ಖಾಸಗಿ ಕಾರ್ಯಕ್ರಮದ ನಿಮಿತ್ತ ಶಿರಸಿಗೆ ಭೇಟಿ ನೀಡಿದ್ದ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್, ಕಳೆದ ಮೂರು ದಿನಗಳಿಂದಲೂ ಶಿರಸಿಯಲ್ಲಿ ಬೀಡುಬಿಟ್ಟಿದ್ದರು. ಶಿರಸಿ ಸುತ್ತಾಡಿ ಸದ್ಯ ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ. ಶಿವಣ್ಣನ ನೋಡಿದ ಕೂಡಲೇ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬೀಳುತ್ತಿದ್ದ ದೃಶ್ಯಗಳು ವೈರಲ್ ಆಗಿವೆ.
ಖಾಸಗಿ ಕಾರ್ಯಕ್ರಮದ ನಿಮಿತ್ತ ಶಿರಸಿಗೆ ಭೇಟಿ ನೀಡಿದ್ದ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್, ಕಳೆದ ಮೂರು ದಿನಗಳಿಂದಲೂ ಶಿರಸಿಯಲ್ಲಿ ಬೀಡುಬಿಟ್ಟಿದ್ದರು. ಶಿರಸಿ ಸುತ್ತಾಡಿ ಸದ್ಯ ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ. ಶಿವಣ್ಣನ ನೋಡಿದ ಕೂಡಲೇ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬೀಳುತ್ತಿದ್ದ ದೃಶ್ಯಗಳು ವೈರಲ್ ಆಗಿವೆ. ಶಿರಸಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ, ಮಾವ ಭೀಮಣ್ಣ ನಾಯ್ಕ ಅವರ ನೂತನ ಹೋಟೆಲ್ ಉದ್ಘಾಟನೆಗೆಂದು ಡಾ. ಶಿವರಾಜಕುಮಾರ್ ಪತ್ನಿ ಸಮೇತ ಶಿರಸಿಗೆ ಭೇಟಿ ನೀಡಿದ್ದರು. ಶಿರಸಿಯ ವಿವಿಧೆಡೆ ತಿರುಗಾಡಿ ಶಿರಸಿಯೊಂದಿಗಿನ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.