Dec 29, 2022, 8:03 PM IST
ಬಾಲಿವುಡ್‌ನ ಮೋಸ್ಟ್ ವಾಂಟೆಡ್ ಬ್ಯಾಚ್ಯೂಲರ್ ಸಲ್ಮಾನ್ ಖಾನ್‌ಗೆ ಗರ್ಲ್ ಫ್ರೆಂಡ್ಸ್ ಒಬ್ರಾ ಇಬ್ರ. ಅವರನ್ನ ಲೆಕ್ಕ ಮಾಡೋದೇ ಕಷ್ಟ. ಆದ್ರೆ ಆಗಾಗ ಸಲ್ಲು ಪ್ರೇಯಸಿಯರು ಮಾಜಿ ಗರ್ಲ್ ಫ್ರೆಂಡ್ಸ್‌ಗಳಾಗಿ ಸಲ್ಮಾನ್ ಖಾನ್ ಜೊತೆ ದರ್ಶನ ಕೊಡ್ತಾನೆ ಇರ್ತಾರೆ. ಇದೀಗ ಮೊನ್ನೆ ಮೊನ್ನೆಯಷ್ಟೆ ಸಲ್ಲು ತನ್ನ 57ನೇ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ಈ ಜನ್ಮದಿನೋತ್ಸವದಲ್ಲಿ ಯಾರೂ ನಿರೀಕ್ಷೆ ಮಾಡದ ಸಲ್ಲು ಎಕ್ಸ್ ಗರ್ಲ್ ಫ್ರೆಂಡ್ ಒಬ್ರು ಭಾಗಿ ಆಗಿದ್ರು. ಅವ್ರೇ ಸಂಗೀತಾ ಬಿಜಲಾನಿ.. ಮಿನಿ ಡ್ರೆಸ್ ಧರಿಸಿ ಪಾರ್ಟಿಗೆ ಬಂದಿದ್ದ ಸಂಗೀತಾರನ್ನ ಸಲ್ಮಾನ್ ಖಾನ್ ಹಗ್ ಮಾಡಿ ಕಿಸ್ ಕೊಟ್ಟು ಪ್ರೀತಿ ವ್ಯಕ್ತಪಡಿಸಿದ್ದಾರೆ. ಇದೀಗ ಇವರಿಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment