Radhe Shyam ಚಿತ್ರದ ಬಗ್ಗೆ ಎಕ್ಸ್‌ಕ್ಲೂಸಿವ್ ಮಾಹಿತಿ ಹಂಚಿಕೊಂಡ ನಟ ಪ್ರಭಾಸ್!

Radhe Shyam ಚಿತ್ರದ ಬಗ್ಗೆ ಎಕ್ಸ್‌ಕ್ಲೂಸಿವ್ ಮಾಹಿತಿ ಹಂಚಿಕೊಂಡ ನಟ ಪ್ರಭಾಸ್!

Suvarna News   | Asianet News
Published : Mar 09, 2022, 04:57 PM IST

ಡಾರ್ಲಿಂಗ್ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಕಾಂಬಿನೇಷನ್‌ನಲ್ಲಿ ಬರುತ್ತಿರುವ 'ರಾಧೆ ಶ್ಯಾಮ್' ಸಿನಿಮಾ ಮಾರ್ಚ್ 11ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಈ ಮಧ್ಯೆ ಚಿತ್ರದ ಬಗ್ಗೆ ನಟ ಪ್ರಭಾಸ್ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್ ಸಂದರ್ಶನ ಕೊಟ್ಟಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿರುವ ಚಿತ್ರ  'ರಾಧೆ ಶ್ಯಾಮ್' (Radhe Shyam). 'ಪ್ಯಾನ್ ಇಂಡಿಯಾ ಸ್ಟಾರ್‌' ಡಾರ್ಲಿಂಗ್ ಪ್ರಭಾಸ್ (Prabhas) ಹಾಗೂ ಪೂಜಾ ಹೆಗ್ಡೆ (Pooja Hegde) ಕಾಂಬಿನೇಷನ್‌ನಲ್ಲಿ ಬರುತ್ತಿರುವ ಈ ಸಿನಿಮಾ ಮಾರ್ಚ್ 11ರಂದು ವಿಶ್ವದಾದ್ಯಂತ ಏಕಕಾಲದಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆ ಕಾಣಲಿದೆ. ಈ ಮಧ್ಯೆ 'ರಾಧೆ ಶ್ಯಾಮ್' ಚಿತ್ರದ ಬಗ್ಗೆ ನಟ ಪ್ರಭಾಸ್ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್ ಸಂದರ್ಶನ ಕೊಟ್ಟಿದ್ದಾರೆ. ಚಿತ್ರದ ಕಥೆ, ಹಾಡುಗಳು, ನವೀರಾದ ಪ್ರೇಮಕಥೆ, ಮೇಕಿಂಗ್ ಸೇರಿದಂತೆ ತಮ್ಮ ಪಾತ್ರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 

Prabhas ಜೊತೆಗಿರುವ 9 ವರ್ಷದ ಹಳೆ ಫೋಟೋ ಹಂಚಿಕೊಂಡ ನಟಿ ಅನುಷ್ಕಾ ಶೆಟ್ಟಿ!

ಇನ್ನು 'ರಾಧೆ ಶ್ಯಾಮ್' ಚಿತ್ರವು 1970ರ ಯುರೋಪ್ ಹಿನ್ನಲೆಯಲ್ಲಿದೆ ಎಂದು ಹೇಳಲಾಗುತ್ತದೆ. ರೊಮ್ಯಾಂಟಿಕ್​ ಕಥಾ ಹೊಂದಿರುವ 'ರಾಧೆ ಶ್ಯಾಮ್' ಚಿತ್ರಕ್ಕೆ ಭೂಷಣ್ ಕುಮಾರ್, ವಂಶಿ ಮತ್ತು ಪ್ರಮೋದ್ ನಿರ್ಮಾಣ ಮಾಡಿದ್ದಾರೆ.  ಪ್ರಭಾಸ್ ವಿಕ್ರಮಾದಿತ್ಯ ಎಂಬ ಹಸ್ತಸಾಮುದ್ರಿಕ ಪಾತ್ರವನ್ನು ನಿರ್ವಹಿಸುತ್ತಿದ್ದು, ಪೂಜಾ ಹೆಗ್ಡೆ ಅವರು ಪ್ರೇರಣಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಟಲಿ, ಜಾರ್ಜಿಯಾ, ಫ್ರಾನ್ಸ್ ಮತ್ತು ಇತರ ಯುರೋಪಿಯನ್ ದೇಶಗಳಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗಿದ್ದು, ಜಸ್ಟಿನ್ ಪ್ರಭಾಕರನ್ ಸಂಗೀತ ಸಂಯೋಜನೆ, ಮನೋಜ್ ಪರಮಹಂಸ ಛಾಯಾಗ್ರಹಣ ಮತ್ತು ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನ ಚಿತ್ರಕ್ಕಿದೆ. ರಾಧಾ ಕೃಷ್ಣ ಕುಮಾರ್ (Radha Krishna Kumar) ಚಿತ್ರಕ್ಕೆ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

07:40ಗ್ಲೋಬಲ್‌ ಹಿಟ್‌ ಆದ KGF ಸಿನಿಮಾದಲ್ಲಿ ನಟಿಸಿದ್ರೂ ಶ್ರೀನಿಧಿ ಶೆಟ್ಟಿ ಲೈಫ್‌ ಯಾಕೆ ಚೇಂಜ್‌ ಆಗ್ಲಿಲ್ಲ?
42:23ಏನ್ರೀ ಈ ಥರ ಭಾಷೆ ಬಳಸಿದ್ರಿ ಅಂತ ಕೇಳಿದ್ರು: ನಿರ್ದೇಶಕ ಅಭಿಜಿತ್‌ ತೀರ್ಥಹಳ್ಳಿ
67:59'ನಂಗೆ ಬ್ರೇಕಪ್‌ ಆಗಿರೋದು ಸತ್ಯ': ಅಣ್ಣಯ್ಯ ಧಾರಾವಾಹಿ ನಟ ವಿಕಾಶ್‌ ಉತ್ತಯ್ಯ
06:04ರಮ್ಯಾ ಯಾಕ್‌ ಹಿಂಗ್ ಆಡ್ತಿದಾರೆ? ಸ್ಯಾಂಡಲ್‌ವುಡ್ ಕ್ವೀನ್ 'ಚೆಸ್' ಆಡ್ತಿದಾರಾ ಅಂತಿದಾರಲ್ರೀ..!
28:13ನನ್ನ ಮಗ ಶ್ರೇಯಸ್‌ ʼವಿಷ್ಣುಪ್ರಿಯಾʼ ಸಿನಿಮಾದ ಲವ್‌ಸ್ಟೋರಿ ನೋಡಿ ಒಂದೇ ಸಲ ಹಳೆದೆಲ್ಲ ನೆನಪಾಯ್ತು: ಕೆ ಮಂಜು!
43:27ʼನಿಮ್ಮಪ್ಪನ ಜೊತೆ ಕೆಲಸ ಮಾಡೋದು ಕಷ್ಟ ಅಂತ ಬೇರೆ ನಟರೇ ನಂಗೆ ಹೇಳಿದ್ರುʼ: ಕೆ ಮಂಜು ಪುತ್ರ ಶ್ರೇಯಸ್!‌
61:47ಅಧಿಪತ್ರ ಸಿನಿಮಾ ಅನುಭವ ಹಂಚಿಕೊಂಡ ಜಾಹ್ನವಿ; ಹೀಗೂ ಉಂಟೇ...!?
25:06ಹೇಗಿತ್ತು ರಾಯಲ್ ಜರ್ನಿ? ಚಿತ್ರತಂಡ ಹೇಳಿದ ಕ್ರೇಜಿ ಕಹಾನಿ.. ಪಕ್ಕಾ ಮಾಸ್ ಮಸಾಲ ಕಹಾನಿ!
15:37ದರ್ಶನ್ ಪರ ಸುಮಲತಾ ಅಂಬರೀಷ್ ಯುದ್ಧ; ಡಿ ಬಾಸ್ ಫ್ಯಾನ್ಸ್‌ ಬಿಡ್ತಿದಾರೆ ಕೆಂಗಣ್ಣು!
42:58ಆರ್ಮುಗಂ ರವಿಶಂಕರ್ ಏನಂದ್ರು? ಸುವರ್ಣ ನ್ಯೂಸ್‌ನಲ್ಲಿ ಬಂದ ಕನ್ನಡದ ರವಿ!
Read more