ಕನ್ನಡ ಟೀಚರ್ ಆದ ತೆಲುಗಿನ 'ಶ್ರೀವಲ್ಲಿ': ಬಿಟೌನ್ ಸ್ಟಾರ್‌ಗೆ ರಶ್ಮಿಕಾ ಕನ್ನಡ ಪಾಠ..!

ಕನ್ನಡ ಟೀಚರ್ ಆದ ತೆಲುಗಿನ 'ಶ್ರೀವಲ್ಲಿ': ಬಿಟೌನ್ ಸ್ಟಾರ್‌ಗೆ ರಶ್ಮಿಕಾ ಕನ್ನಡ ಪಾಠ..!

Published : Nov 25, 2023, 11:46 AM IST

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ, ಸದಾ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿರ್ತಾರೆ.. ಹಲವು ಬಾರಿ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗುವ ಕಿರಿಕ್ ಬ್ಯೂಟಿ, ಇದೀಗ ಬಾಲಿವುಡ್ ಸ್ಟಾರ್ ನಟನಿಗೆ ಕನ್ನಡ ಹೇಳಿಕೊಟ್ಟು, ಕನ್ನಡಿಗರೂ ಅಚ್ಚರಿಪಡುವಂತೆ ಮಾಡಿದ್ದಾರೆ. 
 

ಶ್ರೀವಲ್ಲಿ ರಶ್ಮಿಕಾ ಮಂದಣ್ಣ. ತೆಲುಗು ಚಿತ್ರರಂಗದ ಸ್ಟಾರ್ ಹೀರೋಗಳ ಅಭಿಮಾನಿಗಳಿಗೆ ಇವರೇ ಮನದನ್ನೆ. ಕನ್ನಡ ಚಿತ್ರರಂಗದಲ್ಲಿ ಡೆಬ್ಯೂ ಆಗಿ ಪಕ್ಕದ ತೆಲುಗು ನಾಡಿನಲ್ಲಿ ಬೆಳೆದು ನಾನು ಪಕ್ಕಾ ತೆಲುಗು ಪಿಲ್ಲ ಅಂತ ಹೇಳಿಕೊಂಡು ಓಡಾಡ್ತಿದ್ದ ಅಪ್ಪಟ ನಟಿ. ನನಗೆ ತಾಯಿ ಭಾಷೆ ಕನ್ನಡವನ್ನೇ ಸರಿಯಾಗಿ ಮಾತಾಡೋಕೆ ಬರೋಲ್ಲ ಅಂತ ಹೇಳಿ ದೊಡ್ಡ ವಿವಾದಕ್ಕೆ ಕನ್ನಡಿಗರ ಆಕ್ರೋಶ ಸಿಟ್ಟಿಗೆ ರಶ್ಮಿಕಾ ಗುರಿಯಾಗಿದ್ದನ್ನ ಎಂದಾದ್ರು ಮರೆಯೋಕೆ ಸಾಧ್ಯನಾ..? ಶ್ರೀವಲ್ಲಿ ರಶ್ಮಿಕಾ(Rashmika) ಅಪ್ಪಟ ಕನ್ನಡತಿ ಅನ್ನೋದು ನಿಮ್ಗೆ ಗೊತ್ತು. ಹುಟ್ಟಿ ಬೆಳೆದಿದ್ದೆಲ್ಲಾ ಕರ್ನಾಟಕದಲ್ಲೇ (Karnataka) ಆದ್ರೆ ಅದ್ಯಾಕ್ ಕನ್ನಡ ಅಂದ್ರೆ ರಶ್ಮಿಕಾಗೆ ಅಷ್ಟು ಅಸೆಡ್ಡೆಯೋ ಗೊತ್ತಿಲ್ಲ. ನನಗೆ ಕನ್ನಡ(Kannada) ಮಾತನಾಡೋಕೆ ಬರೋಲ್ಲ ಅಂತ ಹೇಳಿ ವಿವಾದ ಸೃಷ್ಟಿಸಿದ್ರು. ಆದ್ರೆ ರಶ್ಮಿಕಾ ಈಗ ಅಪ್ಪಟ ಕನ್ನಡ ಟೀಸರ್ ಆಗಿ ಬಂದಿದ್ದಾರೆ. ಬಾಲಿವುಡ್ನ ಸ್ಟಾರ್ ನಟ ರಣ್ವೀರ್ ಕಪೂರ್ಗೆ ಕನ್ನಡ ಹೇಳಿಕೊಟ್ಟು ಪಾಠ ಮಾಡಿದ್ದಾರೆ. ನಾನು ನುಡಿ ಭಾಷೆ ಜಲ ಅಂತ ಬಂದ್ರೆ ನಮ್ ತನವನ್ನ ನಾವ್ ಬಿಟ್ ಕೊಡಲ್ಲ. ಆದ್ರೆ ರಶ್ಮಿಕಾಗೆ ಅದ್ಯಾವ್ದು ಇಷ್ಟು ದಿನ ಬೇಕಿರಲಿಲ್ಲ. ಭಟ್ ಈಗ ಸಡನ್ ಆಗಿ ಲಿಲ್ಲಿಗೆ ಕನ್ನಡ ನೆನಪಾಗಿದೆ. ಹಿಂದಿಯಲ್ಲಿ ರಣ್ವೀರ್ ಸಿಂಗ್ ಜತೆ ಅನಿಮಲ್ ಸಿನಿಮಾದಲ್ಲಿ ನಟಿಸಿರೋ ರಶ್ಮಿಕಾ ಆ ಸಿನಿಮಾದ ಪ್ರಚಾರದ ವೇಳೆ ರಣ್ವೀರ್ಗೆ ಕನ್ನಡ ಹೇಳಿಕೊಟ್ಟಿದ್ದಾರೆ. ಆ ವೀಡಿಯೋ ಈಗ ವೈರಲ್ ಆಗುತ್ತಿದೆ. ರಶ್ಮಿಕಾ ರನ್ವೀರ್ಗೆ ಕನ್ನಡ ಹೇಳಿಕೊಟ್ಟಿದ್ದನ್ನ ನೋಡಿದ ಕನ್ನಡಿಗರು ಲಿಲ್ಲಿಗೆ ಇಷ್ಟೊಂದು ಪ್ರೀತಿನಾ ಅಂತ ಆಶ್ಚರ್ಯ ಪಡ್ಬೇಡಿ. ಅಟ್ ದಿ ಟೈ ತೆಲುಗು ಭಾಷೆಯನ್ನೂ ಹೇಳಿಕೊಟ್ಟಿದ್ದಾರೆ ಶ್ರೀವಲ್ಲಿ. ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ( Ranveer Kapoor)ಸ್ವಚ್ಛ ಕನ್ನಡಲ್ಲಿ ಎಲ್ಲರಿಗೂ ನಮಸ್ಕಾರ ಎಂದಿದ್ದಾರೆ. ಅನಿಮಲ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ತೆಲುಗು ಅಮ್ಮಾಯಿಯಾಗಿ ನಟಸಿಸಿದ್ದಾರೆ. ಹೀಗಾಗಿ ತೆಲುಗುನನ್ನ ಬಿಟ್ಟುಕೊಟ್ಟಿಲ್ಲ ರಶ್ಮಿಕಾ. ಆದ್ರೆ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ಕಿರಿಕ್ ಬ್ಯೂಟಿ, ಕನ್ನಡ ಮಾತಾಡದೇ ಅನೇಕ ಸಲ ಕನ್ನಡಿಗರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ.. ಈಗ ಕನ್ನಡ ಭಾಷೆಯನ್ನ ಬಾಲಿವುಡ್ ನಟರಿಗೆ ಹೇಳಿಕೊಡುವ ಮೂಲಕ, ಅಚ್ಚರಿಮೂಡಿಸಿದ್ದಾರೆ.

ಇದನ್ನೂ ವೀಕ್ಷಿಸಿ:  3 ತಿಂಗಳ ಬಳಿಕ ಮತ್ತೆ ತೆರೆ ಮೇಲೆ ಬಂದ ರಾಜ್ ಬಿ ಶೆಟ್ಟಿ..! ನಟನ ವಿಭಿನ್ನ ಪಾತ್ರಕ್ಕೆ ಜೈ ಎಂದ ಪ್ರೇಕ್ಷಕ!

02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
05:01ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!
02:31ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ
04:04ವೈರಲ್ ಆದ ಶ್ರೀಲೀಲಾ ಬಾತ್ರೂಮ್ ಫೋಟೋ! ಎಐ, ಡೀಪ್ ಫೇಕ್ ಕಾಟಕ್ಕೆ ಬೇಸತ್ತ ಕಿಸ್ಸಿಕ್ ಬೆಡಗಿ!
04:34ಶ್ರೀಲಂಕಾದಲ್ಲಿ ಶ್ರೀವಲ್ಲಿ ಗ್ಯಾಂಗ್ ಮಸ್ತ್ ಎಂಜಾಯ್: ಮದುವೆ ಮುನ್ನ ಗೆಳತಿಯರ ಜತೆ ಬ್ಯಾಚುಲರ್ ಪಾರ್ಟಿ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
Read more