ದಿ ವೀರ್ ಟೀಸರ್ ರಿಲೀಸ್.. ಆಕ್ಷನ್ ಮೂಡ್‌ನಲ್ಲಿ‌ ಜೆಕೆ: ಫೌಜಿಯಲ್ಲಿ ಸೈನಿಕನಾದ ಡಾರ್ಲಿಂಗ್ ಪ್ರಭಾಸ್!

ದಿ ವೀರ್ ಟೀಸರ್ ರಿಲೀಸ್.. ಆಕ್ಷನ್ ಮೂಡ್‌ನಲ್ಲಿ‌ ಜೆಕೆ: ಫೌಜಿಯಲ್ಲಿ ಸೈನಿಕನಾದ ಡಾರ್ಲಿಂಗ್ ಪ್ರಭಾಸ್!

Published : Oct 24, 2025, 04:36 PM ISTUpdated : Oct 24, 2025, 04:37 PM IST

ಕನ್ನಡ ಸಿನಿಮಾ ಮತ್ತು ಸೀರಿಯಲ್‌ಗಳಲ್ಲಿ ಜೆಕೆ ಎಂದೇ ಖ್ಯಾತಿ ಪಡೆದಿರುವ ಕಾರ್ತಿಕ್‌ ಜಯರಾಮ್‌ ನಟಿಸಿರುವ ದಿ ವೀರ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. 2 ನಿಮಿಷ 44 ಸೆಕೆಂಡ್ ಇರುವ ದಿ ವೀರ್ ಟೀಸರ್ ಭರ್ಜರಿ ಆಕ್ಷನ್ ಗಳಿಂದ ಕೂಡಿದೆ.

ಕನ್ನಡ ಸಿನಿಮಾ ಮತ್ತು ಸೀರಿಯಲ್‌ಗಳಲ್ಲಿ ಜೆಕೆ ಎಂದೇ ಖ್ಯಾತಿ ಪಡೆದಿರುವ ಕಾರ್ತಿಕ್‌ ಜಯರಾಮ್‌ ನಟಿಸಿರುವ ದಿ ವೀರ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. 2 ನಿಮಿಷ 44 ಸೆಕೆಂಡ್ ಇರುವ ದಿ ವೀರ್ ಟೀಸರ್ ಭರ್ಜರಿ ಆಕ್ಷನ್ ಗಳಿಂದ ಕೂಡಿದೆ. ಸಿಕ್ಸ್ ಪ್ಯಾಕ್ಸ್ ನಲ್ಲಿ  ಜೆಕೆ ಸಖತ್ ಖದರ್ ತೋರಿಸಿದ್ದಾರೆ. ಆರ್​. ಲೋಹಿತ್​ ನಾಯಕ್​ ಅವರು ‘ದಿ ವೀರ್​’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ರೋಚಿತ್​ ವಿಲನ್​  ಆಗಿ ನಟಿಸಿದ್ದಾರೆ. ನಟಿ ಪ್ರಣತಿ ನಾಯಕಿಯಾಗಿದ್ದು, ಗೀತಾ ಜಯಶ್ರೀನಿವಾಸನ್ ಮತ್ತು ವಿಶಾಲ್ ತೇಜ್ ದಿ ವೀರ್ ಚಿತ್ರ ನಿರ್ಮಾಣ ಮಾಡಿದ್ದಾರೆ.

ಲವ್ ಯು ಮುದ್ದು ಸಿನಿಮಾ ಫ್ಯಾಥೋ ಸಾಂಗ್ ರಿಲೀಸ್..! ಬಿಕ್ಕಿ ಬಿಕ್ಕಿ ಅತ್ತ ಸಿದ್ದು
ಟೈಟಲ್ ಹಾಗೂ ಕಂಟೆಂಟ್ ಮೂಲಕ ಕುತೂಹಲ ಹೆಚ್ಚಿಸಿರುವ ಲವ್ ಯು ಮುದ್ದು ಸಿನಿಮಾದಿಂದ ಮತ್ತೊಂದು ಹಾಡು ರಿಲೀಸ್ ಆಗಿದೆ. ಈಗಾಗಲೇ ಬಿಡುಗಡೆಯಾಗಿದ್ದ ಟೈಟಲ್ ಟ್ರ್ಯಾಕ್ ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದ್ದು, ಇದೀಗ ಬರುತಿದೆ ಅಳುವು ಎಂಬ ಹಾಡನ್ನ ಬಿಡುಗಡೆ ಮಾಡಲಾಗಿದೆ ತನ್ನ ಪ್ರೇಯಸಿ ದೂರವಾದ ಯುವಕನ ಪಾಡು-ಒದ್ದಾಟ ಹೇಗೆ ಇರಲಿದೆ ಎಂಬ ಕುರಿತಾದ ಹಾಡು ಇದಾಗಿದೆ. ಬರುತಿದೆ ಅಳುವು ಎಂಬ ಗೀತೆಗೆ ಈ ಸಿನಿಮಗೆ ಕುಮಾರ್ ನಿರ್ದೇಶನ ಮಾಡಿದ್ದು ಹಾಡಿಗೆ  ಜಸ್ಕರಣ್ ಸಿಂಗ್ ಧ್ವನಿಯಾಗಿದ್ದಾರೆ. ಆರವ್ ರಿಷಿಕ್ ಸಂಗೀತ ಒದಗಿಸಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆದ ಪ್ರೇಮಕಥೆಯೊಂದನ್ನ ಆಧರಿಸಿ ಲವ್ ಯು ಮುದ್ದು ಸಿನಿಮಾ ಮಾಡಲಾಗಿದೆ. ಅಜ್ಞಾತವಾಸಿ ಸಿನಿಮಾದಲ್ಲಿ ನಟಿಸಿದ್ದ ಸಿದ್ದು ಈ ಸಿನಿಮಾಕ್ಕೆ ನಾಯಕ. ಯುವನಟಿ ರೇಷ್ಮಾ ನಾಯಕಿ. ಈ ಸಿನಿಮಾದಲ್ಲಿ ರಾಜೇಶ್‌ ನಟರಂಗ, ತಬಲಾ ನಾಣಿ, ಗಿರೀಶ್‌ ಶಿವಣ್ಣ, ಶ್ರೀವತ್ಸ ಮತ್ತು ಸ್ವಾತಿ ನಟಿಸಿದ್ದಾರೆ. ಚಿತ್ರಕ್ಕೆ ಕಿಶನ್ ಟಿಎನ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಲವ್ ಯು ಮುದ್ದು ಸಿನಿಮಾ ನವೆಂಬರ್ 7ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗಲಿದೆ.

ಫೌಜಿಯಲ್ಲಿ ಸೈನಿಕನಾದ ಡಾರ್ಲಿಂಗ್ ಪ್ರಭಾಸ್..!
ಪ್ರಭಾಸ್ ನಟಿಸುತ್ತಿರುವ, ಹನು ರಾಘವಪುಡಿ‌ ನಿರ್ದೇಶಿಸುತ್ತಿರುವ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾದ ಟೈಟಲ್ ಪೋಸ್ಟರ್ ರಿಲೀಸ್ ಆಗಿದೆ. ಪ್ರಭಾಸ್ ಹನು ಜೋಡಿಯ ಚಿತ್ರಕ್ಕೆ ಫೌಜಿ ಎಂಬ ಟೈಟಲ್ ಇಡಲಾಗಿದೆ. ಫೌಜಿಯಲ್ಲಿ ಪ್ರಭಾಸ್ ಸೈನಿಕನಾಗಿ ನಟಿಸುತ್ತಿದ್ದಾರೆ. 1940 ರ ದಶಕದ ವಸಾಹತುಶಾಹಿ ಭಾರತದ ಸ್ಟೋರಿ ಸಿನಿಮಾದಲ್ಲಿದೆ. ಈ ಚಿತ್ರದಲ್ಲಿ ಪ್ರಭಾಸ್ ಗೆ ಜೋಡಿಯಾಗಿ ಇಮಾನ್ವಿ ನಟಿಸಿದ್ದಾರೆ. ಜೊತೆಗೆ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಜಯಪ್ರದಾ ಮತ್ತು ಭಾನು ಚಂದರ್ ಸೇರಿದಂತೆ ಹಲವರು ಪಾತ್ರ ವರ್ಗದಲ್ಲಿ ಇದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ನಡಿ ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್ ಹಾಗೂ ಭೂಷಣ್ ಕುಮಾರ್ ಫೌಜಿ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. 

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
Read more