
ಪುಷ್ಪ 2 ಚಿತ್ರತಂಡ 1800 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ ಎಂದು ಹೇಳಿಕೊಂಡಿದ್ದರ ಬೆನ್ನಲ್ಲೇ, ನಿರ್ಮಾಪಕರ ಮನೆ ಕಛೇರಿ ಮೇಲೆ ಐಟಿ ದಾಳಿ ನಡೆದಿದೆ. ಚಿತ್ರದ ನಿಜವಾದ ಗಳಿಕೆ ಎಷ್ಟು ಎಂಬ ಪ್ರಶ್ನೆ ಈಗ ಎದ್ದಿದೆ. ಕೆಜಿಎಫ್ 2 ದಾಖಲೆಯನ್ನು ಮುರಿದಿದೆ ಎಂಬ ಪುಷ್ಪ 2 ಹೇಳಿಕೆ ನಿಜವೇ?
ಪುಷ್ಪ-2 ಸಿನಿಮಾ 1800 ಪ್ಲಸ್ ಕೋಟಿ ಗಳಿಸಿದೆ ಅಂತ ಚಿತ್ರತಂಡ ಹೇಳಿಕೊಂಡಿದೆ. ಖುದ್ದು ಮೈತ್ರಿ ಮೂವಿ ಮೇಕರ್ಸ್ ಚಿತ್ರದ ಗಳಿಕೆ ಬಗ್ಗೆ ಅಫೀಷಿಯಲ್ ಅನೌನ್ಸ್ ಮೆಂಟ್ ಮಾಡಿದೆ. ಇದರ ಬೆನ್ನಲ್ಲೇ ನಿರ್ಮಾಪಕರ ಮನೆ ಕಛೇರಿ ಮೇಲೆ ಐಟಿ ರೈಡ್ ನಡೆದಿದೆ. ಇಷ್ಟು ದಿನ ನಮ್ಮ ಸಿನಿಮಾ ಸಾವಿರಾರು ಕೋಟಿ ಗಳಿಸಿದೆ ಅಂತಿದ್ದವರು ಐಟಿ ನವರ ಮುಂದೆ ಮಾತ್ರ ಅಸಲಿ ಲೆಕ್ಕ ಬಿಚ್ಚಿಟ್ಟಿದ್ದಾರೆ. ಅಲ್ಲಿಗೆ ಪುಷ್ಪನ ಕಳ್ಳ ಲೆಕ್ಕ ಬಟಾಬಯಲಾಗಿದೆ.ಕೆಜಿಎಫ್-2, RRR ಮತ್ತು ಬಾಹುಬಲಿ-2 ಸಿನಿಮಾಗಳ ಹೆಸರಲ್ಲಿದ್ದ ದಾಖಲೆಯನ್ನ ಪುಷ್ಪ ಅಳಿಸಿ ಹಾಕಿದ್ದಾನೆ ಅಂತ ಚಿತ್ರತಂಡ ಸೆಲೆಬ್ರೇಟ್ ಮಾಡಿತ್ತು. ಬಾಹುಬಲಿ-2, RRR ತೆಲುಗು ಸಿನಿಮಾಗಳೇ. ಸೋ ಪುಷ್ಪನಿಗೆ ನಮ್ಮ ಕೆಜಿಎಫ್-2 ರೆಕಾರ್ಡ್ ಮುರಿಯೋದ್ರ ಬಗ್ಗೆ ಹೆಚ್ಚಿನ ಆಸಕ್ತಿ ಇದ್ದಿದ್ದು ಸುಳ್ಳಲ್ಲ.ಮೊದಲಿಂದಲೂ ಪುಷ್ಪ ಮೇಕರ್ಸ್ ಕೆಜಿಎಫ್ ಜೊತೆ ಜಿದ್ದು ಸಾಧಿಸ್ತಾನೆ ಬಂದಿದ್ರು. ಕೆಜಿಎಫ್-2 ಬಾಕ್ಸಾಫೀಸ್ 1250 ಕೋಟಿ ಕಲೆಕ್ಷನ್ ಮಾಡಿತ್ತು. ಇದನ್ನ ಮೀರಿಸ್ತಾನೇ ಪುಷ್ಪ ಟೀಂ ಗೆದ್ದವರಂತೆ ಬೀಗಿದ್ರು.ಆದ್ರೆ ಪುಷ್ಪ ಟೀಂ ತೋರಿಸಿದ್ದು ಕಳ್ಳ ಲೆಕ್ಕನಾ..? ನಿಜಕ್ಕೂ ಸಿನಿಮಾದ ಕಲೆಕ್ಷನ್ ಇಷ್ಟೊಂದು ಆಗಿಲ್ವಾ..?
ದರ್ಶನ್ಗೆ ಬದುಕಿನ ಪಾಠ ಕಲಿಸಿತಾ ಜೈಲುವಾಸ? ಬದಲಾದ್ರಾ ದರ್ಶನ್;ಒಂದಾದ ಅಣ್ಣ-ತಮ್ಮ,ತಾಯಿ-ಮಗ