ಸ್ವಿಡ್ಜರ್​ಲ್ಯಾಂಡ್​​ನಲ್ಲಿ ಕೆಡಿ ಸಿನಿಮಾದ ಹಾಡಿನ ಶೂಟಿಂಗ್: ಭೂಲೋಕದ ಸ್ವರ್ಗದಲ್ಲಿ ಧ್ರುವ ಸರ್ಜಾ ರೀಷ್ಮಾ ರೊಮ್ಯಾನ್ಸ್

ಸ್ವಿಡ್ಜರ್​ಲ್ಯಾಂಡ್​​ನಲ್ಲಿ ಕೆಡಿ ಸಿನಿಮಾದ ಹಾಡಿನ ಶೂಟಿಂಗ್: ಭೂಲೋಕದ ಸ್ವರ್ಗದಲ್ಲಿ ಧ್ರುವ ಸರ್ಜಾ ರೀಷ್ಮಾ ರೊಮ್ಯಾನ್ಸ್

Published : Apr 21, 2025, 12:17 PM ISTUpdated : Apr 21, 2025, 12:33 PM IST

ಕೆಡಿ ಚಿತ್ರತಂಡವು ಸ್ವಿಟ್ಜರ್ಲ್ಯಾಂಡ್‌ನಲ್ಲಿ 'ಸೆಟ್ಟಾಗಲ್ಲ' ಹಾಡಿನ ಚಿತ್ರೀಕರಣಕ್ಕೆ ಹೊರಟಿದೆ. ಧ್ರುವ ಸರ್ಜಾ ಮತ್ತು ರೀಷ್ಮಾ ನಾಣಯ್ಯ ಭೂಲೋಕದ ಸ್ವರ್ಗದಲ್ಲಿ ರೊಮ್ಯಾನ್ಸ್ ಮಾಡಲಿದ್ದಾರೆ. ಸಂಜಯ್ ದತ್ ಚಿತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ.

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಾರ್ಟಿನ್​​ನಿಂದ ಮೈ ಸುಟ್ಟುಕೊಂಡಿರಬಹುದು.. ಈಗ ಕೆಡಿ ಅನ್ನೋ ಸುಗಂಧ ತೈಲವನ್ನ ಮೈಗೆ ಮೆತ್ತಿಕೊಂಡು ಊರೆಲ್ಲಾ ಸುವಾಸನೆ ಹಬ್ಬಿಸುತ್ತಿದ್ದಾರೆ. ಹೊಸ ವರ್ಷದಲ್ಲಿ ಬಂದ ಕೆಡಿಯ ಶಿವಾ ಶಿವ ಸಾಂಗ್ ಇಡೀ ಪ್ಯಾನ್ ಇಂಡಿಯಾದ ಸಿನಿ ಪ್ರೇಕ್ಷಕರನ್ನೇ ಬಡಿದೆಬ್ಬಿಸಿದೆ. ಇದೀಗ ಕೆಡಿ ಸೆಟ್ಟಾಗಲ್ಲ ಅಂತ ಹೇಳ್ತಾ ರೀಶ್ಮಾ ನಾಣಯ್ಯ ಜೊತೆ ಭೂಲೋಕದ ಸ್ವರ್ಗ ಸ್ಟಿಡ್ಜರ್​ಲ್ಯಾಂಡ್​​​ ಮೇಲೆ ಲ್ಯಾಂಡ್ ಆಗೋಕೆ ಸಜ್ಜಾಗಿದ್ದಾರೆ. ಹಾಗಾದ್ರೆ ಕೆಡಿಯ ಸ್ವಿಜ್ಡರ್​​ಲ್ಯಾಂಡ್​​ನ ಕತೆಯನ್ನೊಮ್ಮೆ ನೋಡೋಣ ಬನ್ನಿ.. 

ಕೆಡಿ.. ಈ ವರ್ಷ ಸೂಪರ್ ಹಿಟ್ ಸಿನಿಮಾ ಆಗುತ್ತೆ ಅನ್ನೋ ದೊಡ್ಡ ನಂಬಿಕೆ ಹುಟ್ಟಿಸಿರೋ ಚಿತ್ರ. ಅದಕ್ಕೆ ಕಾರಣ ಜಸ್ಟ್ ಒಂದೇ ಒಂದು ಹಾಡು. ಅದು ಪ್ರೇಮ್ ಕಲ್ಪನೆಯ ಶಿವ ಶಿವ ಸಾಂಗ್...  ಒಂದ್​ ಕಡೆ ಕೆಡಿ ಶಿವ ಶಿವ ಹಾಡಿನ ವೈಭವ.. ಇದು ಡೈರೆಕ್ಟರ್ ಪ್ರೇಮ್​ಗೆ ಭಾರಿ ಎನರ್ಜಿ ತಂದುಕೊಟ್ಟಿದೆ. ಪ್ರೇಮ್ ಸಿನಿಮಾಗಳಲ್ಲಿ ಹಾಡುಗಳ ಹಬ್ಬ ಹೈ ಪಿಚ್​​​ನಲ್ಲಿರುತ್ತೆ ಅನ್ನೋದು ಹೊಸದಾಗೇನು ಹೇಳ್ಬೇಕಿಲ್ಲ. ಈಗ ಇದೇ ನಂಬಿಕೆ ಮೇಲೆ ಕೆಡಿ ಟೀಂ ಮತ್ತೊಂದು ಹಾಡನ್ನ ಹರಿ ಬಿಟ್ಟಿತ್ತು. ಅದೇ ಸೆಟ್ಟಾಗಲ್ಲ ನಂಗು ನಿಂಗು.. 

ಸೆಟ್ಟಾಗಲ್ಲ ಎನ್ನುತ್ತಾ ಸ್ವಿಡ್ಜರ್​ಲ್ಯಾಂಡ್​​ನಲ್ಲಿ ಲ್ಯಾಂಡ್​ ಆದ 'ಕೆಡಿ'

ಅರ್ಜುನ್ ಜನ್ಯ ಮ್ಯೂಸಿಕ್ ಮಾಡಿರೊ ಕೆಡಿಯ ಈ ಸೆಟ್ಟಾಗಲ್ಲ ಹಾಡು ಸದ್ಯ ಸೂಪರ್ ಹಿಟ್ ಆಗಿದೆ. ಆದ್ರೆ ಈ ಹಾಡಿನ ಚಿತ್ರೀಕರಣ ಮಾತ್ರ ಇನ್ನೂ ಆಗಿಲ್ಲ. ಯಾಕಂದ್ರೆ ಸೆಟ್ಟಾಗಲ್ಲ ಹಾಡಿಗೆ ಯಾರು ಸರಿಯಾಗಿ ಡಾನ್ಸ್ ಮಾಡ್ತಾರೋ ಅವರ ಸ್ಟೆಪ್​ಅನ್ನ ಸಿನಿಮಾದ ಹಾಡಿನಲ್ಲಿ ಬಳಸಿಕೊಳ್ತೇವೆ ಅಂತ ಹೇಳಿದ್ರು ನಿರ್ದೇಶಕ ಪ್ರೇಮ್. ಈಗ ಆ ಸ್ಟೆಪ್ಸ್​​ ಸಿಕ್ಕಿದ್ದು, ಪ್ರೇಮ್ ಟೀಂ ಸ್ವಿಡ್ಜರ್​ಲ್ಯಾಂಡ್​ನಲ್ಲಿ ಈ ಲವ್ ಸಾಂಗ್ ಚಿತ್ರೀಕರಣಕ್ಕೆ ಹೊರಟು ನಿಂತಿದೆ. ಸ್ವಿಡ್ಜರ್ ಲ್ಯಾಂಡ್​ ಭೂಲೋಕದ ಸ್ವರ್ಗ ಅಂತಾರೆ. ಈ ಸ್ವರ್ಗದಲ್ಲಿ ಅದ್ಭುತ ಲೊಕೇಷನ್ ಹಂಟ್ ಮಾಡಿರೋ ಪ್ರೇಮ್ ಅವರು​ ನಟ ಧ್ರುವ ಸರ್ಜಾ ಹಾಗು ನಟಿ ರೀಷ್ಮಾ ನಾಣಯ್ಯರಿಂದ ಅದ್ಭುತ ಪರ್ಫಾನೆನ್ಸ್​ ಅನ್ನ ಸೆರೆ ಹಿಡಿಯಲಿದ್ದಾರೆ. 

ಕೆಡಿಗೆ ಬಾಲಿವುಡ್ ನಟ ಸಂಜಯ್ ದತ್ ಡಬ್ಬಿಂಗ್.!
ಹೇಳಿ ಕೇಳಿ ಕೆಡಿ ಏನು ಸುಮ್ಮನೆ ಸಿನಿಮಾ ಅಲ್ಲ. ದೊಡ್ಡ ಸ್ಟಾರ್ ಕಾಸ್ಟ್​ ಇರೋ ಪ್ಯಾನ್ ಇಂಡಿಯಾ ಚಿತ್ರ. ನಟ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್​ರಂತಹ ದೊಡ್ಡ ದೊಡ್ಡ ಕಲಾವಿಧರು ನಟಿಸಿದ್ದಾರೆ. ಈ ಸಿನಿಮಾದ ಡಬ್ಬಿಂಗ್ ಕೆಲಸ ಕೂಡ ನಡೀತಾ ಇದ್ದು, ನಟ ಸಂಜಯ್ ದತ್ ತನ್ನ ಪಾತ್ರಕ್ಕೆ ವಾಯ್ಸ್ ಡಬ್ಬಿಂಗ್ ಮಾಡಿದ್ದಾರೆ.

ವಿಜಯ್ ಪಟೆದಾರ್​, ಏಷ್ಯಾನೆಟ್ ಸುವರ್ಣ ನ್ಯೂಸ್

05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
04:06ಸಲ್ಲೂಗೆ ಮತ್ತೆ ಕಂಟಕ; ದೇಶಪ್ರೇಮ ತೋರಿಸ್ತೀನಿ ಅಂದ್ರೂ 'ಮಾತೃಭೂಮಿ'ಗೆ ಇದೆಂತಾ ಅಗ್ನಿ ಪರೀಕ್ಷೆ?
08:55ರಾಕಿ ಬಾಯ್ ಡ್ರೀಮ್ ಸಿನಿಮಾದಲ್ಲಿ ಏನೆಲ್ಲಾ ಇದೆ? 'ಟಾಕ್ಸಿಕ್'ನಲ್ಲಿ ಗ್ಯಾಂಗ್​ಸ್ಟರ್​ಮಾತ್ರವಲ್ಲ, ಬೇರೆಯದ್ದೇ ಸ್ಟೋರಿ ಇದೆ!
04:43ಆಲಿಯಾ in ಡ್ರ್ಯಾಗನ್.. ಸೌತ್ ಸಿನಿಇಂಡಸ್ಟ್ರಿಗೆ ಆಲಿಯಾ ಭಟ್ ಕಂಬ್ಯಾಕ್; ಮ್ಯಾನ್ ಆಫ್ ಮಾಸಸ್ ಜೋಡಿಯಾದ ಆಲಿಯಾ!
12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
Read more