ಹನಿಮೂನ್ ಇನ್ ಶಿಲ್ಲಾಂಗ್: ಬಾಲಿವುಡ್​ನಲ್ಲಿ ಸಿನಿಮಾ ಆಗ್ತಿದೆ ಕ್ರೈಂ ಕಹಾನಿ!

ಹನಿಮೂನ್ ಇನ್ ಶಿಲ್ಲಾಂಗ್: ಬಾಲಿವುಡ್​ನಲ್ಲಿ ಸಿನಿಮಾ ಆಗ್ತಿದೆ ಕ್ರೈಂ ಕಹಾನಿ!

Published : Jul 31, 2025, 04:27 PM IST

ಪತ್ನಿಯೇ ತನ್ನ ಪ್ರಿಯತಮನ ಜೊತೆ ಸೇರಿ ಪತಿಯ ಮರ್ಡರ್​​ ಮಾಡಿಸಿದ್ದ ಈ ಕೇಸ್ ಈಗ ಸಿನಿಮಾ ಆಗ್ತಾ ಇದೆ. ಈ ಕಥೆಯನ್ನ ಬಾಲಿವುಡ್​​ ಮಂದಿ ಹನಿಮೂನ್ ಇನ್ ಶಿಲ್ಲಾಂಗ್ ಹೆಸರಲ್ಲಿ ಸಿನಿಮಾ ಮಾಡ್ತಾ ಇದ್ದಾರೆ.

ಕೆಲ ದಿನಗಳ ಹಿಂದೆ ಮೇಘಾಲಯದ ಶಿಲ್ಲಾಂಗ್​​ನಲ್ಲಿ ನಡೆದ ಹನಿಮೂನ್ ಮರ್ಡರ್ ಕೇಸ್ ದೇಶಾದ್ಯಂತ ಸದ್ದು ಮಾಡಿತ್ತು. ಪತ್ನಿಯೇ ತನ್ನ ಪ್ರಿಯತಮನ ಜೊತೆ ಸೇರಿ ಪತಿಯ ಮರ್ಡರ್​​ ಮಾಡಿಸಿದ್ದ ಈ ಕೇಸ್ ಈಗ ಸಿನಿಮಾ ಆಗ್ತಾ ಇದೆ. ಈ ಕಥೆಯನ್ನ ಬಾಲಿವುಡ್​​ ಮಂದಿ  ಹನಿಮೂನ್ ಇನ್ ಶಿಲ್ಲಾಂಗ್ ಹೆಸರಲ್ಲಿ ಸಿನಿಮಾ ಮಾಡ್ತಾ ಇದ್ದಾರೆ. ಕಳೆದ ತಿಂಗಳು ಮೇಘಾಲಯದ ಶಿಲ್ಲಾಂಗ್​ನಲ್ಲಿ ನಡೆದ ಮರ್ಡರ್ ಕೇಸ್ ಭಾರಿ ಸದ್ದು ಸುದ್ದಿ ಮಾಡಿತ್ತು. ಅಸಲಿಗೆ ಮೇಘಾಲಯಕ್ಕೆ ಹನಿಮೂನ್​ಗೆ ಅಂತ ಬಂದಿದ್ದ ಇಂದೋರ್ ಮೂಲದ ನವದಂಪತಿ ಕಣ್ಮರೆ ಆಗಿದ್ರು. ಇದೊಂದು ಮಿಸ್ಸಿಂಗ್ ಕೇಸ್ ಅಂದುಕೊಂಡು ತನಿಖೆಗೆ ಇಳಿದಿದ್ದ ಪೊಲೀಸರಿಗೆ ಬಳಿಕ ರೋಚಕ ವಿವರಗಳು ಸಿಕ್ಕಿದ್ವು. ಪತ್ನಿಯೇ ಹನಿಮೂನ್​ ಮೂಡ್​ನಲ್ಲಿದ್ದ ಪತಿಯನ್ನ ಪ್ರಿಯಕರನಿಗಾಗಿ ಕೊಲೆ ಮಾಡಿಸಿದ್ಳು.  

ಎಲ್ಲರನ್ನೂ ಬೆಚ್ಚಿಬೀಳಿಸಿದ್ದ ಈ ಕ್ರೈಂ ಕಹಾನಿಯನ್ನ ಆಧರಿಸಿ ಬಾಲಿವುಡ್ ಮಂದಿ ಸಿನಿಮಾ ಮಾಡ್ತಾ ಇದ್ದಾರೆ. ಹನಿಮೂನ್ ಇನ್ ಶಿಲ್ಲಾಂಗ್ ಅಂತ ಟೈಟಲ್ ಕೂಡ ಫಿಕ್ಸ್ ಮಾಡಿದ್ದಾರೆ. ಬಾಲಿವುಡ್​ ನಿರ್ದೇಶಕ ಎಸ್​ಪಿ ನಿಂಬಾವತ್ ‘ಹನಿಮೂನ್ ಇನ್ ಶಿಲ್ಲಾಂಗ್’ ನ ಪೋಸ್ಟರ್​ ರಿಲೀಸ್ ಮಾಡಿದ್ದು, ಇಂದೋರ್ ಮತ್ತು ಮೇಘಾಲಯದಲ್ಲಿ ಶೂಟಿಂಗ್ ಮಾಡ್ಲಿಕ್ಕೆ ಸಜ್ಜಾಗಿದ್ದಾರೆ. ಅಸಲಿಗೆ ಈ ಕೇಸ್ ನೋಡಿದವರು 1993ರಲ್ಲಿ  ಕನ್ನಡದಲ್ಲಿ  ಬಂದ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಬಾ ನಲ್ಲೆ ಮಧುಚಂದ್ರಕೆ ಸಿನಿಮಾವನ್ನ ನೆನಪಿಸಿಕೊಂಡಿದ್ರು.  ಈ ಸಿನಿಮಾದಲ್ಲಿ ನಾಯಕ ನಾಯಕಿನ್ನ ಮಧುಚಂದ್ರಕೆ ಕರೆದೊಯ್ದು ಕೊಲೆ ಮಾಡ್ತಾನೆ.

ಆದ್ರೆ ಮೇಘಾಲಯ ಕೇಸ್​ನಲ್ಲಿ ಪತ್ನಿಯೇ ಪತಿಯ ಕೊಲೆ ಮಾಡಿಸಿದ್ದಾಳೆ. ಅಷ್ಟು ಬಿಟ್ರೆ ಎಲ್ಲಾ ಸೇಮ್ ಟು ಟೇಮ್. ಇನ್ನೂ ಮೇಘಾಲಯ ಮರ್ಡರ್ ಕೇಸ್​​ಗೆ ಹೋಲಿಕೆಯಾಗುವಂಥಾ ಮತ್ತೊಂದು ಕನ್ನಡ ಸಿನಿಮಾ ಇದೆ. ಅದುವೇ ರಿಂಗ್ ರೋಡ್ ಶುಭಾ. 2015ರಲ್ಲಿ ಬಂದ ಈ ಸಿನಿಮಾ ಕೂಡ ಒಂದು ನೈಜ ಕಥೆಯನ್ನ ಆಧರಿಸಿ ಸಿದ್ದವಾಗಿತ್ತು.  ಶುಭಾ ಅನ್ನೋ ಯುವತಿ ಎಂಗೇಜ್ ಮೆಂಟ್ ಅಗಿದ್ದ ತನ್ನ ಭಾವಿ ಪತಿಯನ್ನ ಗೆಳೆಯನಿಗೋಸ್ಕರ ಕೊಲೆ ಮಾಡಿಸಿದ್ದಳು. ಇದೀಗ ಮೇಘಾಲಯ ಮರ್ಡರ್ ಕೇಸ್​ ಸ್ಪೂರ್ತಿಯಿಂದಲೇ ಬಾಲಿವುಡ್ ಮೂವಿಯೊಂದು ಬರ್ತಾ ಇದೆ. ಜನರನ್ನ ಬೆಚ್ಚಿಬೀಳಿಸಿದ ಕ್ರೈಂ ಕಹಾನಿ ಸಿನಿಮಾ ರೂಪದಲ್ಲಿ ಬಂದು ನೋಡುಗರನ್ನ ಬೆಚ್ಚಿಬೀಳಿಸೋ ತಯಾರಿಯಲ್ಲಿದೆ.

06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
02:48ಪೆದ್ದಿ ಸೆಟ್​ನಲ್ಲಿ ಕಣ್ಣೀರಿಟ್ಟಿದ್ರಾ ಜಾನ್ವಿ ಕಪೂರ್? ಚಾಟ್ಸ್ ವಿವರ ವೈರಲ್, ಏನಿದು ಜಾನು ಚಾಟ್ ಸೀಕ್ರೆಟ್!
04:41ಸಾಯಿ ಪಲ್ಲವಿ, ರುಕ್ಮಿಣಿ ವಸಂತ್ ಕೂಡ ಅಲ್ಲ: ಸುಬ್ಬುಲಕ್ಷ್ಮಿ ಬಯೋಪಿಕ್​ಗೆ ರಶ್ಮಿಕಾ ಎಂಟ್ರಿ?
03:08Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!
Read more