ಮಹಾಕಾಲೇಶ್ವರನಿಗೆ ಮಂಡಿಯೂರಿದ ರಾಕಿಂಗ್ ಸ್ಟಾರ್: ಮುಂದಿನ ವರ್ಷ ಯಶ್​ ಕಡೆಯಿಂದ 2 ಸಿನಿಮಾ ಫಿಕ್ಸ್!

ಮಹಾಕಾಲೇಶ್ವರನಿಗೆ ಮಂಡಿಯೂರಿದ ರಾಕಿಂಗ್ ಸ್ಟಾರ್: ಮುಂದಿನ ವರ್ಷ ಯಶ್​ ಕಡೆಯಿಂದ 2 ಸಿನಿಮಾ ಫಿಕ್ಸ್!

Published : Apr 22, 2025, 11:40 AM ISTUpdated : Apr 22, 2025, 11:48 AM IST

ರಾಕಿಂಗ್ ಸ್ಟಾರ್​ ಯಶ್​ ಯಾವ್ದೇ ಕೆಲಸ ಶುರು ಮಾಡಬೇಕಾದ್ರು ನೊದಲು ತಾನು ನಂಬೋ ದೇವಸ್ಥಾನಕ್ಕೆ ಹೋಗಿ ಎಲ್ಲ ಕೆಲಸಗಳು ಸುಸೂತ್ರವಾಗಿ ನೆರವೇರಲಿ ಅಂತ ದೇವರ ಆಶೀರ್ವಾದ ಪಡೆಯುತ್ತಾರೆ. 

ರಾಕಿಂಗ್ ಸ್ಟಾರ್​ ಯಶ್​ ಯಾವ್ದೇ ಕೆಲಸ ಶುರು ಮಾಡಬೇಕಾದ್ರು ನೊದಲು ತಾನು ನಂಬೋ ದೇವಸ್ಥಾನಕ್ಕೆ ಹೋಗಿ ಎಲ್ಲ ಕೆಲಸಗಳು ಸುಸೂತ್ರವಾಗಿ ನೆರವೇರಲಿ ಅಂತ ದೇವರ ಆಶೀರ್ವಾದ ಪಡೆಯುತ್ತಾರೆ. ಇದೀಗ ಯಶ್​ ರಾವಣನ ಅವತಾರ ಎತ್ತೋ ಮೊದಲೇ ಉಜ್ಜಯಿನಿಯ ಮಹಾಕಾಳೇಶ್ವರನಿಗೆ ಮಂಡಿ ಊರಿದ್ದಾರೆ. ಹಾಗಾದ್ರೆ ಯಶ್​ ಮಹಾಕಾಳೇಶ್ವರನಿಗೆ ಮಂಡಿ ಊರಿದ್ದು ಯಾಕೆ.? ರಾವಣನಿಗೂ ಮಹಾಕಾಳೇಶ್ವರನಿಗೂ ಏನು ನಂಟು ನೋಡೋಣ ಬನ್ನಿ. ರಾಕಿಂಗ್ ಸ್ಟಾರ್​ ಯಶ್​​​ ಸಿನಿಮಾ ಬಂದು ಮೂರು ವರ್ಷ ಆಗೋಯ್ತು. ಕೆಜಿಎಫ್​​2 ಆದ್ಮೇಲೆ ಯಶ್​ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡೇ ಇಲ್ಲ. ಆಗೊಮ್ಮೆ ಈಗೊಮ್ಮೆ ಸಾರ್ವಜನಿಕವಾಗಿ ದರ್ಶನ ಕೊಡೋ ರಾಕಿ ಬೇಗ ಬೇಗ ಸಿನಿಮಾ ಮಾಡಿದ್ರೆ ಚಿತ್ರರಂಗವೂ ಉಳಿಯುತ್ತೆ. ಒಂದಿಷ್ಟು ಜನರಿಗೆ ಕೆಲಸವೂ ಸಿಗುತ್ತೆ ಅಂತ ಸಿನಿ ಭಕ್ತರ ವಾದ. 

ಇದೀಗ ಯಶ್ ವರ್ಷಕ್ಕೆ ಎರಡು ಸಿನಿಮಾ ಕೊಡೋ ಟೈಂ ಹತ್ತಿರ ಬಂದಿದೆ. ಅದು ಟಾಕ್ಸಿಕ್ ಹಾಗು ರಾಮಾಯಣ. ರಾಕಿಂಗ್ ಸ್ಟಾರ್ ಯಶ್​ ಈಗ ರಾವಣ ಅವತಾರ ಎತ್ತುತ್ತಿದ್ದಾರೆ. ರಾವಣ ಹೇಳಿ ಕೇಳಿ ನಮ್ಗೆಲ್ಲಾ ರಾಕ್ಷಸನ. ಈ ರೋಲ್​ಅನ್ನ ಯಶ್​​ ವಿಜೃಂಬಿಸೋಕೆ ಸಿದ್ಧವಾಗಿರೋದ್ರಿಂದ ಯಶ್ ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿರೋ ಮಹಾಕಾಲೇಶ್ವರ ದೇವರಿಗೆ ಮಂಡಿ ಊರಿದ್ದಾರೆ. ಯಶ್ ದೈವ ಭಕ್ತ. ಪ್ರತಿ ಸಿನಿಮಾ ಶೂಟ್​ಗೂ ಮೊದಲು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈಗ ‘ರಾಮಾಯಣ’ ಸಿನಿಮಾದ ಶೂಟ್​ ನಾಳೆಯಿಂದ ಆರಂಭ ಅಗುತ್ತಿದೆ. ಹೀಗಾಗೆ ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ರಾವಣ ಕೂಡ ಶಿವನ ಭಕ್ತ. ಅವನಿಗೆ ಶಿವನ ಮೇಲೆ ಅಪಾರ ಭಕ್ತಿ. 

ಅದೇ ರೀತಿ ಯಶ್ ಕೂಡ ಶಿವನ ಭಕ್ತ. ಹೀಗಾಗಿ ರಾಕಿಂಗ್ ಸ್ಟಾರ್ ಯಶ್ ಮಹಾಕಾಳೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಮುಂದಿನ ವರ್ಷ ಮಾರ್ಚ್ 19ಕ್ಕೆ ತೆರೆ ಮೇಲೆ ಬರೋದು ಪಕ್ಕಾ ಆಗಿದೆ. ಆ ಸಿನಿಮಾ ಶೂಟಿಂಗ್​​ಗಾಗಿ ಯಶ್​ ಊರೂರು ಸುತ್ತುತ್ತಿದ್ದಾರೆ. ಇದರ ಜೊತೆ ಮತ್ತೊಂದು ಸರ್​ಪ್ರೈಸ್ ಅಂದ್ರೆ ರಾಕಿ ನಟಿಸಿ ನಿರ್ಮಿಸುತ್ತಿರೋ ರಾಮಾಯಣ ಶೂಟಿಂಗ್ ಗೆ ಯಶ್ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರೀಕರಣ ಅಕ್ಟೋಬರ್​ ವರೆಗೂ ನಡೆಯಲಿದೆ ಅನ್ನೋ ಮಾಹಿತಿ ಇದೆ. ಯಶ್ ಯಾವ್ದೇ ಸಿನಿಮಾ ಶುರು ಮಾಡಿದ್ರು ಮೊದಲು ದೇವಸ್ಥಾನಕ್ಕೆ ಹೋಗಿ ಆಶೀರ್ವಾದ ಪಡೆಯುತ್ತಾರೆ. ಈ ಹಿಂದೆ ಟಾಕ್ಸಿನ್ ಸಿನಿಮಾ ಶೂಟಿಂಗ್ ಆರಂಭಿಸುವ ಮೊದಲು ಯಶ್ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೋಗಿ ಮಂಜುನಾಥನ ಆಶೀರ್ವಾದ ಪಡೆದು ಬಂದಿದ್ರು. 

ಯಶ್​ ನಿರ್ಮಾಣದ ರಾಮಾಯಣ ಚಾಪ್ಟರ್​1 ಸಿನಿಮಾ ಶೂಟಿಂಗ್ ಫೈನಲ್ ಹಂತಕ್ಕೆ ಬಂದಿದೆ. ರಣಬೀರ್​ ಕಪೂರ್​ ರಾಮನ ರೋಲ್ ಮಾಡಿದ್ರೆ ಸೀತೆಯಾಗಿ ಸಾಯಿ ಪಲ್ಲವಿ ನಟಿಸಿದ್ದಾರೆ. ಈಗ ರಾವಣನ ಕೆಲವು ದೃಶ್ಯಗಳನ್ನ ಸೆರೆ ಹಿಡಿಯಬೇಕಿದೆ. ಹೀಗಾಗಿ ಯಶ್​​​ ಸಖಲ ರೀತಿಯಲ್ಲೂ ಸಜ್ಜಾಗಿದ್ದಾರೆ. ನಿರ್ದೇಶಕ ನಿತೀಶ್ ತಿವಾರಿ ಯಶ್​​ಗೆ ರಾವಣ ಗೆಟಪ್ ಹಾಕಿಸುತ್ತಿದ್ದಾರೆ. ಈಗ ಲಂಕಾದಿ ಪತಿಯಾಗುತ್ತಿರೋ ಯಶ್, ಕಳೆದ ಮೂರು ವರ್ಷದಿಂದ ತೆರೆ ಮೇಲೆ ಬಂದಿಲ್ಲ ಅನ್ನೋ ಬೇಸರ ಫ್ಯಾನ್ಸ್​​ಗಿದೆ. ಆದ್ರೆ ಮುಂದಿನ ವರ್ಷ ಹಾಗಾಗ್ಲ. ಯಶ್​ ಟಾಕ್ಸಿಕ್ ಹಾಗು ರಾಮಾಯಣ ಚಾಪ್ಟರ್​1 ಸಿನಿಮಾಗಳ 2026ಕ್ಕೆ ರಿಲೀಸ್ ಮಾಡುತ್ತಿದ್ದಾರೆ. ಹೀಗಾಗಿ ರಾಕಿಂಗ್ ಸ್ಟಾರ್ ಫ್ಯಾನ್ಸ್​ಗೆ ಒಂದೇ ವರ್ಷ ಯಶ್​ರ ಎರಡು ಸಿನಿಮಾ ನೋಡೋ ಚಾನ್ಸ್​ ಸಿಗುತ್ತಿದೆ.

29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
Read more