Salaar : ಮೂರೇ ದಿನಕ್ಕೆ 400 ಕೋಟಿ ಬಾಚಿದ ‘ಸಲಾರ್’? ಹಿಂದಿ, ತೆಲುಗಿನಲ್ಲಿ ಸಖತ್ ಕಲೆಕ್ಷನ್ !

Dec 26, 2023, 11:03 AM IST

ನಟ ಪ್ರಭಾಸ್ (Prabhas) ಅಭಿನಯದ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel)ನಿರ್ದೇಶನದ 'ಸಲಾರ್' ಸಿನಿಮಾ ಬಾಕ್ಸ್​ ಆಫೀಸ್‌​ನಲ್ಲಿ ದಾಖಲೆ ಬರೆಯುತ್ತಿದೆ. ಡಿಸೆಂಬರ್​ 22ರಂದು ತೆರೆ ಕಂಡ ಚಿತ್ರ ಉತ್ತಮ​ ಕಲೆಕ್ಷನ್​ನೊಂದಿಗೆ ಪ್ರದರ್ಶನ ಮುಂದುವರೆಸಿದೆ. ಅಲ್ಲದೇ ಮೂರೇ ದಿನಕ್ಕೆ ಈ ಸಿನಿಮಾ ಸುಮಾರು 400 ಕೋಟಿಯಷ್ಟು ಕಲೆಕ್ಷನ್‌ ಮಾಡಿದೆಯಂತೆ. ಒಟ್ಟಿನಲ್ಲಿ ಈ ಸಿನಿಮಾ ಹೊಂಬಾಳೆ ಫಿಲ್ಮ್ಸ್‌ಗೆ (Hombale Films) ಲಕ್‌ನನ್ನೇ ತಂದು ಕೊಟ್ಟಿದೆ ಎಂದು ಹೇಳಬಹುದು. ತೆಲುಗು, ತಮಿಳು, ಹಿಂದಿಯವರು ಎಲ್ಲಾರೂ ಈ ಸಿನಿಮಾವನ್ನು ಮೆಚ್ಚಿಕೊಂಡ್ರು, ಆದ್ರೆ ಕನ್ನಡಿಗರು ಮಾತ್ರ ನೆಗೆಟಿವ್‌ ಆಗೆ ಮಾತನಾಡಿದ್ದಾರೆ. ಮೊದಲ ದಿನ ಅತಿ ಹೆಚ್ಚುಗಳಿಕೆ ಕಂಡ 2023ರ ಭಾರತೀಯ ಸಿನಿಮಾ ಇದಾಗಿದೆ. 

ಇದನ್ನೂ ವೀಕ್ಷಿಸಿ:  Shivaraj Kumar: ಕೆಸಿಸಿ ಕ್ರಿಕೆಟ್ ಮೈದಾನದಲ್ಲಿ ಟಗರು ಹಾಡಿಗೆ ಮಸ್ತ್‌ ಡ್ಯಾನ್ಸ್‌ ಮಾಡಿದ ಶಿವಣ್ಣ! ವಿಡಿಯೋ ವೈರಲ್‌