Jun 28, 2024, 9:45 AM IST
ಭೂತ-ಭವಿಷ್ಯತ್ ಕಾಲದ ಅದ್ಭುತ ಲೋಕವನ್ನೆ ಸೃಷ್ಟಿಸಿದ್ದಾರೆ ನಿರ್ದೇಶಕ ನಾಗ್ ಅಶ್ವಿನ್. ಗಂಗೆ ಬತ್ತಿ ಹೋಗಿದ್ದಾಳೆ, ವಿಶ್ವದ ಮೊದಲ ನಗರ ಕಾಶಿ, ಈಗ ಭೂಮಿಯ ಮೇಲೆ ಉಳಿದಿರುವ ಕೊನೆಯ ನಗರವಾಗಿದೆ. ಕಾಶಿಯಲ್ಲೀಗ ದೇವರುಗಳಿಗೆ ಜಾಗವಿಲ್ಲ, ಅಲ್ಲೇನಿದ್ದರೂ ಶೈತಾನ್ ದೊರೆ ಯಾಸ್ಕಿನ್ನದ್ದೇ ರಾಜ್ಯಭಾರ. ಭೂಮಿಯ ಮೇಲೆ ಹಸಿರೆಂಬುದೇ ಇಲ್ಲ. ನೀರಿಗಾಗಿ ತ್ರಾಹಿ-ತ್ರಾಹಿ ಎನ್ನುತ್ತಿದ್ದಾರೆ. ಜನ ಉಸಿರಾಡಲು ಸಹ ಕಷ್ಟಪಡುತ್ತಿದ್ದಾರೆ. ಮನುಷ್ಯ ತನ್ನ ಪಾಪಕರ್ಮಗಳಿಂದ ಸೃಷ್ಟಿಸಿಕೊಂಡಿರುವ ಈ ಸಂಕಟದಿಂದ ಪಾರು ಮಾಡಲು ದೇವರೇ ಜನಿಸಿ ಬರಬೇಕು, ಆಗ ಕಲ್ಕಿಯ ಜನನ.‘ಕಲ್ಕಿ’ ಇದು ಸಿನಿಮಾದ (Kalki 2898 AD movie) ಕತೆಯ ಹೊರತಿರುಳು, ಕತೆ ಎಷ್ಟು ರೋಮಾಂಚನಕಾರಿಯಾಗಿದೆಯೋ ಅದನ್ನು ದೃಶ್ಯ ರೂಪದಲ್ಲಿ ಪ್ರಸ್ತುತ ಪಡಿಸಿರುವ ರೀತಿಯೂ ಅಷ್ಟೆ ಅತ್ಯದ್ಭುತವಾಗಿದೆ. ಅದ್ದೂರಿ ಓಪನಿಂಗ್ ಪಡೆದ ಪ್ರಭಾಸ್ (Prabhas) ದೀಪಿಕಾ ಕಲ್ಕಿ ಟಾಕ್ ಆಫ್ ದ ವರ್ಲ್ಡ್ ಆಗಿದೆ. ಕುರುಕ್ಷೇತ್ರದ ಅಂತ್ಯದಲ್ಲಿ ಶ್ರೀಕೃಷ್ಣನಿಂದ ಅಶ್ವತ್ಥಾಮ ಶಾಪ ಪಡೆಯುವುದು ಚಿತ್ರದ ಮೊದಲ ದೃಶ್ಯ. ಅಲ್ಲಿಂದ 6000 ವರ್ಷಗಳ ಬಳಿಕ ಕಾಶಿಯಲ್ಲಿ ಕಥೆ ತೆರೆದುಕೊಳ್ಳುತ್ತದೆ. ಅಂದರೆ ವರ್ತಮಾನದ ಉಲ್ಲೇಖ ಇಲ್ಲದೇ ಭೂತ- ಭವಿಷ್ಯತ್ ಕಾಲದ ಕಲ್ಪನೆಯಲ್ಲಿ ಕಥೆ ಸಾಗುತ್ತದೆ. ಅದೇ ಚಿತ್ರದ ಹೈಲೆಟ್. ಇದೇ ಕೊಂಚ ಕ್ಲಿಷ್ಟಕರ ಕೂಡ ಎನಿಸುತ್ತದೆ. ಆದರೆ ನಾಗ್ ಅಶ್ವಿನ್ ವಿಷನ್, ಮೇಕಿಂಗ್, ಸೃಜನಶೀಲತೆಯನ್ನು ಮೆಚ್ಚಿಕೊಳ್ಳಲೇಬೇಕು. ಪ್ರಭಾಸ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ದಿಶಾ ಪಟಾಣಿ ಅಂಥಹಾ ಸ್ಟಾರ್ ನಟರು ನಟಿಸಿದ್ದಾರೆ.
ಇದನ್ನೂ ವೀಕ್ಷಿಸಿ: ಮದುವೆಯಾದ ನಟರೊಂದಿಗೆ ಪ್ರೀತಿಲಿ ಬಿದ್ದಿದ್ದು ಯಾರೆಲ್ಲಾ? ದರ್ಶನ್ ನಿಖಿತಾ ಬಗ್ಗೆ ಹಬ್ಬಿತ್ತು ಪ್ರೇಮದ ಕಥೆಗಳು !