DK Shivakumar: ಕೈ ಹೊಸಕಿಕೊಂಡು ವಿಪಕ್ಷಗಳು ಹೊರಗೆ ಹೋದ್ರು, ಇದು ಬಜೆಟ್‌ಗೆ ಮಾಡಿದ ಅವಮಾನ: ಡಿಕೆಶಿ

Feb 16, 2024, 5:47 PM IST

ಸಿಎಂ ಸಿದ್ದರಾಮಯ್ಯ ಅವರ 15ನೇ ಬಜೆಟ್ ದೇಶಕ್ಕೆ ಮಾದರಿಯಾಗಿದೆ. 3 ಲಕ್ಷ 71 ಸಾವಿರ ಕೋಟಿ ಬಜೆಟ್‌(Budget) ಮಂಡಿಸಲಾಗಿದೆ. ಈ ಬಜೆಟ್ ಆತ್ಮವಿಶ್ವಾಸ ಎಷ್ಟಿತ್ತು ಅಂದ್ರೆ, ವಿಪಕ್ಷಗಳಿಗೆ(Opposition Parties) ಕೂರಲು ಆಗಿಲ್ಲ. ಇಷ್ಟು ಅಭಿವೃದ್ಧಿ ಮಾಡಿದ್ರಲ್ಲಾ ಅಂತ ಕೈ ಹೊಸಕಿಕೊಂಡು ಹೊರಗೆ ಹೋದ್ರು. 81ರಿಂದ ಅಸೆಂಬ್ಲಿಯಲ್ಲಿ ಇದ್ದೀನಿ‌. ಯಾವುದೇ ವಿಪಕ್ಷಗಳು ಆಡಳಿತ ಮಾಡಿದ್ದಾರೆ. ಯಾರೂ ಕೂಡ ಬಜೆಟ್ ಬಾಯ್ಕಾಟ್ ಮಾಡಿ ಹೊರಗೆ ಬಂದಿಲ್ಲ. ವಿಪಕ್ಷಗಳು ಸಭಾತ್ಯಾಗ ಮಾಡಿದ್ದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಮಾನ ಎಂದು ಡಿಸಿಎಂ ಡಿಕೆ ಶಿವಕುಮಾರ್‌(DK shivakumar) ಹೇಳಿದರು. ಸರ್ಕಾರಿ ನೌಕರರಿಗೆ ಸಂಬಳ ಕೊಡಬೇಕು, ಮಹಿಳೆಯರಿಗೆ 2 ಸಾವಿರ ಕೊಡಬೇಕು. ಮನೆಗೆ ವಿದ್ಯುತ್ ಶಕ್ತಿ ನೀಡಬೇಕು. ಎಲ್ಲೆಡೆ ಉಚಿತವಾಗಿ ಬಸ್‌ನಲ್ಲಿ ಓಡಾಡ್ತಿದ್ದಾರೆ ಅವರಿಗೆ ಅವಮಾನ ಮಾಡಿದ್ದಾರೆ. ರಾಜ್ಯದ ಜನತೆಗೆ ವಿಪಕ್ಷಗಳಿಂದ ಅವಮಾನ. ಬಿಜೆಪಿ, ಜೆಡಿಎಸ್‌ ಶಾಸಕರು ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ ಎಂದು ಡಿಕೆಶಿ ಹೇಳಿದರು.

ಇದನ್ನೂ ವೀಕ್ಷಿಸಿ:  Farmers Protest in Delhi: ಡ್ರೋನ್ ಮೇಲೆ ಟೆನಿಸ್ ಬಾಲ್ ದಾಳಿ: ಪೊಲೀಸರ ತಂತ್ರಗಳಿಗೆ ಅನ್ನದಾತರ ಪ್ರತಿತಂತ್ರ..!