Aug 21, 2023, 2:21 PM IST
ಬಾಗಲಕೋಟೆ: ಇಂಜಿನಿಯರಿಂಗ್ ಓದಿದ ಹುಡುಗ್ರು ಕೆಲ್ಸಕ್ಕೆ ಅಂತ ಬೆಂಗಳೂರು, ಪುಣೆ ಸುತ್ತಿ, ಸರಿಯಾದ ಕೆಲಸ ಸಿಗದೆ ಕಂಗಾಲಾಗಿದ್ದರು. ಕೊನೆಗೆ ಬದುಕಿನಲ್ಲಿ ಏನಾದ್ರೂ ಸಾಧಿಸಬೇಕೆಂಬ ಡಿಪ್ಲೋಮಾ ಇಂಜಿನಿಯರ್ ಕಲಿತ ಹುಡುಗ್ರು ಸ್ಟಾರ್ಟಪ್ ಯೋಜನೆಯಡಿ ತಮ್ಮ ವಿವೇಚನೆ ಮೂಲಕವೇ ಟೀ ಉದ್ಯಮ ಆರಂಭಿಸಿ, ಇದೀಗ ಮಾದರಿಯಾಗಿದ್ದಾರೆ. ಬಾಗಲಕೋಟೆಯ(Bagalkot) ವಲ್ಲಭಾಯ್ ವೃತ್ತದ ಕಲಾದಗಿ ಗ್ರಾಮದವರಾದ ಅಮೀರ್ ಸೋಹಿಲ್ ಮತ್ತು ಮಹ್ಮದ ಯಾಸೀನ್ ಇಬ್ಬರು ಯುವಕರು ಡಿಪ್ಲೋಮಾ ಪದವಿ ಓದಿದವರು. ಮನೆಯ ಪರಿಸ್ಥಿತಿಯಿಂದ ಮಹ್ಮದ ಶಿಕ್ಷಣವನ್ನ ಅರ್ಧಕ್ಕೆ ಮೊಟಕುಗೊಳಿಸಿದ್ದರೆ, ಇತ್ತ ಅಮೀರ್ ಸೋಹಿಲ್ ಮೆಕಾನಿಕಲ್ ಡಿಪ್ಲೋಮಾ ಇಂಜಿನಿಯರ್ ಪದವಿ ಮುಗಿಸಿ ಕೆಲ್ಸಕ್ಕೆಂದು ಬೆಂಗಳೂರು, ಪುಣೆ ಸೇರಿದಂತೆ ನಾನಾ ಕಡೆಗೆ ಕಂಪನಿಗಳಲ್ಲಿ ಕೆಲ್ಸಕ್ಕಾಗಿ ಅಲೆದಾಡಿದ್ರು. ಬೆಂಗಳೂರಿನಲ್ಲಿ ಟೋಯೋಟಾ ಕಂಪನಿಯಲ್ಲಿ ಕೆಲ್ಸ ಸಿಕ್ಕರೂ ಅದು ಸೂಕ್ತ ಎನಿಸಲಿಲ್ಲ. ಇಬ್ಬರು ಡಿಪ್ಲೋಮಾ ಇಂಜಿನಿಯರ್ ಕಲಿತ ಸಹೋದರರೇ ಕೂಡಿ ಟೀ ಅಂಗಡಿ (tea shop)ತೆರೆಯುತ್ತಿರೋದ್ರಿಂದ ಅದಕ್ಕೆ "ಇಂಜಿನಿಯರ್ ಬನ್ ಗಯಾ ಚಾಯ್ ವಾಲಾ"(Engineer Bun Gaya Chai Wala) ಅಂತ ಹೆಸರಿಟ್ಟು ಇದೀಗ ಅದ್ರಲ್ಲೆ ಫೇಮಸ್ ಆಗಿದ್ದಾರೆ.
ಇನ್ನು ಇವರು ತಯಾರಿಸೋದು ಪುಣೆ (pune) ಮಾದರಿಯ ಮಲಾಯ್ ಟೀ. ಅಂದರೆ ಹಾಲಿನಲ್ಲೇ ಕೆನೆಯ ತೆನೆ ಪದರಿನಲ್ಲೇ ಚಹಾ ತಯಾರಿಸಿ ಬರೋರಿಗೆ ಕೊಡುತ್ತಿದ್ದರೆ ಅದನ್ನ ಕುಡಿದವರು ಮಾತ್ರ ಫುಲ್ ಖುಷಿಯಾಗಿರ್ತಾರೆ. ಪ್ರತಿ ಕಪ್‌ಗೆ 10 ರೂಪಾಯಿ ದರದಂತೆ ಮಾರಾಟ ಮಾಡೋ ಇವ್ರಿಗೆ ಪ್ರತಿನಿತ್ಯ 1500 ರೂಪಾಯಿಂದ 2ಸಾವಿರ ರೂಪಾಯಿವರೆಗೆ ಲಾಭಾಂಶ ಬರುತ್ತೆ. ಹೀಗಾಗಿ ಡಿಪ್ಲೋಮಾ ಕಲಿತು ಕಂಪನಿಯಲ್ಲಿ ಬೇರೆಯವರ ಕೈಯಲ್ಲಿ ದುಡಿಯುವುದರ ಬದಲಾಗಿ ಸ್ವಂತ ಬಲದಿಂದ ಸ್ಪೇಷಲ್ ಟೀ ಅಂಗಡಿ ತೆರೆದು ಕಂಪನಿಯಲ್ಲಿರೋದಕ್ಕಿಂತ ಹೆಚ್ಚಿನ ಉತ್ತಮ ಲಾಭಾಂಶ ಗಳಿಸುತ್ತಿದ್ದಾರೆ ಈ ಸಹೋದರರು.
ಇದನ್ನೂ ವೀಕ್ಷಿಸಿ: ಯುಪಿವಿಸಿ ವಿಂಡೋ ಉದ್ಯಮ: ಕಡಿಮೆ ಖರ್ಚಿನಲ್ಲಿ ರೆಡಿಯಾಗುತ್ತವೆ ಸೂಪರ್ ವಿಂಡೋಸ್ !