ಸ್ಯಾನಿಟರಿ ಪ್ಯಾಡ್‌ಗೆ ಹೇಳಿ ಗುಡ್‌ ಬೈ: ದೇಶಿಯ ಕಾಂಫಿ ಕಫ್‌ಗೆ ಹೇಳಿ ಹಾಯ್‌.. ಹಾಯ್‌ !

Aug 19, 2023, 3:00 PM IST

ಹೆಣ್ಣು ಮಕ್ಕಳು, ಮಹಿಳೆಯರು ಬಳಸೋ ಸ್ಯಾನಿಟರಿ ಪ್ಯಾಡ್(Sanitary pad) ಹೆಚ್ಚಾಗಿ ಪ್ಲಾಸ್ಟಿಕ್‌ಗಳಿಂದ ಮಾಡಲ್ಪಟ್ಟಿದೆ ಹಾಗೂ ಇದು ಮಹಿಳೆಯರ ಆರೋಗ್ಯಕ್ಕೆ ಹೆಚ್ಚು ಹಾನಿಕಾರಕ ಅನ್ನೋದು ಹೆಚ್ಚಿನವರಿಗೆ ಗೊತ್ತೇ ಇಲ್ಲ. ಅಧ್ಯಯನಗಳ ಪ್ರಕಾರ, ಪಾಲಿ, ಮಾರ್ಫಿನ್, ಡಯಾಕ್ಸಿನ್, ಥೈಲೈಡ್ಸ್ ಮುಂತಾದ ಕೆಮಿಕಲ್‌ಗಳನ್ನು ಇದರಲ್ಲಿ ಬಳಸಲಾಗುತ್ತದೆ. ಈ ಪ್ಯಾಡ್‌ಗಳಿಂದಾಗಿ ಸರಿಯಾದ ಸಮಯದಲ್ಲಿ ಮುಟ್ಟಾಗದಿರೋದು, ತುರಿಕೆ, ರ್ಯಾಷಸ್, ಸಂತಾನವಾಗದ ಸಮಸ್ಯೆ, ಗರ್ಭಕೋಶದ ಸಮಸ್ಯೆ, ಸರ್ವಿಕ್ಸ್, ಯುಟೇರಿಯನ್ ಕ್ಯಾನ್ಸರ್ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ. ಇನ್ನು ಇದರಲ್ಲಿ ಪ್ಲಾಸ್ಟಿಕ್ ಹಾಗೂ ಕೆಮಿಕಲ್ ಬಳಸುವುದರಿಂದ 800-900 ವರ್ಷಗಳ ಕಾಲ ಮಣ್ಣಿನಲ್ಲಿ ಕರಗೋದಿಲ್ಲ ಹಾಗೂ ಸುಟ್ಟಾಗ ಇದರಿಂದ ಹೊರಡುವ ಕೆ‌ಮಿಕಲ್ ಪರಿಸರಕ್ಕೂ ಹೆಚ್ಚಿನ ಹಾನಿಯುಂಟು ಮಾಡುತ್ತದೆ. ಅಧ್ಯಯನದ ಪ್ರಕಾರ, ನಮ್ಮ ದೇಶದಲ್ಲಿ ಪ್ರತೀ ವರ್ಷ ಸುಮಾರು 9,000 ಟನ್‌ಗಳಷ್ಟು ತ್ಯಾಜ್ಯ ಕೇವಲ ಸ್ಯಾನಿಟರಿ ಪ್ಯಾಡ್‌ಗಳಿಂದ ಉಂಟಾಗುತ್ತಿದೆ. ಈ ಕಾರಣದಿಂದ ಸ್ಯಾನಿಟರಿ ಪ್ಯಾಡ್‌ಗಳಿಗೆ ಪರ್ಯಾಯವಾಗಿ ಕೊರೊನಾ ಸಮಯದಲ್ಲಿ 2020 ಆಗಸ್ಟ್ 15ರಿಂದ ಉತ್ತರಕನ್ನಡ ಜಿಲ್ಲೆಯ ಶಿರಸಿಯ ನಿವಾಸಿ ದಿವ್ಯಾ ಗೋಕರ್ಣ ತಾವೇ ಖುದ್ದಾಗಿ ಇಂಡಿಯಾ ಮೇಡ್ ಉತ್ಪನ್ನಗಳನ್ನು ಪ್ರಾರಂಭಿಸಿದ್ದಾರೆ.

ಈಕೆ ಉತ್ಪಾದಿಸುತ್ತಿರೋ ಈ ಉತ್ಪನ್ನದ ಹೆಸರು ಕಾಂಫಿ ಕಪ್ (Comfy cup). ಮೆಡಿಕಲಿ ಅಪ್ರೂವ್ಡ್ ಸಿಲಿಕಾನ್‌ನಿಂದ ನಿರ್ಮಿಸಲ್ಪಟ್ಟ ಈ ಕಾಂಫಿ ಕಪ್, ಮಟ್ಟಿನ ಸಮಯದಲ್ಲಿ ಮಹಿಳೆಯರು ಧರಿಸಬಹುದಾದ ಆರೋಗ್ಯಕರ ಹಾಗೂ ಸುರಕ್ಷಿತ ಉತ್ಪನ್ನ. ಸಾಮಾನ್ಯವಾಗಿ ಒಂದು ತಿಂಗಳಲ್ಲಿ ಮುಟ್ಟಿನ ಸಮಯದಲ್ಲಿ ಹೆಣ್ಣುಮಕ್ಕಳು, ಮಹಿಳೆಯರು (Women)  10-12 ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಾರೆ. ಪ್ರತೀ ತಿಂಗಳು ಇದಕ್ಕೆ ಅಷ್ಟೇ ಬೆಲೆ ಕೊಟ್ಟು ಖರೀದಿಸಬೇಕು. ಆದರೆ, ಕಾಂಫಿ ಕಪ್ ಒಂದು ಬಾರಿ ಖರೀದಿಸಿದರೆ ಸುಮಾರು 10 ವರ್ಷಗಳ ಕಾಲ ಉಪಯೋಗಿಸಬಹುದಾಗಿದೆ. 2019-2020ರಲ್ಲಿ ಈ ಕಾಂಫಿಕಪ್ ತಯಾರಿ ಬಗ್ಗೆ ಸಿದ್ಧತೆ ನಡೆಸುತ್ತಿದ್ದ ದಿವ್ಯಾ, ಕಳೆದ 3 ವರ್ಷಗಳಿಂದ ಇದನ್ನು ಬೆಂಗಳೂರಿನಲ್ಲಿ ತಮ್ಮ ಘಟಕದಲ್ಲಿ ತಯಾರಿಸಿ ಜನರಿಗೆ ಇದರ ಅಗತ್ಯದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಈಗಾಗಲೇ ಸುಮಾರು 8 ಮಂದಿ ಮಹಿಳೆಯರು ಇವರಡಿಯಲ್ಲಿ ಕೆಲಸ ಮಾಡುತ್ತಿದ್ದು, ಕರಾವಳಿ ಜಿಲ್ಲೆಗಳಲ್ಲಿ ಮೆಡಿಕಲ್ ರೆಪ್ರೆಸೆಂಟೇಟಿವ್ಸ್ ಇವುಗಳನ್ನು ಮಾರಾಟ ಕೂಡಾ ಮಾಡುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  ಕೊರೊನಾ ಟೈಮ್‌ನಲ್ಲಿ ಕೈಕೊಟ್ಟ ಚಿಕ್ಕ ಕಿರಾಣಿ ಅಂಗಡಿ: ಯ್ಯೂಟೂಬ್ ವಿಡಿಯೋ ನೋಡಿ ರೊಟ್ಟಿ ಮಷಿನ್ ಖರೀದಿ !