Jan 13, 2022, 1:18 PM IST
'ಕೆಜಿಎಫ್' (KGF) ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಆದ ಯಶ್ (Yash) ಇದೀಗ ಎಲ್ಲಾ ಚಿತ್ರರಂಗಗಳಲ್ಲೂ ಫೇಮಸ್ ಆಗಿದ್ದಾರೆ. ಈ ಒಂದು ಚಿತ್ರದ ಮೂಲಕ ಬಾಲಿವುಡ್ನಲ್ಲಿ (Bollywood) ಅವರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಅದು ಯಾವ ಮಟ್ಟಕ್ಕೆ ಅಂದರೆ ಯಶ್ ಬಗ್ಗೆ, ಹಿಂದಿ ಬಿಗ್ ಪಿಕ್ಚರ್ ಶೋನಲ್ಲಿ ಪ್ರಶ್ನೆ ಕೇಳುವ ಮಟ್ಟಕ್ಕೆ ಇಂದು ಅವರು ಬೆಳೆದು ನಿಂತಿದ್ದಾರೆ. ಹೌದು! ಬಾಲಿವುಡ್ನ ಖಾಸಗಿ ವಾಹಿನಿಯಲ್ಲಿ ಬಿಗ್ ಪಿಕ್ಚರ್ ಶೋವೊಂದು ಪ್ರಸಾರ ಆಗುತ್ತಿದ್ದು, ಈ ಕಾರ್ಯಕ್ರಮವನ್ನು ರಣವೀರ್ ಸಿಂಗ್ (Ranveer Singh) ಹೋಸ್ಟ್ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಒಂದು ಸಂಚಿಕೆಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ.
KGF 2 Movie: ಯಶ್ ಜೊತೆ ರೇಸ್‌ಗೆ ನಿಂತ ಇಬ್ಬರು ಬಿಗ್ ಸ್ಟಾರ್ಸ್
ಆಗ ರಣವೀರ್ ಸಿಂಗ್, ಯಶ್ ಚಿತ್ರವನ್ನು ತೋರಿಸಿ ಇವರು ಯಾರು ಗೊತ್ತಾ? ಅಂತಾ ಕೇಳುತ್ತಾರೆ. ಆಗ ಸೋನಾಕ್ಷಿ 'ಹೌದು ಗೊತ್ತು. ಇವರು ಸೌತ್ ಸಿನಿ ಇಂಡಸ್ಟ್ರಿಯ ಸೂಪರ್ ಸ್ಟಾರ್ ನಟ ಯಶ್. ಇವರ ಸೂಪರ್ ಹಿಟ್ ಸಿನಿಮಾ 'ಕೆಜಿಎಫ್' ಅಂತ ಹೇಳುತ್ತಾರೆ. ಆಗ ರಣವೀರ್ ಹೌದು ನೀವು ಹೇಳಿದ್ದು ಸರಿ. ಆದರೆ ಪ್ರಶ್ನೆ ಅದಲ್ಲ ರಾಕಿಂಗ್ ಸ್ಟಾರ್ ಯಶ್ ಯಾವ ಇಂಡಸ್ಟ್ರಿಯವರು ಎಂದು ಕೇಳಿ 4 ಆಪ್ಷನ್ ನೀಡುತ್ತಾರೆ. ಆಗ ಕನ್‌ಫ್ಯೂಸ್ ಆದ ಸೋನಾಕ್ಷಿ, ಈ ವಿಚಾರ ನನಗೆ ಗೊತ್ತಿಲ್ಲ ಅಂತ ಹೇಳಿ, ಫೋನೋ ಫ್ರೆಂಡ್ ಆಪ್ಷನ್ ತೆಗೆದುಕೊಂಡು ಸ್ಯಾಂಡಲ್ವುಡ್ ಅಂತ ಹೇಳುತ್ತಾರೆ. ಅಂದಹಾಗೆ ಇತ್ತೀಚೆಗೆ ಯಶ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment