಾ ಸಿಬ್ಬಂದಿ, 4 NSG ಕಮಾಂಡೋ, ಬುಲೆಟ್ ಪ್ರೂಫ್ ಕಾರ್!

ಸಲ್ಮಾನ್ ಖಾನ್ ಸೆಕ್ಯುರಿಟಿಗೆ ಕೋಟಿ ಕೋಟಿ ವೆಚ್ಚ: 25 ಭದ್ರತಾ ಸಿಬ್ಬಂದಿ, 4 NSG ಕಮಾಂಡೋ, ಬುಲೆಟ್ ಪ್ರೂಫ್ ಕಾರ್!

Published : Oct 18, 2024, 12:43 PM IST

ಬಿಷ್ಣೋಯ್ ಸಮುದಾಯದವನಾದ ಲಾರೆನ್ಸ್ ಬಿಷ್ಣೋಯ್  ಕೃಷ್ಣಮೃಗ ಬೇಟೆಯಾಡಿದ ಸಲ್ಮಾನ್​ನ ಬೇಟೆಯಾಡ್ತೀನಿ ಅಂತ ಪಣ ತೊಟ್ಟಿದ್ದಾನೆ. ಈಗಾಗ್ಲೇ ಈ ಬಿಷ್ಣೋಯ್ ಗ್ಯಾಂಗ್​ನಿಂದ ಸಲ್ಮಾನ್​ ಮೇಲೆ ಗಲವು ಬಾರಿ ಅಟ್ಯಾಕ್ ಮಾಡೋ ಪ್ರಯತ್ನ ಆಗಿವೆ. 

ಮಹಾರಾಷ್ಟ್ರದ  ಮಾಜಿ ಸಚಿವ  ಹಾಗೂ ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ ಕೊಲೆ ನಂತರ ಸಲ್ಮಾನ್ ಖಾನ್​ ಭದ್ರತೆಯನ್ನ ಹೆಚ್ಚಿಸಲಾಗಿದೆ. ಸರ್ಕಾರದಿಂದಲೇ ಸಲ್ಮಾನ್​ಗೆ ವೈ ಪ್ಲಸ್ ಸೆಕ್ಯುರಿಟಿ ನೀಡಲಾಗಿದೆ. ಹಾಗಾದ್ರೆ ಈ ಸೆಕ್ಯುರಿಟಿಯಲ್ಲಿ ಎಷ್ಟು ಸಿಬ್ಬಂದಿ ಇರ್ತಾರೆ.. ಏನೆಲ್ಲಾ ಸೇಫ್ಟಿ ಇರುತ್ತೆ.. ಮತ್ತಿದಕ್ಕೆ ಎಷ್ಟು ಕೋಟಿ ಹಣ ವೆಚ್ಚ ಮಾಡಲಾಗ್ತಾ ಇದೆ ಗೊತ್ತಾ..? ಬಾಲಿವುಡ್ ಟೈಗರ್ ಸಲ್ಮಾನ್ ಖಾನ್​ಗಿರೋ ಭದ್ರತೆಯನ್ನ ಹೆಚ್ಚಿಸಲಾಗಿದೆ. ಇತ್ತೀಚಿಗೆ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಕೊಲೆ ನಡೆದ ಮೇಲೆ ಸಲ್ಲುಮಿಯಾಗಿದ್ದ ಸೆಕ್ಯುರಿಟಿಯನ್ನ ಮತ್ತಷ್ಟು ಟೈಟ್ ಮಾಡಲಾಗಿದೆ. ಮಹಾರಾಷ್ಟ್ರ ಸರ್ಕಾರ ಸಲ್ಮಾನ್​ಗೆ ವೈ ಪ್ಲಸ್ ಸೆಕ್ಯುರಿಟಿಯನ್ನ ಒದಗಿಸಿದೆ. ಬಾಬಾ ಸಿದ್ದಿಕಿ ಹತ್ಯೆ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡ ಇರೋದು ಖಚಿತವಾಗಿದೆ. ಅಸಲಿಗೆ ಈ  ಬಿಷ್ಣೋಯ್ ಗ್ಯಾಂಗ್ ಸಲ್ಮಾನ್ ಖಾನ್​ನ ಹಲವು ವರ್ಷಗಳಿಂದ ಟಾರ್ಗೆಟ್ ಮಾಡಿದೆ. 

ಬಿಷ್ಣೋಯ್ ಸಮುದಾಯದವನಾದ ಲಾರೆನ್ಸ್ ಬಿಷ್ಣೋಯ್  ಕೃಷ್ಣಮೃಗ ಬೇಟೆಯಾಡಿದ ಸಲ್ಮಾನ್​ನ ಬೇಟೆಯಾಡ್ತೀನಿ ಅಂತ ಪಣ ತೊಟ್ಟಿದ್ದಾನೆ. ಈಗಾಗ್ಲೇ ಈ ಬಿಷ್ಣೋಯ್ ಗ್ಯಾಂಗ್​ನಿಂದ ಸಲ್ಮಾನ್​ ಮೇಲೆ ಗಲವು ಬಾರಿ ಅಟ್ಯಾಕ್ ಮಾಡೋ ಪ್ರಯತ್ನ ಆಗಿವೆ. ಸದ್ಯ ಸಲ್ಮಾನ್​ಗೆ ಅತ್ಯಾಪ್ತನಾಗಿದ್ದ ಬಾಬಾ ಸಿದ್ದಿಕಿ ಕೊಲೆಯಾದ ಮೇಲಂತೂ ಸಲ್ಮಾನ್​ ಎದೆಬಡಿತ ಹೆಚ್ಚಾಗಿದೆ. ಯಾವಾಗ ತನ್ನ ಮೇಲೆ ಅಟ್ಯಾಕ್ ಆಗುತ್ತೋ ಅಂತ ಜೀವಭಯದಿಂದ ಸಲ್ಮಾನ್ ತತ್ತರಿಸಿ ಹೋಗಿದ್ದಾರೆ. ಹೌದು ಸದ್ಯ ಸಲ್ಮಾನ್​ಗೆ ಮಹಾರಾಷ್ಟ್ರ ಸರ್ಕಾರ ನೀಡಿರೋ ವೈ ಪ್ಲಸ್ ಸೆಕ್ಯೂರಿಟಿ 25 ಭದ್ರತಾ ಸಿಬ್ಬಂದಿಯನ್ನ ಒಳಗೊಂಡಿದೆ. 

ಇದ್ರಲ್ಲಿ 4 ಜನ ಎನ್.ಎಸ್​.ಜಿ ಕಮಾಂಡೋಸ್ ಇರ್ತಾರೆ. ಅತ್ಯಾಧುನಿಕ ರೈಫಲ್ ಹೊಂದಿರೋ ಇವರು ಅದೆಂಥಾ ಅಟ್ಯಾಕ್ ನಡೆದರೂ ಎದುರಿಸಿ, ರಕ್ಷಿಸಬಲ್ಲ ನೈಪುಣ್ಯ ಹೊಂದಿರ್ತಾರೆ. ಇನ್ನೂ ಸಲ್ಮಾನ್ ಬಳಿ ಕೋಟಿ ಬೆಲೆಬಾಳುವ ಬುಲೆಟ್ ಪ್ರೂಫ್ ಕಾರ್ ಇದೆ. ದುಬೈನಿಂದ ಇಂಪೋರ್ಟ್ ಮಾಡಿಕೊಂಡಿರೋ ಈ ಹೈಸೆಕ್ಯೂರಿಟಿ ಕಾರ್​ನಲ್ಲೇ ಸಲ್ಮಾನ್ ಸಂಚರಿಸ್ತಾರೆ. ಇನ್ನೂ ಅವರ ಭದ್ರತಾ ಸಿಬ್ಬಂದಿಗೂ ಬುಲೆಟ್ ಪ್ರೂಫ್ ಕಾರ್ ನೀಡಲಾಗಿದೆ. ಹೌದು ಮೂಲಗಳ ಪ್ರಕಾರ ಸಲ್ಮಾನ್ ಖಾನ್​ಗೆ ನೀಡಲಾಗೋ ವೈ ಪ್ಲಸ್ ಸೆಕ್ಯೂರಿಟಿಗೆ ತಿಂಗಳಿಗೆ ಕನಿಷ್ಟ 15 ಲಕ್ಷ ಖರ್ಚಾಗುತ್ತೆ. ಜೊತೆಗೆ ಮನೆಗೆ ನೀಡಿರೋ ಭದ್ರತಾ ದಳದ ಸಂಬಳ, ಮನೆ ಬಳಿ  ಅಳವಡಿಸರೋ ಎಐ ಸೆಕ್ಯೂರಿಟಿ ಕ್ಯಾಮರಾ.. ಎಲ್ಲಾ ಸೇರಿದ್ರೆ ವರ್ಷಕ್ಕೆ ಮೂರು ಕೋಟಿ ಸಲ್ಮಾನ್ ಭದ್ರತೆ ಖರ್ಚಾಗ್ತಾ ಇದೆಯಂತೆ. 

ಇಷ್ಟೆಲ್ಲಾ ವೆಚ್ಚವನ್ನ ಸರ್ಕಾರವೇ ಭರಿಸ್ತಾ ಇದೆ. ಕಲಾವಿದನೊಬ್ಬನಿಗೆ ರಕ್ಷಣೆ ಕೊಡೋದು ಸರ್ಕಾರದ ಕರ್ತವ್ಯ. ಸೋ ಸರ್ಕಾರವೇ ಇದರ ಹೊಣೆ ಹೊತ್ಯಿದ್ದು ವರ್ಷಕ್ಕೆ ಮೂರು ಕೋಟಿ ಸಾರ್ವಜನಿಕರ ತೆರಿಗೆ ಹಣ ಈ ಫಿಲ್ಮಿ ಟೈಗರ್ ರಕ್ಷಣೆಗೆ ಬಳಕೆಯಾಗ್ತಾ ಇದೆ.  ಈ ಹಣದ ಲೆಕ್ಕ ಒತ್ತಟ್ಟಿಗಿರಲಿ. ಇಷ್ಟೆಲ್ಲಾ ಭಯ ಇಟ್ಕೊಂಡು, ಭದ್ರತೆಯನ್ನ ಜೊತೆಗಿಟ್ಟುಕೊಂಡು ಸಲ್ಮಾನ್ ಅದ್ಹೇಗೆ ಸಿನಿಮಾಗಳಲ್ಲಿ ಕೆಲಸ ಮಾಡ್ತಾರೆ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ. ಸದ್ಯ ಬಿಗ್ ಬಾಸ್ ನಲ್ಲಿ ಬ್ಯುಸಿಯಾಗಿರೋ ಸಲ್ಮಾನ್ ಸಿಕಂದರ್ ಸಿನಿಮಾದಲ್ಲಿ ನಟಿಸೋಕೆ ಸಜ್ಜಾಗ್ತಾ ಇದ್ದಾರೆ. ಆದ್ರೆ   ಭದ್ರತೆಯ ಕೋಟೆಯೊಳಗೆ  ಬಂಧಿಯಾಗಿದ್ದುಕೊಂಡೇ ಸಲ್ಮಾನ್ ನಟನೆ ಮಾಡಬೇಕಿದೆ. ಕಾಡುವ ಜೀವಭಯದ ನಡುವೆಯೂ ತೆರೆ ಮೇಲೆ ಟೈಗರ್ ತರಹ ಘರ್ಜಿಸಬೇಕಿದೆ.

21:03TVK ವಿಜಯೋತ್ಸವ.. ತ್ರಿಷಾ ಜೊತೆ ನಂಟಿಗೆ ಅಧಿಕೃತ ಮುದ್ರೆ? ಇತಿಹಾಸ ಮರೆಸುತ್ತಾರಾ ವಿಜಯ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
04:06ಸಲ್ಲೂಗೆ ಮತ್ತೆ ಕಂಟಕ; ದೇಶಪ್ರೇಮ ತೋರಿಸ್ತೀನಿ ಅಂದ್ರೂ 'ಮಾತೃಭೂಮಿ'ಗೆ ಇದೆಂತಾ ಅಗ್ನಿ ಪರೀಕ್ಷೆ?
08:55ರಾಕಿ ಬಾಯ್ ಡ್ರೀಮ್ ಸಿನಿಮಾದಲ್ಲಿ ಏನೆಲ್ಲಾ ಇದೆ? 'ಟಾಕ್ಸಿಕ್'ನಲ್ಲಿ ಗ್ಯಾಂಗ್​ಸ್ಟರ್​ಮಾತ್ರವಲ್ಲ, ಬೇರೆಯದ್ದೇ ಸ್ಟೋರಿ ಇದೆ!
04:43ಆಲಿಯಾ in ಡ್ರ್ಯಾಗನ್.. ಸೌತ್ ಸಿನಿಇಂಡಸ್ಟ್ರಿಗೆ ಆಲಿಯಾ ಭಟ್ ಕಂಬ್ಯಾಕ್; ಮ್ಯಾನ್ ಆಫ್ ಮಾಸಸ್ ಜೋಡಿಯಾದ ಆಲಿಯಾ!
12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
Read more