ರಾಕಿಂಗ್ ಸ್ಟಾರ್ ಯಶ್ ಕೀರ್ತಿ ಪತಾಕೆಗೆ ಮತ್ತೊಂದು ಗರಿ! ಆ ಲಿಸ್ಟ್‌ನಲ್ಲಿ ಮತ್ತೆ ಟಾಪ್‌ಗೆ ಬಂದ ನ್ಯಾಷನಲ್ ಸ್ಟಾರ್..!

ರಾಕಿಂಗ್ ಸ್ಟಾರ್ ಯಶ್ ಕೀರ್ತಿ ಪತಾಕೆಗೆ ಮತ್ತೊಂದು ಗರಿ! ಆ ಲಿಸ್ಟ್‌ನಲ್ಲಿ ಮತ್ತೆ ಟಾಪ್‌ಗೆ ಬಂದ ನ್ಯಾಷನಲ್ ಸ್ಟಾರ್..!

Published : May 31, 2024, 10:19 AM ISTUpdated : May 31, 2024, 10:20 AM IST

ರಾಕಿಂಗ್ ಸ್ಟಾರ್ ಯಶ್ ಅಂದ್ರೆ ಕ್ರೇಜ್ ಕಾ ಬಾಪ್. ಯಶ್ ಸಿನಿಮಾ ಅನೌನ್ಸ್ ಮಾಡಿದ್ರೆ ಇಡೀ ದೇಶದ ಸಿನಿ ಪ್ರೇಕ್ಷಕರ ಕಣ್ಣಿರಳಿಸುತ್ತಾರೆ. ಅದಕ್ಕೆ ಕಾರಣ ಯಶ್ ಬಳಿ ಇರೋ ಸಿನಿಮಾ ಕ್ಯಾಲಿಬರ್ ಹಾಗೂ ಫ್ಯಾನ್ ಫಾಲೋಯಿಂಗ್. ಹೀಗಾಗಿ ಯಶ್ ಜಾಗತೀಕ ಮಟ್ಟದಲ್ಲಿ ಖ್ಯಾತಿ ಪ್ರಖ್ಯಾತಿ ಗಳಿಸಿದ್ದಾರೆ.

‘ಕೆಜಿಎಫ್ ಚಾಪ್ಟರ್ 1’ ಮತ್ತು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾಗಳ ಯಶಸ್ಸು ನಟ ಯಶ್(Yash) ಕೀರ್ತಿ ಪತಾಕೆ ಇಡೀ ದೇಶದಲ್ಲಿರುವಂತೆ ಮಾಡಿದೆ. ಯಶ್ರ ಕೀರ್ತಿಗೆ ಈಗ ಮತ್ತೊಂದು ಗರಿ ಸೇರಿದೆ. ಅದು ಯಶ್ ಐಎಂಡಿಬಿ ವೆಬ್‌ಸೈಟ್‌ನಲ್ಲಿ(IMDB website) ಅತಿ ಹೆಚ್ಚು ವೀಕ್ಷಣೆಗೆ ಒಳಪಟ್ಟ ಭಾರತದ 100 ಸೆಲೆಬ್ರಿಟಿಗಳ ಪಟ್ಟಿ ಸೇರಿದ್ದಾರೆ. ಈ ಪಟ್ಟಿಯಲ್ಲಿ ಇರುವ ಏಕೈಕ ಕನ್ನಡಿಗ ಅನ್ನೋ ಹೆಮ್ಮೆಯ ಯಶ್‌ಗೆ ಸಿಕ್ಕಿದೆ. 
ಕಳೆದ 10 ವರ್ಷಗಳಲ್ಲಿ, ಅಂದರೆ 2014ರ ಏಪ್ರಿಲ್ ತಿಂಗಳಿಂದ 2024ರ ಏಪ್ರಿಲ್‌ವರೆಗೆ ಐಎಂಡಿಬಿ ವೆಬ್‌ಸೈಟ್‌ನಲ್ಲಿ ಸೆಲೆಬ್ರಿಟಿಗಳ ಪ್ರೊಫೈಲ್(Most Viewed Celebrities) ಪುಟಕ್ಕೆ ಎಷ್ಟು ಜನರು ಭೇಟಿ ನೀಡಿದ್ದಾರೆ ಎಂಬುದರ ಆಧಾರದ ಮೇಲೆ ಈ ಪಟ್ಟಿ ಸಿದ್ಧವಾಗಿದೆ. ನಟಿ ದೀಪಿಕಾ ಪಡುಕೋಣೆ ಅವರ ಪುಟಯನ್ನು ಅತಿ ಹೆಚ್ಚಿನ ಜನರು ವೀಕ್ಷಿಸಿದ್ದಾರೆ. ಹಾಗಾಗಿ ಅವರಿಗೆ ನಂಬರ್ ಸ್ಥಾನ ಸಿಕ್ಕಿದೆ. 89ನೇ ಸ್ಥಾನದಲ್ಲಿ ಯಶ್ ಇದ್ದಾರೆ. ಯಶ್ ಅವರನ್ನು ಹೊರತುಪಡಿಸಿ ಕನ್ನಡದ ಬೇರೆ ಯಾವುದೇ ನಟರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಆದರೆ ಅಕ್ಕಪಕ್ಕದ ರಾಜ್ಯದ ಸೆಲೆಬ್ರಿಟಿಗಳು ಈ ಪಟ್ಟಿಯಲ್ಲಿ ಇದ್ದಾರೆ. ಹೆಚ್ಚಿನ ಸ್ಥಾನವನ್ನು ಬಾಲಿವುಡ್ ಮಂದಿ ಆಕ್ರಮಿಸಿಕೊಂಡಿದ್ದಾರೆ. ದಕ್ಷಿಣ ಭಾರತದ ಸೆಲೆಬ್ರಿಟಿಗಳ ಪೈಕಿ ಕೆಲವರು ಇದರಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. 13ನೇ ಸ್ಥಾನದಲ್ಲಿ ಸಮಂತಾ ರುತ್ ಪ್ರಭು ಇದ್ರೆ 16ನೇ ಸ್ಥಾನದಲ್ಲಿ ತಮನ್ನಾ ಭಾಟಿಯಾ, 18ನೇ ಸ್ಥಾನದಲ್ಲಿ ನಯನತಾರಾ, 29ನೇ ಸ್ಥಾನದಲ್ಲಿ ಪ್ರಭಾಸ್, 30ನೇ ಸ್ಥಾನದಲ್ಲಿ ಧನುಷ್, 31ನೇ ಸ್ಥಾನದಲ್ಲಿ ರಾಮ್ ಚರಣ್, 35ನೇ ಸ್ಥಾನದಲ್ಲಿ ದಳಪತಿ ವಿಜಯ್, 42ನೇ ಸ್ಥಾನದಲ್ಲಿ ರಜನಿಕಾಂತ್, 43ನೇ ಸ್ಥಾನದಲ್ಲಿ ವಿಜಯ್ ಸೇತುಪತಿ, 47ನೇ ಸ್ಥಾನದಲ್ಲಿ ಅಲ್ಲು ಅರ್ಜುನ್, 48ನೇ ಸ್ಥಾನದಲ್ಲಿ ಮೋಹನ್ಲಾಲ್, 50ನೇ ಸ್ಥಾನದಲ್ಲಿ ಆರ್. ಮಾಧವನ್ ಇದ್ದಾರೆ.

ಇದನ್ನೂ ವೀಕ್ಷಿಸಿ:  ಕೊಲೆಗಾರನನ್ನು ಒಂದು ವರ್ಷದಲ್ಲೇ ಕಣ್ಣಮುಂದೆ ತಂದು ನಿಲ್ಲಿಸುತ್ತೇನೆ..ನಿಜವಾಯ್ತು ವರ್ತೆ ಪಂಜುರ್ಲಿ ನುಡಿ!

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more