RRR Event: ಪುನೀತ್ ನೆನಪಿನೊಂದಿಗೆ 'ಆರ್‌ಆರ್‌ಆರ್‌' ಗುಟ್ಟು ಬಿಚ್ಚಿಟ್ಟ ರಾಮ್‌ಚರಣ್

RRR Event: ಪುನೀತ್ ನೆನಪಿನೊಂದಿಗೆ 'ಆರ್‌ಆರ್‌ಆರ್‌' ಗುಟ್ಟು ಬಿಚ್ಚಿಟ್ಟ ರಾಮ್‌ಚರಣ್

Published : Mar 21, 2022, 12:38 PM IST

'ಆರ್‌ಆರ್‌ಆರ್‌' ಚಿತ್ರದ  ಪ್ರೀ-ರಿಲೀಸ್ ಈವೆಂಟ್ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್‌ಗೆ 'ಆರ್‌ಆರ್‌ಆರ್‌' ಚಿತ್ರತಂಡ ವಿಶೇಷ ನಮನ ಅರ್ಪಿಸಿದೆ. ಸಿನಿಮಾ ಮಾರ್ಚ್ 25ರಂದು ರಿಲೀಸ್‌ಗೆ ರೆಡಿಯಾಗಿದೆ.

ಎಸ್‌.ಎಸ್‌.ರಾಜಮೌಳಿ (SS Rajamouli) ನಿರ್ದೇಶನದ ಜ್ಯೂ.ಎನ್​ಟಿಆರ್ (Jr NTR) ಮತ್ತು ರಾಮ್​ ಚರಣ್ (Ram Charan)​ ಕಾಂಬಿನೇಷನ್‌ನ ಬಹು ನಿರೀಕ್ಷಿತ ಚಿತ್ರ 'ಆರ್‌ಆರ್‌ಆರ್‌' (RRR) (ರೌದ್ರ-ರಣ-ರುಧಿರ) ಸಿನಿಮಾ ಮಾರ್ಚ್ 25ರಂದು ರಿಲೀಸ್‌ಗೆ ರೆಡಿಯಾಗಿದೆ. ಈ ಮಧ್ಯೆ 'ಆರ್‌ಆರ್‌ಆರ್‌' ಚಿತ್ರದ ಭರ್ಜರಿ ಪ್ರಚಾರಕ್ಕೆ ಚಿಕ್ಕಬಳ್ಳಾಪುರದಲ್ಲಿ ಶನಿವಾರ ಭರ್ಜರಿಯಾಗಿ ಪ್ರೀ-ರಿಲೀಸ್ ಈವೆಂಟ್ ಕಾರ್ಯಕ್ರಮ ನಡೆಯಿತು. ಚಿತ್ರದ ನಿರ್ದೇಶಕ ಎಸ್‌.ಎಸ್‌. ರಾಜಮೌಳಿ ಚಾಲನೆ ನೀಡಿದರು. ಈ ಕಾರ್ಯಕ್ರಮ ಚಿಕ್ಕಬಳ್ಳಾಪುರ ನಗರದ ಹೊರ ವಲಯದ ಅಗಲಗುರ್ಕಿ ಸಮೀಪ ಚಿಕ್ಕನಹಳ್ಳಿ ಕ್ರಾಸ್‌ನಲ್ಲಿ ಬರೋಬ್ಬರಿ 70 ಎಕರೆ ಪ್ರದೇಶದಲ್ಲಿ ಪ್ರಿ ರಿಲೀಸ್‌ ಇವೆಂಟ್‌ ನಡೆಯಿತು.

RRR Movie: ಪ್ರೀ-ರಿಲೀಸ್ ಈವೆಂಟ್‌ಗೂ ಮುನ್ನ ನಿರ್ದೇಶಕರು ಹಾಗೂ ನಟರ ನಡುವೆ ನಡೆದಿದ್ದೇನು ಗೊತ್ತಾ?

ಈ ವರ್ಣರಂಜಿತ ಈ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್‌ಗೆ (Puneeth Rajkumar) 'ಆರ್‌ಆರ್‌ಆರ್‌' ಚಿತ್ರತಂಡ ವಿಶೇಷ ನಮನ ಅರ್ಪಿಸಿದೆ. ವಿಶೇಷವಾಗಿ ರಾಮ್‌ ಚರಣ್‌ ಪುನೀತ್ ಅವರನ್ನು ನೆನಪಿಸಿಕೊಂಡು ತಮ್ಮ ಮಾತನ್ನು ಶುರುಮಾಡಿದರು. ಮಾತ್ರವಲ್ಲದೇ ಪುನೀತ್ ನನ್ನ ಅಣ್ಣ, ಅವರು ನಮ್ಮ ಮನೆಯ ಸದಸ್ಯ. ಅವರು ಇಲ್ಲ ಎಂಬುದನ್ನು ನಾನು ನಂಬುವುದಿಲ್ಲ. ತಾರಕ್‌ ಅಣ್ಣ ಹೇಳಿದ ಹಾಗೆ ಪುನೀತ್ ಇಲ್ಲೆ ಎಲ್ಲೋ ನಮ್ಮನ್ನು ಆಶಿರ್ವಾದಿಸುತ್ತಿದ್ದಾರೆ ಎಂದು ಹೇಳಿದರು. ಹಾಗೆಯೇ ಜ್ಯೂ.ಎನ್‌ಟಿಆರ್‌, ನಿರ್ದೇಶಕ ರಾಜಮೌಳಿ, ಸಂಗೀತ ನಿರ್ದೇಶಕ ಎಂಎಂ.ಕೀರವಾಣಿ ಚಿತ್ರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more