vuukle one pixel image

ಯಶ್ ಕೆಜಿಎಫ್‌ಗೆ ಸೆಡ್ಡು ಹೊಡೆಯುತ್ತಾರಾ ಚಿಯಾನ್ ವಿಕ್ರಂ? ಪಾ ರಂಜಿತ್ ತಂಗಲಾನ್‌ಗೆ ಸ್ಪೂರ್ತಿಯಾಗಿದ್ದು ಕೋಲಾರ ಗಣಿ!

Bindushree N  | Updated: Jul 12, 2024, 9:59 AM IST

ಯಶ್ ನಟಿಸಿದ 'ಕೆಜಿಎಫ್ 2' ತೆರೆಕಂಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡುವ ವೇಳೆ ತಮಿಳಿನ ನಿರ್ದೇಶಕ ಪಾ. ರಂಜಿತ್ 'ಕೆಜಿಎಫ್'ನ (KGF)ಅಸಲಿ ಕಥೆಯನ್ನು ಹೇಳುತ್ತೇನೆ ಎಂದು ಟಕ್ಕರ್ ಕೊಟ್ಟಿದ್ದರು. ಅದೇ ಸಿನಿಮಾದ ಟ್ರೈಲರ್ ಜುಲೈ 10 ರಿಲೀಸ್ ಆಗಿದೆ. 'ಕಬಾಲಿ', 'ಸರ್ಪಟ್ಟ ಪರಂಬರೈ' ಅಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ಪಾ.ರಂಜಿತ್ ಆಕ್ಷನ್ ಕಟ್ ಹೇಳಿರುವ ಮತ್ತೊಂದು ಸಿನಿಮಾವಿದು. ವಿಕ್ರಮ್ (Chiyaan Vikram) ಈ ಸಿನಿಮಾದಲ್ಲೂ ವಿಚಿತ್ರ ಹಾಗೂ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಸಿನಿಮಾ ಪಾತ್ರದ ಕುರಿತು ಒಬ್ಬ ನಟನಿಗೆ ಇರಬೇಕಾದ ಡೇಡಿಕೇಷನ್ ಎಂಥಾದ್ದು ಎನ್ನುವುದನ್ನು ವಿಕ್ರಂ ರನ್ನು ನೋಡಿಯೇ ಕಲಿಯಬೇಕು. ಇವರೊಂದಿಗೆ ಪ್ರಮುಖ ಪಾತ್ರದಲ್ಲಿ ಮಾಳವಿಕಾ ಮೋಹನನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ‘ತಂಗಲಾನ್’ ಸಿನಿಮಾ(Thangalaan Movie) ಬ್ರಿಟಿಷ್‌ ಆಳ್ವಿಯ ಅವಧಿಯಲ್ಲಿ ಕೋಲಾರ(Kolar) ಚಿನ್ನದ ಗಣಿ ಪ್ರದೇಶದಲ್ಲಿ ನಡೆದ ಘಟನೆಗಳನ್ನು ಆಧರಿಸಿದೆ. ಚಿತ್ರದಲ್ಲಿ ನಟ ವಿಕ್ರಮ್ ಒಬ್ಬ ಉಗ್ರ ಬುಡಕಟ್ಟು ನಾಯಕನಾಗಿ ಕಾಣಿಸಿಕೊಂಡಿದ್ದಾರೆ. 2 ನಿಮಿಷ 9 ಸೆಕೆಂಡ್ ಇರುವ ಟ್ರೇಲರ್‌ಅನ್ನು ‘ಎಕ್ಸ್‌’ನಲ್ಲಿ ನಟ ವಿಕ್ರಮ್ ಹಂಚಿಕೊಂಡಿದ್ದಾರೆ. ಟ್ರೇಲರ್, ಪಾರ್ವತಿ ತಿರುವೋತ್ತು ಅವರ ಪಾತ್ರವು ‘ವಿಕ್ರಮ್ ಮನಸ್ಸಿನಲ್ಲಿ ಏನಾಗುತ್ತಿದೆ’ ಎಂದು ಪ್ರಶ್ನಿಸುವ ಮೂಲಕ ಪ್ರಾರಂಭವಾಗುತ್ತದೆ. ಬುಡಕಟ್ಟು ನಾಯಕನ (ವಿಕ್ರಮ್) ಮಾನಸಿಕ ಆರೋಗ್ಯದ ಬಗ್ಗೆ ಸುಳಿವು ನೀಡುತ್ತದೆ. ಅವರ ಗ್ರಾಮಕ್ಕೆ ಬ್ರಿಟಿಷ್ ಅಧಿಕಾರಿ ಲಾರ್ಡ್ ಕ್ಲೆಮೆಂಟ್ ನೇತೃತ್ವದ ಬ್ರಿಟಿಷರು ಚಿನ್ನವನ್ನು ಹುಡುಕಲು ಬರುವುದನ್ನು ತೋರಿಸುತ್ತದೆ. ಚಿನ್ನ ಅಗೆದು ಭೂಮಿಯನ್ನು ಹಾಳು ಮಾಡದಂತೆ ಭೂಮಿಯನ್ನು ರಕ್ಷಿಸುವ ಆರತಿ ಎಂಬ ಮಾಂತ್ರಿಕಳ ಪಾತ್ರವನ್ನು ಮಾಳವಿಕಾ ಮೋಹನನ್ ನಿರ್ವಹಿಸಿದ್ದಾರೆ. ಟ್ರೇಲರ್‌ನಲ್ಲಿ ವಿಕ್ರಮ್ ಚಿನ್ನದ ಧೂಳಿನಲ್ಲಿ ಮಿಂದಿರುತ್ತಾರೆ. ಅವರು ಜನ ಸಮೂಹವನ್ನು ಸೇರುವುದರೊಂದಿಗೆ ಟ್ರೇಲರ್ ಕೊನೆಗೊಳ್ಳುತ್ತದೆ.

ಇದನ್ನೂ ವೀಕ್ಷಿಸಿ:  ಅಂದು ಅಕ್ಕ, ಭಾವಾನೆ ಎಲ್ಲಾ.. ಹಣ ಅಹಂಕಾರ ಬಂದ ಮೇಲೆ ಫ್ಯಾಮಿಲಿ ದೂರ..!