ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ಸುಪುತ್ರ ಅಭಿಷೇಕ್ ಅಂಬರೀಶ್ ಈಗ ಸಂಸಾರಿ. ಪ್ರೀತಿಸಿದ ಹುಡುಗಿ ಅವಿವಾ ಬಿದ್ದಪ್ಪ ಅವರ ಕೈ ಹಿಡಿದಿರೋ ಅಭಿಷೇಕ್ ಅದ್ಧೂರಿ ಆರತಕ್ಷತೆ ಮಾಡಿಕೊಂಡಿದ್ದಾರೆ.
ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ಸುಪುತ್ರ ಅಭಿಷೇಕ್ ಅಂಬರೀಶ್ ಈಗ ಸಂಸಾರಿ. ಪ್ರೀತಿಸಿದ ಹುಡುಗಿ ಅವಿವಾ ಬಿದ್ದಪ್ಪ ಅವರ ಕೈ ಹಿಡಿದಿರೋ ಅಭಿಷೇಕ್ ಅದ್ಧೂರಿ ಆರತಕ್ಷತೆ ಮಾಡಿಕೊಂಡಿದ್ದಾರೆ. ಸುಮಲತಾ ಮಗನ ಆರತಕ್ಷತೆಯಲ್ಲಿ ಬಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್ ಸ್ಟಾರ್ಸ್‌ಗಳ ಸಂಗಮ ಆಗಿತ್ತು.ಅಭಿಷೇಕ್ ಅಂಬರೀಶ್ ಹಾಗು ಅವಿವಾ ಬಿದ್ದಪ್ಪ ಜೋಡಿಯನ್ನ ಅಭಿ ಫ್ಯಾನ್ಸ್ ಈಗ ಅಭಿವಾ ಜೋಡಿ ಅಂತ ಕರೆಯುತ್ತಿದ್ದಾರೆ. ಈ ಅಭಿವಾ ಜೋಡಿಗೆ ಆಶೀರ್ವಾದ ಮಾಡೋಕೆ ರೆಬೆಲ್ ಸ್ಟಾರ್ ಅಂಬರೀಶ್ ಅವರ ಆಪ್ತ ಗೆಳೆಯರಾದ ತೆಲುಗು ನಟ ಮೆಗಾ ಸ್ಟಾರ್ ಚಿರಂಜೀವಿ ಬಂದಿದ್ರು. ಒಂದ್ ಕಾಲದ ಬಾಲಿವುಡ್ ಫೇಮಸ್ ನಟರಾದ ಜಾಕಿ ಶ್ರಾಫ್, ಶತ್ರುಘ್ನ ಸಿನ್ಹಾ ಕೂಡ ಬಂದಿದ್ರು.ಅಭಿ-ಅವಿವಾ ಆರತಕ್ಷತೆ ನೋಡಲು ಎರಡು ಕಣ್‌ಗಳು ಸಾಲುತ್ತಿರಲಿಲ್ಲ. ಯಾಕಂದ್ರೆ ಇದು ಅದ್ದೂರಿ ಹೈ ಪ್ರೊಫೈಲ್ ರಿಸೆಪ್ಷನ್. ಜಗಮಗ ಲೈಟಿಂಗ್ಸ್, ರೋಮನ್ ಶೈಲಿಯ ಸ್ಟೇಜ್ ನಲ್ಲಿ ನವ ದಂಪತಿಗಳು ಪೋಟೋಗೆ ಪೋಸ್ ಕೊಟ್ಟಿದ್ರು. ಮತ್ತೊಂದು ವಿಶೇಷ ಅಂದ್ರೆ ಕನ್ನಡದ ಬಿಗ್ ಸ್ಟಾರ್ಸ್ ಅಭಿಷೇಕ್ ದಂಪತಿಗಳಿಗೆ ವಿಶ್ ಮಾಡಿದ್ರು. ಅದರಲ್ಲೂ ವಿಶೇಷ ಅಂದ್ರೆ ಸ್ಯಾಂಡಲ್ವುಡ್ ಪದ್ಮಾವತಿ ಕ್ವೀನ್ ರಮ್ಯಾ ಸೀರೆಯುಟ್ಟು ಹಾಟ್ ಆಗಿ ಬಂದಿದ್ದು, ಎಲ್ಲರ ಕಣ್ಣು ಕುಕ್ಕುವಂತಿತ್ತು.