ಕನ್ನಡದಲ್ಲಿ ಮೆಗಾ ಸಂಭ್ರಮಕ್ಕೆ ಸಿದ್ಧವಾಗ್ತಿದೆ ವೇದಿಕೆ..! ದರ್ಶನ್-ಪ್ರೇಮ್ ಕಾಂಬಿನೇಷನ್ ಸಿನಿಮಾದಲ್ಲಿ ಚಿರಂಜೀವಿ..?

Dec 28, 2023, 10:05 AM IST

ಚಿರಂಜೀವಿ.. ಟಾಲಿವುಡ್‌ನ ಮೆಗಾಸ್ಟಾರ್.. ತೆಲುಗು ಮಂದಿಯ ಸುಪ್ರಿಂ ಹೀರೋ. ಅಣ್ಣಯ್ಯ.. ಅಷ್ಟೆ ಅಲ್ಲ ಗ್ಯಾಂಗ್ ಲೀಡರ್ ಅನ್ನೋ ಸಿನಿಮಾ ಮಾಡಿ ತನ್ನ ಡೈ ಹಾರ್ಡ್ ಫ್ಯಾನ್ಸ್ಗಳಿಂದ ಗ್ಯಾಂಗ್ ಲೀಡರ್ ಅಂತಲೂ ಕರೆಸಿಕೊಂಡ್ರು ಈ ಮೆಗಾ ಸ್ಟಾರ್. ಮೆಗಾ ಸ್ಟಾರ್ ಚಿರಂಜೀವಿಯ(Chiranjeevi) ಹೆಗ್ಗಳಿಕೆ ಅಂದ್ರೆ 1992ರಲ್ಲಿ ಇಂಡಿಯಾ ಸಿನಿಮಾ ಜಗತ್ತಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಮೊದಲ ಭಾರತೀಯ ಸ್ಟಾರ್ ಅನ್ನೋ ಪಟ್ಟ ಪಡೆದ್ರು. ಯಾಕಂದ್ರೆ ಆ ಕಾಲಕ್ಕೆ ಬಿಗ್ ಬಿ ಅಮಿತಾಬ್‌ ಬಚ್ಚನ್ ಹೈಯೆಸ್ಟ್ ಮೇಯ್ಡಿ ಹೀರೋ ಆಗಿದ್ರು. ಆದ್ರೆ ಚಿರಂಜೀವಿ ಆಪತ್ ಬಾಂದುವುಡು ಸಿನಿಮಾಗೆ 1.25 ಕೋಟಿ ಸಂಭಾವನೆ ಪಡೆದದ್ದು ದೊಡ್ಡ ಸುದ್ದಿಯಾಗಿತ್ತು. ಈಗ ಮೆಗಾ ಸ್ಟಾರ್ ಬಗ್ಗೆ ಸ್ಯಾಂಡಲ್ವುಡ್ನಲ್ಲಿ(Sandalwood) ಮೆಗಾ ಸುದ್ದಿಯೊಂದು ಬ್ಲ್ಯಾಸ್ಟ್ ಆಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಟಾಲಿವುಡ್(Tollywoood) ಹೀರೋ ಮೆಗಾ ಸ್ಟಾರ್ ಚಿರಂಜೀವಿ ಸಂಭ್ರಮಕ್ಕೆ ವೇದಿಕೆ ಸಿದ್ಧವಾಗ್ತಿದೆ. ಕನ್ನಡದಲ್ಲಿ ಮತ್ತೆ ಚಿರಂಜೀವಿ ಮಿಂಚು ಹರಿಯಲಿದೆ. ಹೌದು, ಸ್ಯಾಂಡಲ್‌ವುಡ್ ಬೆಳ್ಳಿತೆರೆ ಮೇಲೆ ಮತ್ತೆ ಮೆಗಾಸ್ಟಾರ್ ಮೇಳೈಸಲಿದ್ದಾರೆ. ಕನ್ನಡಸಲ್ಲಿ ಸಿಪಾಯಿ ಅನ್ನೋ ಸಿನಿಮಾದಲ್ಲಿ ಮೇಜರ್ ಚಂದ್ರಕಾಂತ್ ಆಗಿ ನಟಿಸಿದ್ದ ಚಿರಂಜೀವಿ ಈಗ ಡೈರೆಕ್ಟರ್ ಜೋಗಿ ಪ್ರೇಮ್ ಮಾಡುತ್ತಿರೋ ದೊಡ್ಡ ಸಾಹಸಕ್ಕೆ ಕನಸಿನ ಸಿನಿಮಾಗೆ  ಸಪೋರ್ಟ್ ಕೊಡ್ತಿದ್ದಾರೆ. ಹಾಗಂತ ಈ ಸಿನಿಮಾವನ್ನ ಚಿರಜೀವಿ ನಿರ್ಮಾಣ ಮಾಡ್ತಿಲ್ಲ. ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾದಲ್ಲಿ ಚಿರಜೀವಿ ನಟಿಸುತ್ತಿದ್ದಾರೆ ಅನ್ನೋ ವಿಚಾರ ರಿವಿಲ್ ಆಗಿದೆ.

ಇದನ್ನೂ ವೀಕ್ಷಿಸಿ:  Narayana Gowda: ಕರವೇ ನಾರಾಯಣ ಗೌಡರ ಮೊದಲ ಪ್ರತಿಭಟನೆ ಪ್ರಾರಂಭವಾಗಿದ್ದು ಹೇಗೆ? ಹಿಂದಿ ಭಾಷಿಕರನ್ನು ಕಂಡ್ರೆ ಆಗುವುದಿಲ್ವಾ ?