‘ನನ್ನ ಜೀವನಕ್ಕೆ ಬಂದಿದ್ದಕ್ಕೆ ಧನ್ಯವಾದ’.. ರಶ್ಮಿಕಾ ಮಂದಣ್ಣ ಪ್ರೀತಿ ಸಂದೇಶ ಯಾರಿಗೆ..?

‘ನನ್ನ ಜೀವನಕ್ಕೆ ಬಂದಿದ್ದಕ್ಕೆ ಧನ್ಯವಾದ’.. ರಶ್ಮಿಕಾ ಮಂದಣ್ಣ ಪ್ರೀತಿ ಸಂದೇಶ ಯಾರಿಗೆ..?

Published : Dec 21, 2023, 10:42 AM IST

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಫುಲ್ ಖುಷಿಯಲ್ಲಿದ್ದಾರೆ. ಯಾಕಂದ್ರೆ ಒಂದೆಡೆ ಶ್ರೀವಲ್ಲಿ ನಟಿಸಿದ್ದ ಅನಿಮಲ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬಿಗ್ ಹಿಟ್ ಆಗ್ತಿದೆ. ಮತ್ತೊಂದೆಡೆ ಈಕೆಯ ಬಾಳಲ್ಲಿ ಒಬ್ಬ ವ್ಯಕ್ತಿಯ ಪ್ರವೇಶವೂ ಆಗಿದೆ. ಹೀಗೆ ಎಂಟ್ರಿ ಕೊಟ್ಟವರ ಬಗ್ಗೆ ರಶ್ಮಿಕಾ ಪ್ರೀತಿಯ ಮಾತುಗಳನ್ನೂ ಆಡಿದ್ದಾರೆ. 

ನನ್ನ ಜೀವನದಲ್ಲಿ ಬಂದಿದ್ದಕ್ಕೆ ಧನ್ಯವಾದ ಈ ಮಾತನ್ನು ಸ್ವತಃ ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿಯಾಗಿ ಬರೆದುಕೊಂಡಿದ್ದಾರೆ. ರಶ್ಮಿಕಾ ಬರೆದಿರುವುದು ಎರಡೇ ಎರಡು ಸಾಲುಗಳು. ಆದ್ರೆ ಈ ಸಾಲುಗಳಲ್ಲಿ ತುಂಬಾ ಪ್ರೀತಿ ತುಂಬಿದೆ. ರಶ್ಮಿಕಾ(Rashmika Mandanna) ತನ್ನ ಬಾಳಲ್ಲಿ ಬಂದ ವ್ಯಕ್ತಿಗೆ ಗುಟ್ಟಾಗಿ ಧನ್ಯವಾದ ಹೇಳಿದ್ದಾರೆ. ಇದನ್ನು ನೇರವಾಗಿ ಹೇಳುವ ಬದಲು ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿ ಮಾಡಿದ್ದಾರೆ. ‘ಬಾಳಲ್ಲಿ ಬಂದಿದ್ದಕ್ಕೆ ಧನ್ಯವಾದ’(Thanked) ಅನ್ನೋ ಮಾತನ್ನ ಸಾಮಾನ್ಯವಾಗಿ ಪ್ರೀತಿ(Love), ಅಥವಾ ಮದುವೆಯಾದ ಜೋಡಿ ಹೇಳಿಕೊಳ್ಳೋದು ಸಹಜ. ಹಾಗಾದ್ರೆ, ರಶ್ಮಿಕಾ ಧನ್ಯಾದ ಹೇಳಿದ್ದಾದರೂ ಯಾರಿಗೆ.? ರಶ್ಮಿಕಾ ಮಂದಣ್ಣ ಲೈಫ್ಗೆ ಎಂಟ್ರಿ ಕೊಟ್ಟವರಾರು ಅನ್ನೋದೇ ಈಗ ಕುತೂಹಲ. ರಶ್ಮಿಕಾ ಮಂದಣ್ಣ ಬಾಳಲ್ಲಿ ಎಂಟ್ರಿಕೊಟ್ಟವರ ಪಟ್ಟಿ ತೆಗೆದ್ರೆ ಇಲ್ಲಿ ರಿವಿಲ್ ಆಗೋದು ಇಬ್ಬರ ಹೆಸರು ಮಾತ್ರ. ರಶ್ಮಿಕಾಗೆ ಪರದೆ ಜೊತೆಗೆ ಬಾಳಲ್ಲಿಯೂ ಬಂದ ಮೊದಲ ಹೀರೋ ರಕ್ಷಿತ್ ಶೆಟ್ಟಿ. ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಕ್ಷಿತ್ ರಶ್ಮಿಕಾ ಜೊತೆ ಆದ್ರು. ಬರೀ ಜತೆಯಾಗಿಲ್ಲ ಸಿನಿಮಾ ಮುಗೋ ಹೊತ್ತಿಗೆ ಪ್ರೀತಿಯಲ್ಲಿ ಬಿದ್ದು ಉಂಗುರವನ್ನೂ ಬದಲಿಸಿಕೊಂಡ್ರು. ಆದ್ರೆ ರಕ್ಷಿತ್ ಶೆಟ್ಟಿ, ಬೆಳಗ್ಗೆದ್ದು ಅದ್ಯಾರ ಮುಖವನ್ನು ನೋಡಿದ್ರೋ ಗೊತ್ತಿಲ್ಲ. ಈ ಅಂದಗಾತಿ ಜೊತೆಗಿನ ಪ್ರೀತಿಗೆ ಎಳ್ಳು ನೀರೋ ಬಿಡಬೇಕಾಗಿ ಬಂತು. ಹಾಗಂತ ರಕ್ಷಿತ್ ರಶ್ಮಿಕಾ ಇನ್ನೂ ಮಾತು ಬಿಟ್ಟಿಲ್ಲ. ಆದ್ರೆ ರಕ್ಷಿತ್ಗೆ ರಶ್ಮಿಕಾ ಈ ಲೆಟರ್ ಹಾಕೋಕು ಸಾಧ್ಯವೂ ಇಲ್ಲ. ರಶ್ಮಿಕಾ ಲವ್ ಲೆಟರ್ಗೆ ಫ್ಯಾನ್ಸ್ ಕಟ್ಟುತ್ತಿರೋ ಹೆಸರೇ ಬೇರೆ. ಆ ಹೆಸರೇ ವಿಜಯ್ ದೇವರಕೊಂಡ.

ಇದನ್ನೂ ವೀಕ್ಷಿಸಿ:  ಆ್ಯಕ್ಷನ್ ಪ್ರಿನ್ಸ್ ಧ್ರುವನ 'ಕೆಡಿ' ಆ್ಯಕ್ಷನ್ ಶುರು..! ಹೊಸ ಅಪ್‌ಡೇಟ್ ಕೊಟ್ರು ಜೋಗಿ ಪ್ರೇಮ್..!

02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
Read more