ಮದುವೆ ಹೆಚ್ಚು ದಿನ ಬಾಳೋದಿಲ್ಲ ಎಂದಿದ್ದೇಕೆ ನಿಮ್ರಿತ್?: ಮುರಿದೇ ಹೋಯ್ತಾ ಅಭಿಷೇಕ್ -ಐಶ್ವರ್ಯ ದಾಂಪತ್ಯ?

ಮದುವೆ ಹೆಚ್ಚು ದಿನ ಬಾಳೋದಿಲ್ಲ ಎಂದಿದ್ದೇಕೆ ನಿಮ್ರಿತ್?: ಮುರಿದೇ ಹೋಯ್ತಾ ಅಭಿಷೇಕ್ -ಐಶ್ವರ್ಯ ದಾಂಪತ್ಯ?

Published : Oct 27, 2024, 04:29 PM IST

ಅಭಿಷೇಕ್ ಬಚ್ಚನ್ - ಐಶ್ವರ್ಯ ರೈ ನಡುವಿನ ಬಿರುಕಿಗೆ ನಟಿ ನಿಮ್ರತ್ ಕೌರ್ ಕಾರಣ ಅನ್ನೋ ವದಂತಿ ಇತ್ತೀಚಿಗೆ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ., ಈ ನಡುವೆ ಅಭಿಷೇಕ್ ಅಂಡ್ ನಿಮ್ರಿತ್ ಕ್ಲೋಸ್ ಆಗಿರೋ ಫೋಟೊವೊಂದು ವೈರಲ್ ಆಗಿದೆ. 

ಅಭಿಷೇಕ್ ಬಚ್ಚನ್ - ಐಶ್ವರ್ಯ ರೈ ನಡುವಿನ ಬಿರುಕಿಗೆ ನಟಿ ನಿಮ್ರತ್ ಕೌರ್ ಕಾರಣ ಅನ್ನೋ ವದಂತಿ ಇತ್ತೀಚಿಗೆ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ., ಈ ನಡುವೆ ಅಭಿಷೇಕ್ ಅಂಡ್ ನಿಮ್ರಿತ್ ಕ್ಲೋಸ್ ಆಗಿರೋ ಫೋಟೊವೊಂದು ವೈರಲ್ ಆಗಿದೆ. ಅಷ್ಟೇ ಅಲ್ಲ ಮದುವೆಗಳು ಹೆಚ್ಚು ದಿನ ಬಾಳಲ್ಲ ಅಂತ ನಿಮ್ರಿತ್ ಅಭಿಷೇಕ್ ಎದುರು ಹೇಳಿರೋ ಹಳೆ ವಿಡಿಯೋ ಕೂಡ ಸದ್ದು ಮಾಡ್ತಾ ಇದೆ. ಹಾಗಾದ್ರೆ ನಿಜಕ್ಕೂ ಜ್ಯೂ.ಬಚ್ಚನ್, ನಿಮ್ರತ್ ಜೊತೆ ರಿಲೇಷನ್​ಶಿಪ್​ನಲ್ಲಿದ್ದಾರಾ..? ಬಾಲಿವುಡ್​ನ ತಾರಾ ಜೋಡಿ ಐಶ್ವರ್ಯ & ಅಭಿಷೇಕ್ ದಾಂಪತ್ಯದಲ್ಲಿ ಬಿರುಕು ಮೂಡೋದಕ್ಕೆ ನಟಿ ನಿಮೃತ್ ಕೌರ್ ಕಾರಣ ಅನ್ನೋ ಸುದ್ದಿ ಸಿನಿಲೋಕದಲ್ಲಿ ಹಲ್ ಚಲ್ ಎಬ್ಬಿಸಿದೆ. 

ಅಸಲಿಗೆ 2022ರಲ್ಲಿ ದಸ್ವಿ ಅನ್ನೋ ಓಟಿಟಿ ಸಿನಿಮಾದಲ್ಲಿ ಅಭಿಷೇಕ್ ಜೊತೆಗೆ ನಿಮೃತ್ ನಟನೆ ಮಾಡಿದ್ಳು. ಆಗಿನಿಂದಲೇ ಅಭಿಷೇಕ್ ಜೊತೆಗೆ ನಿಮೃತ್ ಒಡನಾಟ ಶುರುವಾಗಿತ್ತು. ಇವರ ಲವ್ವಿ ಡವ್ವಿ ಕಾರಣದಿಂದಲೇ ಐಶ್ವರ್ಯ, ಅಭಿಷೇಕ್​ರನ್ನ ತೊರೆದು ಪ್ರತ್ಯೇಕವಾಗಿ ವಾಸ ಮಾಡ್ತಾ ಇದ್ದಾರೆ ಅಂತ ಗಾಸಿಪ್ ಹರಿದಾಡ್ತಾ ಇದೆ. ಈ ನಡುವೆ ದಸ್ವಿ ಟೈಂನಲ್ಲಿ ಅಭಿಷೇಕ್ ಌಂಡ್ ನಿಮೃತ್ ಒಟ್ಟಾಗಿ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ರು. ಈ ಸಂದರ್ಭದಲ್ಲಿ ಮದುವೆ, ಮಕ್ಕಳು, ಸಿನಿಮಾ  ಇತ್ಯಾದಿಗಳ ಬಗ್ಗೆ ಪ್ರಶ್ನೆ ಕೇಳಲಾಯಿತು.  ಅಭಿಷೇಕ್ ಬಚ್ಚನ್ ಮದುವೆಯ ಬಗ್ಗೆ ಮಾತನಾಡುತ್ತಲೇ ತಮ್ಮ ದಾಂಪತ್ಯದ ಬಗ್ಗೆಯೂ ಮಾತನಾಡಿದ್ರು. ಆಗ  ನಿಮ್ರತ್ "ಮದುವೆಗಳು ಹೆಚ್ಚು ಕಾಲ ಉಳಿಯೋದಿಲ್ಲ" ಅಂತ ವ್ಯಂಗ್ಯ ಮಾಡಿದ್ರು.

ಅಭಿಷೇಕ್ ಕೂಡ ನಿಮೃತ್ ಮಾತಿಗೆ ನಕ್ಕು ಧನ್ಯವಾದಗಳು ಅಂತ ತಮಾಷೆಯಾಗಿ ಹೇಳಿದ್ದರು. ಆಗ ಇದು ತಮಾಷೆಯಾಗಿ ಕಂಡಿದ್ದರೂ ಈಗ ನಿಮ್ರತ್​ ಮಾತು ವೈರಲ್​ ಆಗ್ತಾ ಇವೆ. ಆವತ್ತು ನಿಮೃತ್ ಹೀಗೇಕೆ ಹೇಳಿದ್ರು ಅನ್ನೋದ್ರ ಬಗ್ಗೆ ಜೋರಾಗಿ ಚರ್ಚೆಯಾಗ್ತಾ ಇದೆ. ಅಷ್ಟೊತ್ತಿಗಾಗಲೇ ಅಭಿಷೇಕ್-ನಿಮೃತ್ ನಡುವೆ ಲವ್ವಿ ಡವ್ವಿ ಶುರುವಾಗಿತ್ತು. ಅದೇ ಕಾರಣಕ್ಕೆ ನಿಮೃತ್ ಹೀಗೆ ಹೇಳಿದ್ರು ಅಂತ ಫ್ಯಾನ್ಸ್ ಕಾಮೆಂಟ್ ಮಾಡ್ತಾ ಇದ್ದಾರೆ. ಈ ನಡುವೆ ಅಭಿಷೇಕ್ ಮತ್ತು ನಿಮೃತ್ ತುಂಬಾನೇ ಕ್ಲೋಸ್ ಆಗಿರೋ ಡೀಪ್ ಫೇಕ್ ಫೋಟೋವೊಂದು ಕೂಡ ವೈರಲ್ ಅಗಿದ್ದು ಎಲ್ಲೆಡೆ ಓಡಾಡ್ತಾ ಇದೆ. ಒಟ್ನಲ್ಲಿ ಐಶ್ವರ್ಯ ರೈ - ಅಭಿಷೇಕ್ ಡಿವೋರ್ಸ್ ಕಹಾನಿ ಓಡಾಡೋದಕ್ಕೆ ಶುರುವಾಗಿ ತುಂಬಾ ದಿನಗಳಾಯ್ತು. ಈಗ ಈ ಕಹಾನಿಯಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಇದರ ಅಸಲೀಯತ್ತೇನು ಅನ್ನೋದು ಹೊರಗೆ ಬರಬೇಕಿದೆ.

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more