ಚಾಮರಾಜನಗರದ ಹನೂರು ತಾಲೋಕಿನ ದೊರೆದೊಡ್ಡಿ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಭೀಮಾನಾಯ್ಕನನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳಭಟ್ಟಿ ಕುಡಿದರೆ ಕೊರೋನಾ ಬರಲ್ಲ ಎಂದು ನಂಬಿಸಿ ಭೀಮಾನಾಯ್ಕ ವ್ಯಾಪಾರ ಮಾಡುತ್ತಿದ್ದ.
ಚಾಮರಾಜನಗರ(ಏ.12): ಕಳ್ಳಭಟ್ಟಿ ಕುಡಿದ್ರೆ ಕೊರೋನಾ ವೈರಸ್ ಬರೊಲ್ಲವೆಂದು ನಂಬಿಸಿ ಕಳ್ಳಭಟ್ಟಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯನ್ನು ಚಾಮರಾಜನಗರ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜನಗರದ ಹನೂರು ತಾಲೋಕಿನ ದೊರೆದೊಡ್ಡಿ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಭೀಮಾನಾಯ್ಕನನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳಭಟ್ಟಿ ಕುಡಿದರೆ ಕೊರೋನಾ ಬರಲ್ಲ ಎಂದು ನಂಬಿಸಿ ಭೀಮಾನಾಯ್ಕ ವ್ಯಾಪಾರ ಮಾಡುತ್ತಿದ್ದ.
ತಾನೇ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸಿ ದುಬಾರಿ ಬೆಲೆಗೆ ಕಳ್ಳಬಟ್ಟಿಯನ್ನು ಭೀಮಾನಾಯ್ಕ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.