ಮೋದಿ ಮನ್ ಕೀ ಬಾತ್ ಐಡಿಯಾ : ಬಾಳೆ ದಿಂಡಿನಿಂದ ರಸವಾಯ್ತು ಬದುಕು !

Aug 17, 2023, 11:28 AM IST

ಚಾಮರಾಜನಗರ : ರೈತರು ಬಾಳೆಗೊನೆ ಕೊಯ್ದು ನಂತರ ಬಾಳೆ ದಿಂಡು(Banana Stem) ಅನುಪಯುಕ್ತ ಎಂದು ಬಿಸಾಡುತ್ತಾರೆ. ಆದರೆ ಈ ಅನುಪಯುಕ್ತ ಬಾಳೆ ದಿಂಡಿನಿಂದ ಮ್ಯಾಟ್, ಫ್ಲೋರ್ ಮ್ಯಾಟ್, ಚಾಪೆ, ಬ್ಯಾಗ್, ಪರ್ಸ್ ಗಳನ್ನು ತಯಾರಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಯೆಸ್ ಇದು ಯುವ ಉದ್ಯಮಿಯೊಬ್ಬರ ಯಶೋ ಗಾಥೆ ಅಂದ್ರೆ ಅತಿಶಯೋಕ್ತಿಯಲ್ಲ. ಚಾಮರಾಜಗರ(Chamarajagara) ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಆಲಹಳ್ಳಿ ಗ್ರಾಮದ ವರ್ಷಾ  ಎಂ.ಟೆಕ್  ಪದವೀಧರೆಯಾದರು ಯಾವುದೇ ಉದ್ಯೋಗಕ್ಕೆ ಸೇರಿರಲಿಲ್ಲ. ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಎಂಬ ಛಲ ಹೊಂದಿದ್ದ  ಅವರಿಗೆ ಬೇರೆಯವರ ಕೈ ಕೆಳಗೆ ಕೆಲಸ ಮಾಡಲು ಇಷ್ಟ ಇರಲಿಲ್ಲ. ಸ್ವ ಉದ್ಯಮ  ಪ್ರಾರಂಭಿಸಬೇಕು, ತಮ್ಮ ಕೈಲಾದಷ್ಟು ಮಹಿಳೆಯರಿಗೆ ಉದ್ಯೋಗ ನೀಡಬೇಕು ಆ ಮೂಲಕ ಸ್ತ್ರೀ ಸಬಲೀಕರಣಕ್ಕೆ ಕೈ ಜೋಡಿಸಬೇಕು ಎಂದು ಕನಸು ಹೊತ್ತಿದ್ದ  ವರ್ಷಾ ಅವರು ಯೂ ಟ್ಯೂಬ್ ನಲ್ಲಿ ಸರ್ಚ್ ಮಾಡುತ್ತಿದ್ದಾಗ, ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ನಲ್ಲಿ(Man ki baat) ಪ್ರಸ್ತಾಪಿಸಿದ್ದ ವಿಚಾರವೊಂದು  ಗಮನ ಸೆಳೆದಿದೆ. ಅನುಪಯುಕ್ತ ಬಾಳೆ ದಿಂಡಿನಿಂದ ಹಲವು ರೀತಿಯ ಉಪಯುಕ್ತ ವಸ್ತುಗಳನ್ನು ತಯಾರಿಸಬಹುದು. ಉದಾಹರಣೆ ಸಹಿತ ಹೇಳಿದ್ದ  ಮೋದಿ(Modi) ಅವರ ಮಾತಿನಿಂದ ಪ್ರೇರಣೆಗೊಂಡ ವರ್ಷಾ  ತಾವೇಕೆ ಪ್ರಯತ್ನಿಸಿಸಬಾರದು ಎಂದುಕೊಂಡು ಮತ್ತೆ ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿದಾಗ  ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಾಳೆ ದಿಂಡಿನಿಂದ ಉತ್ಪನ್ನಗಳ ತಯಾರಿಕೆ ಮಾಡುತ್ತಿರುವ ದೃಶ್ಯಾವಳಿ ನೋಡಿದ್ದಾರೆ.  ಬಳಿಕ ಕೊಯಮತ್ತೂರಿನಿಂದ  3 ಲಕ್ಷ ರೂಪಾಯಿಗಳಿಗೆ  ಯಂತ್ರೋಪಕರಣಗಳನ್ನ ಖರೀದಿಸಿ ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿರುವ  ತಮ್ಮ ಜಮೀನಿನಲ್ಲಿ ಬಾಳೆ ದಿಂಡು ಉತ್ಪನ್ನಗಳ ತಯಾರಿಕಾ ಉದ್ಯಮ ಆರಂಭಿಸಿದ್ದಾರೆ. 

ಈ ದಂಪತಿ ಸುತ್ತಮುತ್ತಲಿನ ಜಮೀನಿಗಳಲ್ಲಿ ಬಾಳೆ ಬೆಳೆಯುವ ರೈತರನ್ನು ಸಂಪರ್ಕಿಸಿ ಬಾಳೆ ದಿಂಡು ಬಿಸಾಡದೆ ತಮಗೇ ನೀಡುವಂತೆ ಕೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಒಂದು ಬಾಳೆ ದಿಂಡಿಗೆ 8 ರಿಂದ 10 ರೂಪಾಯಿಗೆ ಖರೀದಿಸಲು ಆಲೋಚಿಸಿದ್ದಾರೆ. ಇದರಿಂದ ಸುತ್ತಮುತ್ತಲಿನ  ರೈತರಿಗೂ ಲಾಭವಾಗಲಿದೆ ಎಂಬುದು ಅವರ ಲೆಕ್ಕಾಚಾರ. ಒಟ್ಟಾರೆ ಪ್ರಧಾನಿ ಮೋದಿ ಅವರ ಮನ್ ಕೀ ಬಾತ್ ವಿದ್ಯಾವಂತ ಮಹಿಳೆಯೊಬ್ಬರು ಯಶಸ್ವಿ ಉದ್ಯಮಿಯಾಗಲು ನಿಜಕ್ಕೂ ಪ್ರೇರಣೆ ನೀಡಿದೆ ಎಂದರೆ ತಪ್ಪಾಗಲಾರದು.

ಇದನ್ನೂ ವೀಕ್ಷಿಸಿ:  ವಕ್ಫ್ ಆದಾಯದಲ್ಲಿ ಕೋಟಿ ಕೋಟಿ ಗೋಲ್‌ಮಾಲ್ ? ಸುಲ್ತಾನಿ, ಮದೀನಾ ಮಸೀದಿಗೆ ಮಹಾ ಮೋಸ..?