ರಾಕಿಂಗ್ ಸ್ಟಾರ್ ಯಶ್​ ನಟನೆಯ ಟಾಕ್ಸಿಕ್​​​​​ನಲ್ಲಿ ಕರೀನಾ ಕಪೂರ್​.. ಇದು ನಿಜಾನ..?

ರಾಕಿಂಗ್ ಸ್ಟಾರ್ ಯಶ್​ ನಟನೆಯ ಟಾಕ್ಸಿಕ್​​​​​ನಲ್ಲಿ ಕರೀನಾ ಕಪೂರ್​.. ಇದು ನಿಜಾನ..?

Published : Mar 20, 2024, 02:26 PM IST

ಸ್ಟಾರ್​​ ನಟರ ಸಿನಿಮಾಗಳೇ ಹಂಗೆ. ಸಿನಿಮಾ ಸೆಟ್ಟೇರಿದ ದಿನದಿಂದ ತೆರೆಕಾಣೋ ವರೆಗೂ ಚಿತ್ರ ಪ್ರೇಮಿಗಳನ್ನ ಕಾಡುತ್ತೆ. ಈಗ ರಾಕಿಂಗ್ ಸ್ಟಾರ್ ಅಭಿಮಾನಿಗಳನ್ನ ಕಾಡಿತ್ತಿರೋ ಸಿನಿಮಾ ಟಾಕ್ಸಿಕ್. ಈ ಸಿನಿಮಾ ಅನೌನ್ಸ್ ಆದ ದಿನದಿಂದ ರಾಕಿ ಪ್ಯಾನ್ಸ್ ಟಾಕ್ಸಿಕ್​ ಅಪ್ಡೇಡ್​​​​ಗಾಗಿ ಕಾಯುತ್ತಿದ್ದಾರೆ.

ಸ್ಟಾರ್​​ ನಟರ ಸಿನಿಮಾಗಳೇ ಹಂಗೆ. ಸಿನಿಮಾ ಸೆಟ್ಟೇರಿದ ದಿನದಿಂದ ತೆರೆಕಾಣೋ ವರೆಗೂ ಚಿತ್ರ ಪ್ರೇಮಿಗಳನ್ನ ಕಾಡುತ್ತೆ. ಈಗ ರಾಕಿಂಗ್ ಸ್ಟಾರ್ ಅಭಿಮಾನಿಗಳನ್ನ ಕಾಡಿತ್ತಿರೋ ಸಿನಿಮಾ ಟಾಕ್ಸಿಕ್. ಈ ಸಿನಿಮಾ ಅನೌನ್ಸ್ ಆದ ದಿನದಿಂದ ರಾಕಿ ಪ್ಯಾನ್ಸ್ ಟಾಕ್ಸಿಕ್​ ಅಪ್ಡೇಡ್​​​​ಗಾಗಿ ಕಾಯುತ್ತಿದ್ದಾರೆ. ಈಗ ಟಾಕ್ಸಿಕ್ ಬಗ್ಗೆ ಬಿಗ್ ಅಪ್ಡೇಟ್ ಒಂದು ವೈರಲ್ ಆಗಿದೆ. ಅದೇ ಟಾಕ್ಸಿಕ್ ನಾಯಕಿ ವಿಚಾರ. ಟಾಕ್ಸಿಕ್ ಪ್ಯಾನ್ ವರ್ಲ್ಡ್​ ಸಿನಿಮಾ. ಅಷ್ಟೆ ಅಲ್ಲ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಆಗಿರೋದ್ರಿಂದ ಟಾಕ್ಸಿಕ್ ಫಿವರ್ ದೇಶಾದ್ಯಂತ ಇದೆ. ಟಾಕ್ಸಿಕ್ ಗಮಲನ್ನ ವರ್ಲ್ಡ್ ವೈಡ್​ ಹಬ್ಬಿಸೋ ಹುಮ್ಮಸ್ಸಿನಲ್ಲಿ ಯಶ್ ಇದ್ದಾರೆ. ಹೀಗಾಗಿ ಟಾಕ್ಸಿಕ್​​ಗೆ ಪ್ಯಾನ್ ವರ್ಲ್ಡ್​ನಲ್ಲಿ ಫೇಮ್ ಇರೋ ಹೀರೋಯಿನ್ ಎಂಟ್ರಿ ಕೊಡಬೇಕಿದೆ. ಆ ವಿಚಾರದಲ್ಲಿ ಈಗ ಬಾಲಿವುಡ್ ಬೇಬೋ ಕರೀನಾ ಕಪೂರ್​ ಹೆಸ್ರು ಸಿಕ್ಕಾಪಟ್ಟೆ ಟ್ರೆಂಡಿಂಗ್​ನಲ್ಲಿದೆ. 

ಯಶ್ ನಟನೆಯ ಟಾಕ್ಸಿಕ್ ನಲ್ಲಿ ಕರೀನಾ ನಟಿಸುತ್ತಾರೆ ಅಂತ ಟಾಕ್ ಆಗಿದೆ. ಹೀಗಾಗಿ ರಾಕಿ ಫ್ಯಾನ್ಸ್​ ಕರೀನಾ ಇದು ನಿಜಾನ ಅಂತ ಕೇಳುತ್ತಿದ್ದಾರೆ. ಟಾಕ್ಸಿಕ್ ಚಿತ್ರದ ಮೂಲಕ ಬಾಲಿವುಡ್ ನ ಬೆಬೋ ಕರಿನಾ ಕಪೂರ್, ಕನ್ನಡ ಚಿತ್ರರಂಗಕ್ಕೆ ಬಲಗಾಲಿಟ್ಟು ಬರುವುದು ಖಚಿತ ಎಂಬ ಭವಿಷ್ಯವಾಣಿ ಹಿಂದಿನಿಂದ ಕೇಳಿ ಬರುತ್ತಾನೇ ಇದೆ. ಟಾಕ್ಸಿಕ್ ತಂಡದಿಂದಲೇ ಕರೀನಾಗೆ ಆಫರ್ ಮಾಡಲಾಗಿದೆ ಅನ್ನೋ ಮಾಹಿತಿ ಹರಿದಾಡಿತ್ತು. ಅದ್ರೆ ಆ ಸುದ್ದಿಯನ್ನ ಕನ್ಫರ್ಮ್ ಮಾಡಿರಲಿಲ್ಲ ಅಷ್ಟೆ. ಬಟ್ ಈಗ ಬೇಬೋ ಕರೀನಾ ಆಡಿದ ಮಾತು ಕೇಳಿದ್ರೆ ಬಾಲಿವುಡ್​ ಸುಂದ್ರಿ ಟಾಕ್ಸಿಕ್​ನಲ್ಲಿ ನಟಿಸಿರೋದು ನಿಜ ಅನ್ನಿಸುತ್ತಿದೆ. ನಟಿ ಕರೀನಾ ಕಪೂರ್​ ಇತ್ತೀಚೆಗೆ ತನ್ನ ಫ್ಯಾನ್ಸ್​ ಜೊತೆ ಪ್ರಶ್ನೋತ್ತರ ಕಾರ್ಯಕ್ರಮ ಮಾಡಿದ್ರು. ನಿಮ್ಮ ಮುಂದಿನ ಚಿತ್ರ ''ಕ್ರೂ'' ಸಿನಿಮಾ ಪ್ರಚಾರಕ್ಕೆ ಹೈದ್ರಾಬಾದ್ ಗೆ ಬರುತ್ತೀರಾ ಎಂಬ ಅಭಿಮಾನಿ ಕೇಳಿದ ಪ್ರಶ್ನೆಗೆ ಕರೀನಾ, ನಾನು ದೊಡ್ಡ ಸೌತ್ ಸಿನಿಮಾ ಮಾಡುತ್ತಿದ್ದೇನೆ. 

ಇನ್ನೂ ಇದು ಪ್ಯಾನ್ ಇಂಡಿಯಾ ಕಾಲ. ಹೀಗಾಗಿ ಈ ಚಿತ್ರದ ಚಿತ್ರೀಕರಣ ಎಲ್ಲಿ ನಡೆಯುತ್ತೆ ಅನ್ನುವ ವಿಚಾರ ನನಗೆ ಗೊತ್ತಿಲ್ಲ. ಆದರೆ ನಾನು ಈ ಚಿತ್ರಕ್ಕೆ ಸಿಕ್ಕಾಪಟ್ಟೆ ಎಕ್ಸಾಯಟ್ ಆಗಿದ್ದೇನೆ ಎಂದಿದ್ದಾರೆ. ಕರೀನಾ ಹೀಗೆ ಹೇಳುತ್ತಿದ್ದಂತೆ ಇದು ಟಾಕ್ಸಿಕ್ ಸಿನಿಮಾದ್ದೇ ಸುದ್ದಿ ಅಂತ ಕಮೆಂಟ್ ಮಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಸಧ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೌಂಡ್ ಮಾಡುತ್ತಿರೋ ಟಾಪ್ ಒನ್ ಸಿನಿಮಾ ಅಂದ್ರೆ ಅದು ಟಾಕ್ಸಿಕ್. ಅಷ್ಟೆ ಅಲ್ಲ ಬಾಲಿವುಡ್​ ಹೀರೋಯಿನ್​ಗಳಿಗೆ ಸೂಟ್ ಆಗೋ ತರದ ಕಥೆ ಇರೋದು ಟಾಕ್ಸಿಕ್​ ಸಿನಿಮಾದಲ್ಲೇ. ಯಾಕಂದ್ರೆ ಬೇರೆಲ್ಲಾ ಸೌತ್​​ ಸಿನಿಮಾಗಳು ಅಲ್ಲಿನ ಸಂಸ್ಕೃತಿ ಆಚಾರಣೆ ಹಿನ್ನೆಲೆಯಲ್ಲಿ ಸಿದ್ಧವಾಗುತ್ತಿವೆ. 

ಆದ್ರೆ ಟಾಕ್ಸಿಕ್ ಸಿನಿಮಾ ಗೋವಾ ಡ್ರಗ್ ಮಾಫಿಯಾ ಸುತ್ತ ಸುತ್ತುತ್ತೆ. ಹೀಗಾಗಿ ಬಿಟೌನ್​ ಹೀರೋಯಿನ್ಸ್​​​​​ಗೆ ಇದು ಸೂಟ್ ಆಗೋ ಕತೆ ಆಗಿರೋದ್ರಿಂದ ಈ ಸಿನಿಮಾದಲ್ಲೇ ಬೇಬೋ ನಟಿಸುತ್ತಿದ್ದಾರೆ ಅನ್ನೋ ಸುಳಿವು ಸಿಕ್ಕಿದೆ ಅಂತ ಯಶ್ ಫ್ಯಾನ್ಸ್​ ಊಹಿಸಿದ್ದಾರೆ. ಭಟ್​ ಈ ಬಗ್ಗೆ ಯಶ್ ಆಗಲಿ ಟಾಕ್ಸಿಕ್​ ಟೀಂ ಆಗಲಿ ಕರೀನಾ ಆಗಲಿ ಕನ್ಫರ್ಮ್ ಮಾಡಿಲ್ಲ. ಯಶ್​ ಕೆಜಿಎಫ್​​ಗೆ ಬಾಲಿವುಡ್​ನಿಂದ ರವೀನಾ ಟಂಡನಾರನ್ನ ಕರೆಸಿದ್ರು. ಚಿತ್ರರಂಗದಿಂದ ಕಳೆದ ಹೋಗಿದ್ದ ರವೀನಾಗೆ ಕೆಜಿಎಫ್​ ದೊಡ್ಡ ಇಮೇಜ್ ತಂದುಕೊಟ್ಟಿತ್ತು. ಈಗ ರವೀನಾ ಅಂದ್ರೆ ರಮಿಕಾ ಸೇನ್ ಅಂತಾರೆ. ಈಗ ಬಿಟೌನ್​​ನಲ್ಲಿ ಔಟ್​ಡೇಟೆಡ್ ಆಗಿರೋ ಕರೀನಾ ಕಪೂರ್​ ಮತ್ತೆ ಬಿಗ್​ ಸಿನಿಮಾದಿಂದ ಕಮ್​ ಬ್ಯಾಕ್ ಆಗ್ತಿದ್ದಾರೆ ಅನ್ನೋದು ನಿಜ. ಆದ್ರೆ ಅದು ಟಾಕ್ಸಿಕ್​ ಸಿನಿಮಾನೇನಾ ಅನ್ನೋದೆ ಈಗಿರೋ ಕುತೂಹಲ.

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
Read more