
ಇತ್ತೀಚಿಗೆ ದೀಪಿಕಾ ಪಡುಕೋಣೆ ಸ್ಪಿರಿಟ್, ಕಲ್ಕಿ ಸಿನಿಮಾಗಳಿಂದ ಹೊರಬಿದ್ದಿದ್ದು ಸಖತ್ ಸುದ್ದಿ ಮಾಡಿತ್ತು. ಇದಕ್ಕೆ ದೀಪಿಕಾ ವಿಧಿಸೋ ಷರತ್ತುಗಳೇ ಕಾರಣ ಅಂತ ಗೊತ್ತಾಗಿತ್ತು. ದೀಪಿಕಾರ 8ಗಂಟೆಯ ಶಿಫ್ಟ್ ಷರತ್ತಿನ ಬಗ್ಗೆ ಈಗ ಮತ್ತೊಬ್ಬ ಬಹುಭಾಷಾ ನಟಿ ಪ್ರಿಯಾಮಣಿ ಮಾತನಾಡಿದ್ದಾರೆ. ಪ್ರಿಯಾ ಹೇಳಿದ್ದೇನು..?
ಇತ್ತೀಚಿಗೆ ದೀಪಿಕಾ ಪಡುಕೋಣೆ ಭಾರಿ ಸುದ್ದಿಯಲ್ಲಿದ್ದಾರೆ. ಟಾಲಿವುಡ್ನ ಎರಡೂ ಬಿಗ್ ಪ್ರಾಜೆಕ್ಟ್ಗಳಿಂದ ದೀಪಿಕಾನ ಕೈ ಬಿಡಲಾಗಿತ್ತು. ಅದಕ್ಕೆ ಕಾರಣ ದೀಪಿಕಾ ವಿಧಿಸೋ ಷರತ್ತುಗಳು ಅಂತ ಹೇಳಲಾಗಿತ್ತು. ದುಬಾರಿ ಸಂಭಾವನೆ , ಲಾಭದಲ್ಲಿ ಶೇರ್ ಕೇಳುವುದರ ಜೊತೆಗೆ ದಿನಕ್ಕೆ 8 ಗಂಟೆ ಮಾತ್ರ ಶೂಟಿಂಗ್ ಮಾಡೋದು ಅನ್ನೋ ಷರತ್ತುಗಳನ್ನ ದೀಪಿಕಾ ಹಾಕ್ತಾರಂತೆ. ಇದಕ್ಕೆ ಉತ್ತರ ಕೊಟ್ಟಿದ್ದ ದೀಪಿಕಾ , ಎಷ್ಟೋ ನಟರು ಇದಕ್ಕೂ ಕಡಿಮೆ ಅವಧಿ ಕೆಲಸ ಮಾಡಿ ನಮಗಿಂತ ಹೆಚ್ಚು ಸಂಭಾವನೆ ಪಡೀತಾರೆ. ನಟಿಯರು ಕೇಳಿದ್ರೆ ತಪ್ಪಾ ಅಂತ ಸವಾಲ್ ಹಾಕಿದ್ರು. ಅದಕ್ಕೀಗ ಮತ್ತೊಬ್ಬ ಬಹುಭಾಷಾ ನಟಿ- ಕನ್ನಡತಿ ಪ್ರಿಯಾ ಟಾಂಗ್ ಕೊಟ್ಟಿದ್ದಾರೆ. ಸಿನಿಮಾ ಶೂಟಿಂಗ್ ಅನ್ನೋದು ಎಲ್ಲರೂ ಸೇರಿ ಮಾಡುವ ಕೆಲಸ ಅದಕ್ಕೆ ಸಮಯದ ಮಿತಿ ಹಾಕಿಕೊಂಡು ಮಾಡೋದಕ್ಕೆ ಸಾಧ್ಯ ಇಲ್ಲ ಅಂದಿದ್ದಾರೆ.