‘ಸೀತಾ ರಾಮ’ ಧಾರಾವಾಹಿಯ ಚಿನಕುರಳಿ ಪ್ರಿಯಾ ಅಲಿಯಾಸ್ ಮೇಘನಾ ಶಂಕರಪ್ಪ, ರಿಯಾಲಿಟಿ ಶೋ 'ಡಾನ್ಸ್ ಕರ್ನಾಟಕ ಡಾನ್ಸ್' ನಲ್ಲಿ ಅಬ್ಬರಿಸಿದ್ದಾರೆ. ಪ್ರಿಯಾ ಅವರ ಡ್ಯಾನ್ಸ್ ಪರ್ಫಾಮೆನ್ಸ್‌ಗೆ ವೀಕ್ಷಕರು ಫಿದಾ ಆಗಿದ್ದಾರೆ, ಜಡ್ಜ್‌ಸ್ ಕೂಡ ಹಾಡಿ ಹೊಗಳಿದ್ದಾರೆ.
ಸದ್ಯ ‘ಸೀತಾ ರಾಮ’ ಧಾರಾವಾಹಿಯಲ್ಲಿ ಚಿನಕುರಳಿ, ಪಟ ಪಟ ಅಂತ ಮಾತಾಡುವ ಪ್ರಿಯಾ ಪಾತ್ರದಲ್ಲಿ ನಟಿ ಮೇಘನಾ ಶಂಕರಪ್ಪ ಅವರು ಗಮನ ಸೆಳೆಯುತ್ತಿದ್ದಾರೆ. ಮೇಘನಾ, ಪ್ರಿಯಾ ಪಾತ್ರಕ್ಕೂ ಅಷ್ಟು ವ್ಯತ್ಯಾಸ ಏನಿಲ್ಲ.ಸೀತಾರಾಮ ಸೀರಿಯಲ್ ಬಂದಿದ್ದೇ ಪ್ರಿಯಾ ಅನ್ನೋ ಚಟಪಟ ಪಟಾಕಿ ಪಾತ್ರದ ಮೂಲಕ ಮೇಘನಾ ಶಂಕರಪ್ಪ ಅನ್ನೋ ಕಿರುತೆರೆ ನಟಿ ಸಖತ್ ಮಿಂಚೋದಕ್ಕೆ ಶುರು ಮಾಡಿದ್ರು. ಈ ಸೀರಿಯಲ್‌ನಲ್ಲಿ ಬಹಳ ಲವಲವಿಕೆಯ ಪಾತ್ರ ಇವರದು. ಜನರಿಗೆ ಈ ಸೀತಾ ಮತ್ತು ರಾಮ ಪಾತ್ರಗಳು ಅದದೇ ಸಮಸ್ಯೆಯಿಂದ ಬಳಲ್ತಾ ಒದ್ದಾಡೋದನ್ನು ನೋಡಕ್ಕಾಗದೇ ಹೋದಾಗ ಈ ಪ್ರಿಯಾ ಮತ್ತು ಅಶೋಕ್ ಪಾತ್ರಧಾರಿಗಳು ಬಂದು ಮನುಷ್ಯರ ಥರ ಮಾತಾಡೋದಕ್ಕೆ ಶುರು ಮಾಡ್ತಾರೆ. ಕೆಲವೊಮ್ಮೆ ರಾಮ್, ಸೀತಾ ಅವರ ಬೋರಿಂಗ್ ಡೈಲಾಗ್ ಬಂದಾಗ ಚಾನೆಲ್ ಚೇಂಜ್ ಮಾಡೋರೋ ಆಗಾಗ ಪ್ರಿಯಾ ಬಂದಳಾ ಅಂತ ನೋಡೋದಿದೆ. ಆ ಲೆವೆಲ್‌ಗೆ ಈ ಪಾತ್ರ ಫೇಮಸ್ ಆಗಿದೆ.
ಮೇಘನಾ ಶಂಕರಪ್ಪ ಮುದ್ದಾದ ಲುಕ್‌ಗೆ ಅಪಾರ ಅಭಿಮಾನಿಗಳಿದ್ದು, ಬ್ಯಾಚುಲರ್ ಹುಡುಗಿಗೆ ಮನಸೋತವರು ಸಾಕಷ್ಟಿದ್ದಾರೆ. ಆದರೆ ಈಕೆ ಕೆಲ ಸಮಯದ ಹಿಂದೆ ಬಾಯ್‌ಫ್ರೆಂಡ್ ಬರ್ತಡೇಗೆ ವಿಶ್ ಮಾಡಿ ಉಂಗುರ ಹಾಕಿರುವ ಕೈಗಳ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಹುಡುಗನ ಜನ್ಮದಿನದ ಪ್ರಯುಕ್ತ ಇಬ್ಬರೂ ಒಂದೇ ರೀತಿಯ ಉಂಗುರ ಧರಿಸಿ ಕೈಮೇಲೆ ಕೈ ಇಟ್ಟ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಮೇಘನಾ ಶಂಕರಪ್ಪ ಹ್ಯಾಪಿ ಬರ್ತಡೇ ಎಂದು ರೆಡ್ ಹಾರ್ಟ್ ಹಾಕಿದ್ದಾರೆ. ಇದರಿಂದ ಮೇಘನಾ ನಿಜ ಜೀವನದಲ್ಲಿಯೂ ಕಮಿಟ್ ಆಗಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎನ್ನುವುದು ಸಾಬೀತಾಗಿದೆ.
ಇರಲಿ ಈಗ ವಿಷಯಕ್ಕೆ ಬರಾಣ. ಈ ಪ್ರಿಯಾ ಸೀರಿಯಲ್ ನಲ್ಲಿ ಮಾತ್ರ ಫೇಮಸ್ ಅಲ್ಲ. ರಿಯಾಲಿಟಿ ಶೋನಲ್ಲೂ ತಾನು ರಿಯಲ್ ಲೈಫಲ್ಲೂ ಅದೇ ಥರ ಲವಲವಿಕೆಯ ಹುಡುಗಿ ಅನ್ನೋದನ್ನು ತೋರಿಸಿದ್ದಾರೆ. ಹೌದು ಜೀ ಕನ್ನಡದಲ್ಲಿ 'ಡಾನ್ಸ್ ಕರ್ನಾಟಕ ಡಾನ್ಸ್' ಶೋನಲ್ಲಿ ಪ್ರಿಯಾ ಬೆಸ್ಟ್ ಪರ್ಫಾಮರ್ ಆಗಿ ಗುರುತಿಸಿಕೊಂಡಿದ್ದಾರೆ. ಅದರಲ್ಲಿ ಈ ಬಾರಿ 'ಬಾರೆ ಸಂತೆಗೆ ಹೋಗೋಣ ಬಾ.. ಸಿನಿಮಾ ಟೆಂಟಲ್ಲಿ ಕೂರೋಣ ಬಾ' ಹಾಡಿಗೆ ಪ್ರಿಯಾ ಬಹಳ ಸೊಗಸಾದ ಪರ್ಫಾಮೆನ್ಸ್ ತೋರಿಸಿದ್ದಾರೆ.
ಇನ್ನೊಬ್ಬ ನಟ ಆಯುಧ್ ಈಕೆಗೆ ಸಾಥ್ ನೀಡಿದ್ದಾರೆ. ಪ್ರಿಯಾ ಸ್ವಲ್ಪ ದಪ್ಪದ ಹುಡುಗಿ ಅಂತ ಗುರುತಿಸಿಕೊಂಡರೂ ಇದರಲ್ಲಿ ಅವರ ಕುಣಿತ ನೋಡಿ ಎಲ್ಲರೂ ದಂಗಾಗಿದ್ದಾರೆ. ದೇಹದ ತೂಕ, ಆಕಾರ ಯಾವುದೂ ಅವರ ಪರ್ಫಾಮೆನ್ಸ್‌ಗೆ ಅಡ್ಡಿ ಆಗಿಲ್ಲ. ಇವರ ಈ ಡ್ಯಾನ್ಸ್‌ಗೆ ಈ ರಿಯಾಲಿಟಿ ಶೋ ವೀಕ್ಷಕರೂ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ, ಜಡ್ಜ್‌ಸ್ ಕೂಡ ಪ್ರಿಯಾ ಪರ್ಫಾಮೆನ್ಸ್ ಅನ್ನು ಹಾಡಿ ಹೊಗಳಿದ್ದಾರೆ.
ಹೊಂದಿಸಿ ಬರೆಯಿರಿ ನಿರ್ದೇಶಕರ ಹೊಸ ಸಿನಿಮಾಕ್ಕೆ ಹೊಂಗನಸು ರಿಷಿ ಹೀರೋ; ಮುಖೇಶ್ ಹೆಸ್ರೇ ಬದಲಾಯ್ತಲ್ಲ!
ಆದರೆ ಪಫಾಮೆನ್ಸ್ ಬಳಿಕ ಪ್ರಿಯಾ ಅವರನ್ನು ಆಂಕರ್ ಅನುಶ್ರೀ ಮಾತಿಗೆಳೆದಿದ್ದಾರೆ. ಕಿಲಾಡಿ ಪ್ರಿಯಾ ಆಕೆಯನ್ನು, ಜಡ್ಜಸ್‌ನ್ನ ಕಟ್ಟಿ ಹಾಕೋ ಹಾಗೆ ಪ್ರಶ್ನೆ ಕೇಳಿದ್ದಾರೆ. 'ಆನೆ ದೊಡ್ಡದಾ? ಇರುವೆ ದೊಡ್ಡದಾ?' ಅನ್ನೋ ಸಿಂಪಲ್ ಪ್ರಶ್ನೆ ಆಕೆಯದ್ದು. ಅನುಶ್ರೀ ಮುಗ್ಧವಾಗಿ ಆನೆಯದ್ದು ಅಂದಿದ್ದಾರೆ. 'ಅದ್ಹೇಗೆ ಹೇಳ್ತೀರಿ?' ಅಂತ ಮರುಪ್ರಶ್ನೆ ಮಾಡಿದ ಪ್ರಿಯಾ, 'ಫಸ್ಟ್ ಅವ್ರಿಬ್ರ ಡೇಟ್ ಆಫ್ ಬರ್ತ್ ಕೇಳಬೇಕಲ್ವಾ?' ಅಂದಾಗ ಅಲ್ಲಿದ್ದವರೆಲ್ಲ ಬಿದ್ದೂ ಬಿದ್ದೂ ನಕ್ಕಿದ್ದಾರೆ. ಪ್ರಿಯಾರ ಪರ್ಫಾಮೆನ್ಸ್‌ಗೆ ವೀಕ್ಷಕರಂತೂ ಫುಲ್ ಖುಷಿಯಲ್ಲೇ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಅಲ್ಲಿಗೆ ಪ್ರಿಯಾ ಆಲಿಯಾಸ್ ಮೇಘನಾ ತಾನು ಸೀರಿಯಲ್‌ಗೂ ಸೈ, ರಿಯಾಲಿಟಿ ಶೋಗೂ ಸೈ ಅನ್ನೋದನ್ನು ಪ್ರೂವ್ ಮಾಡಿ ತೋರಿಸಿದ್ದಾರೆ. ಜೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ವೀಕೆಂಡ್ ರಾತ್ರಿ ಏಳೂವರೆಗೆ ಪ್ರಸಾರವಾಗುತ್ತೆ.