ಆಪರೇಷನ್ ಟೈಗರ್: 48 ಗಂಟೆಯೊಳಗೆ ಸೆರೆ, ಇಲ್ಲವೇ ಶೂಟೌಟ್ ಮಾಡುವ ಭರವಸೆ

ಆಪರೇಷನ್ ಟೈಗರ್: 48 ಗಂಟೆಯೊಳಗೆ ಸೆರೆ, ಇಲ್ಲವೇ ಶೂಟೌಟ್ ಮಾಡುವ ಭರವಸೆ

Published : Oct 09, 2019, 02:26 PM IST

ಹುಲಿಗೆ ಮತ್ತೊಬ್ಬ ರೈತ ಬಲಿ| ಗೋಪಾಲಸ್ವಾಮಿ ಬೆಟ್ಟದ ಕಾಡಂಚಿನಲ್ಲಿ ನಡೆದ ಘಟನೆ| ಚೌಡಹಳ್ಳಿಯಲ್ಲಿ ದನ ಮೇಯಿಸುತ್ತಿದ್ದಾಗ ರೈತನ ಮೇಲರಿಗದ ಹುಲಿ| ಸೆ.1ರಂದು ಇದೇ ಹಳ್ಳಿಯಲ್ಲಿ ಮತ್ತೊಬ್ಬ ರೈತ ಹುಲಿ ದಾಳಿಗೆ ಬಲಿಯಾಗಿದ್ದ| ಸ್ಥಳಿಯರ ಆಕ್ರೋಶ| 48 ಗಂಟೆಯೊಳಗೆ ಸೆರೆ, ಇಲ್ಲವೇ ಶೂಟೌಟ್ ಮಾಡುವ ಭರವಸೆ ನೀಡಿದ ಅರಣ್ಯಾಧಿಕಾರಿಗಳು| ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಯ್ತು ಅಧಿಕಾರಿಗಳ ಭರವಸೆ ಮಾತು

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟದ ಅರಣ್ಯದಂಚಿನ ಚೌಡಹಳ್ಳಿಯ ರೈತನೊಬ್ಬನನ್ನು ಹುಲಿ ಕೊಂದು ತಿಂದ ಘಟನೆ ಮಾಸುವ ಮುನ್ನವೇ ಈಗ ಅದೇ ಗ್ರಾಮದ ಮತ್ತೊಬ್ಬ ರೈತ ಹುಲಿ ದಾಳಿಗೆ ಬಲಿಯಾದ ಘಟನೆ ಮಂಗಳವಾರ ನಡೆದಿದೆ. ಒಂದೇ ಗ್ರಾಮದ ಇಬ್ಬರು ರೈತರು ಹುಲಿ ದಾಳಿಗೆ ಬಲಿಯಾಗಿರುವುದು ಸ್ಥಳೀಯ ರೈತರಲ್ಲಿ ಆತಂಕ ಮೂಡಿಸಿದೆ. ‘ನರಹಂತಕ’ ಹುಲಿ ಸೆರೆಗೆ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಚೌಡಹಳ್ಳಿಯ ಶಿವಲಿಂಗಪ್ಪ (55) ಮೃತ ರೈತ. ಚೌಡಹಳ್ಳಿಯ ಬಂಡೀಪುರ ಹುಲಿ ಯೋಜನೆಗೆ ಸೇರಿದ ಗೋಪಾಲಸ್ವಾಮಿ ಬೆಟ್ಟದ ವಲಯದಂಚಿನ ಮಹಾಲಿಂಗಶೆಟ್ಟರ ಜಮೀನಿನ ಬಳಿಕ ದನ ಮೇಯುಸುತ್ತಿದ್ದಾಗ ಹುಲಿ ದಾಳಿ ಮಾಡಿದೆ. ತಕ್ಷಣ ಸ್ಥಳದಲ್ಲಿದ್ದ ಕೆಲವರು ಕಲ್ಲೆಸೆದು ಓಡಿಸಲು ಯತ್ನಿಸಿದಾಗ ರೈತನನ್ನು ಪೊದೆಯತ್ತ ಎಳೆದೊಯ್ದು ಬಳಿಕ ಪರಾರಿಯಾಗಿದೆ. ಗ್ರಾಮದಲ್ಲೀಗ ಆತಂಕ ಆವರಿಸಿದೆ. ಸೆ.1ರಂದು ಚೌಡಹಳ್ಳಿಯ ಶಿವಮಾದಯ್ಯ ಅವರನ್ನು ಹುಲಿ ಕೊಂದು ತಿಂದಿತ್ತು. ಈಗ ಇದೇ ಗ್ರಾಮದ ಮತ್ತೊಬ್ಬ ರೈತ ಬಲಿಯಾಗಿದ್ದಾರೆ.

ಸ್ಥಳೀಯರ ಆಕ್ರೋಶ: ಸುದ್ದಿ ತಿಳಿಯುತ್ತಲೇ ಚೌಡಹಳ್ಳಿ, ಹುಂಡೀಪುರ ಸುತ್ತಮುತ್ತಲ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಅರಣ್ಯಾಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನರಹಂತಕ ಹುಲಿಯನ್ನು ಸೆರೆ ಹಿಡಿಯುವ ನಾಟಕ ಬೇಡ, ಶೀಘ್ರ ಅದರ ಹತ್ಯೆಗೆ ಆದೇಶ ನೀಡಿ ಎಂದು ಎಸಿಎಫ್‌ ರವಿಕುಮಾರ್‌ ರನ್ನು ಆಗ್ರಹಿಸಿದರು. ಇದ್ಕಕೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು 48 ಗಂಟೆಯೊಳಗಾಗಿ ಹುಲಿಯನ್ನು ಹುಡುಕುವ ಪ್ರಯತ್ನ ಮಾಡುತ್ತೇವೆ. ಸಾಧ್ಯವಾಗದಿದ್ದರೆ ಶೂಟೌಟ್ ಮಾಡುತ್ತೇವೆಂಬ ಭರವಸೆ ನೀಡಿದ್ದಾರೆ.

23:29ಆಧಾರ್-ಪಾನ್‌ನಲ್ಲಿ ಮುಸ್ಲಿಂ, ಆದ್ರೆ ಹಿಂದೂ ಮಠಕ್ಕೆ ಪೀಠಾಧಿಪತಿ! ಸ್ವಾಮೀಜಿಯ ಖಾಸಗಿ ವಿಡಿಯೋ ವೈರಲ್!
04:55ಮೈಕ್ರೋ ಫೈನಾನ್ಸ್‌ ಕಿರುಕುಳ ತಾಳಲಾರದೇ ಗ್ರಾಮವನ್ನೇ ತೊರೆದ 100ಕ್ಕೂ ಹೆಚ್ಚು ಕುಟುಂಬಗಳು!
20:59ಮುಡಾ ಸಂಕಷ್ಟದಲ್ಲಿ ಸಿದ್ದರಾಮಯ್ಯ:ರಾಜೀನಾಮೆ ಕೊಟ್ಟು ಕಳಂಕದಿಂದ ಹೊರ ಬರಲಿ ಎಂದ ವರುಣಾ ಕ್ಷೇತ್ರದ ಜನ!
09:35ಮನವಿ ಪತ್ರ ಕಸದ ಪಾಲು! ಸಿಎಂ ಸ್ವೀಕರಿಸಿದ್ದ ಅಹವಾಲು ಕಸದ ರಾಶಿಯಲ್ಲಿ ಪತ್ತೆ !
03:28Siddaramaiah: ಅಸಮಾನತೆ ವಿರುದ್ಧ ಹೋರಾಡುವುದನ್ನೇ ಬದುಕಾಗಿಸಿಕೊಂಡಿದ್ದ ಶ್ರೀನಿವಾಸ್ ಪ್ರಸಾದ್‌: ಸಿಎಂ
05:58ಸಾಯುವ ಮುನ್ನ ಕೊನೆಯದಾಗಿ ಪೇಪರ್‌ನಲ್ಲಿ ಬರೆದು ಕುಟುಂಬಸ್ಥರ ಬಳಿ ಶ್ರೀನಿವಾಸ್‌ ಪ್ರಸಾದ್‌ ಕೇಳಿದ್ದೇನು ?
48:30ತಾಳಿ ಕಟ್ಟಲು ಇನ್ನೇನು ಹತ್ತು ನಿಮಿಷ ಇರುವಾಗಲೇ ಓಡೋಡಿ ಬಂದು ಮತದಾನ ಮಾಡಿದ ವರ!
18:43ರಾಜಕೀಯವಾಗಿ ರಿಟೈರ್ಡ್ ಆದ್ರೂ ಶ್ರೀನಿವಾಸ್ ಪ್ರಸಾದ್‌ಗೇಕೆ ಡಿಮ್ಯಾಂಡ್!? ಈ ಇಬ್ಬರು ನಾಯಕರ ಮುನಿಸಿಗೆ ಕಾರಣವೇನು..?
42:42Watch Video: ಚಾಮರಾಜನಗರದಲ್ಲಿ ಸುನೀಲ್ ಬೋಸ್ V/S ಬಾಲರಾಜ್! ಮಗನ ಗೆಲ್ಲಿಸಲು ಪ್ರತಿಷ್ಠೆ ಪಣಕ್ಕಿಟ್ಟ ಮಹದೇವಪ್ಪ!
00:59Chamarajanagar: ಮೋದಿ ಮತ್ತೊಮ್ಮೆ ಪ್ರಧಾನಿ ಆಗಲೆಂದು ಮಹದೇಶ್ವರ ಬೆಟ್ಟಕ್ಕೆ 102 ವರ್ಷದ ಅಜ್ಜಿಯ ಪಾದಯಾತ್ರೆ