ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಕಿರುತೆತರೆ ನಟಿ ಇಬ್ಬರನ್ನು ಮದುವೆಯಾಗಿದ್ದು, ಸದ್ಯ ಮಕ್ಕಳ ಜೊತೆ ಜೀವನ ನಡೆಸುತ್ತಿದ್ದಾರೆ. ನನ್ನ ಒಪ್ಪಿಗೆ ಇಲ್ಲದೇ ಬಲವಂತವಾಗಿ ಲೈಂಗಿಕ ಸಂಬಂಧ ಬೆಳೆಸುತ್ತಿದ್ದ ಎಂದು ನಟಿ ಹೇಳಿಕೊಂಡಿದ್ದಾರೆ.
ಮುಂಬೈ: ಕಿರುತೆರೆಯಿಂದ ವೃತ್ತಿ ಜೀವನ ಆರಂಭಿಸಿದ ನಟಿ ಇಂದು ಬೆಳ್ಳಿ ಪರದೆ ಮೇಲೆ ಮಿಂಚುತ್ತಿದ್ದು, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆದರೆ ಈ ನಟಿ ತಮ್ಮ ಖಾಸಗಿ ಜೀವನದ ವಿಷಯಗಳಿಂದಲೂ ಸದಾ ಚರ್ಚೆಯಲ್ಲಿರುತ್ತಾರೆ. ಎರಡು ಮದುವೆಯಾದ್ರೂ ಇಬ್ಬರಿಂದಲೂ ದೂರವಾಗಿರುವ ನಟಿ ಸದ್ಯ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಮದುವೆಯಿಂದ ನನಗೆ ಯಾವುದೇ ನೆಮ್ಮದಿ ಸಿಕ್ಕಿಲ್ಲ ಎಂದು ನಟಿ ಹಲವು ಬಾರಿ ಹೇಳಿಕೊಂಡಿದ್ದಾರೆ. ನಟಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಸ್ವಾವಲಂಭಿಯಾಗಿ ಬದುಕುತ್ತಿದ್ದಾರೆ. ತಮ್ಮ 16ನೇ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿದ ನಟಿಗೆ ವೃತ್ತಿ ಜೀವನದ ಆರಂಭದಲ್ಲಿಯೇ ಪ್ರೀತಿಯ ಸೆಲೆಯಲ್ಲಿ ಸಿಲುಕಿದ್ದರು. ನಾವು ಹೇಳುತ್ತಿರೋದು ಮೋಸ್ಟ್ ಬ್ಯುಟಿಫುಲ್ ನಟಿ ಚಾಹತ್ ಖನ್ನಾ ಬಗ್ಗೆ. ಕುಂಕುಮ್ ಭಾಗ್ಯ ಧಾರಾವಾಹಿಯಿಂದ ಖ್ಯಾತಿ ಪಡೆದ ನಟಿಯ ನೋವಿನ ಕಥೆ ಇಲ್ಲಿದೆ.
ಚಾಹತ್ ಖನ್ನಾ ಜಾಹೀರಾತಿನಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟಿದ್ದರು. ಜಾಹೀರಾತಿನ ಬಳಕ ಚಾಹತ್ ಖನ್ನಾರನ್ನು (Chahatt Khanna) ಹುಡುಕಿಕೊಂಡು ಅವಕಾಶಗಳು ಬಂದವು. ಕುಂಕುಮ್-ಏಕ್ ಪ್ಯಾರಾ ಸಾ ಬಂಧನ್, ಕಾಜಲ್, ಬಡೇ ಅಚ್ಚ ಲಗತೇ ಹೋ, ಕುಬೂಲ್, ಡರ್ ಸಬಕೋ ಲಗ್ತಾ ಹೈ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಚಾಹತ್ ಖನ್ನಾ ನಟಿಸಿದ್ದಾರೆ. ಧಾರಾವಾಹಿ ಜೊತೆ ಖಾಸಗಿ ವಿಷಯಗಳಿಂದಲೂ ಚಾಹತ್ ಖನ್ನಾ ಸುದ್ದಿಯಲ್ಲಿರುತ್ತಾರೆ. ಚಾಹತ್ ಖನ್ನಾ ಸಂದರ್ಶನದಲ್ಲಿ ನೀಡಿದ ಕೆಲ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಮಗನಿಗೆ ಕ್ರೈಸ್ತ ಧರ್ಮವನ್ನು ಪರಿಚಯಿಸಿದ್ದು ಕರೀನಾ.. ಹಾಗಾಗಿ ಆ ಪ್ರಶ್ನೆಗಳನ್ನ ಕೇಳ್ತಾನೆ ಎಂದ ಸೈಫ್ ಅಲಿ ಖಾನ್
ತಮ್ಮ ಮೊದಲ ಮದುವೆ ಕೇವಲ ಐದು ತಿಂಗಳಲ್ಲಿಯೇ ಕೊನೆಯಾಯ್ತು ಎಂದು ಚಾಹತ್ ಖನ್ನಾ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಮೊದಲ ಮದುವೆ ಬಳಿಕ ಗಂಡನ ಕುಟುಂಬಸ್ಥರು ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದರು. ಪತಿ ಸಹ ತಮ್ಮ ಮೇಲೆ ದೌರ್ಜನ್ಯ ಎಸಗಿದ್ದನು ಎಂದು ಚಾಹತ್ ಖನ್ನಾ ಆರೋಪಿಸುತ್ತಾರೆ. ಹಲ್ಲೆಯಿಂದಾಗಿ ಚಾಹತ್ ಖನ್ನಾ ಆಸ್ಪತ್ರೆಗೆ ದಾಖಲಾಗಿದ್ದರು. ಹಲ್ಲೆಯ ವಿಷಯವನ್ನು ಪೋಷಕರಿಗೆ ಚಾಹತ್ ಖನ್ನಾ ತಿಳಿಸಿದಾಗ ಎಲ್ಲರೂ ಶಾಕ್ ಆಗಿದ್ದರು. ಹಾಗಾಗಿ ಮದುವೆಯಾದ ಐದು ತಿಂಗಳಿಗೆ ದಾಂಪತ್ಯ ಜೀವನ ಕೊನೆಯಾಯ್ತು ಎಂದು ಚಾಹತ್ ಹೇಳುತ್ತಾರೆ.
ಮೊದಲ ಪತಿ ಭರತ್ ಸಿಂಗ್ ಜೊತೆ ಡಿವೋರ್ಸ್ ಪಡೆದ ಬಳಿಕ ಚಾಹತ್ ಖನ್ನಾ ಜೀವನದಲ್ಲಿ ಎರಡನೇ ಬಾರಿ ಪ್ರೇಮದ ಹೂ ಅರಳಿತ್ತು. ಫರ್ಹಾನ್ ಮಿರ್ಜಾ ಜೊತೆಯಲ್ಲಿ ಚಾಹತ್ ಎರಡನೇ ಮದುವೆಯಾದರು. ಮದುವೆ ಬಳಿಕ ಫರ್ಹಾನ್ ಮತ್ತು ಚಾಹತ್ ನಡುವೆ ಎಲ್ಲವೂ ಚೆನ್ನಾಗಿತ್ತು. ಆದ್ರೆ ವರ್ಷಗಳು ಕಳೆದಂತೆ ಫರ್ಹಾನ್-ಚಾಹತ್ ನಡುವೆ ವೈಮನಸ್ಸು ಶುರುವಾಯ್ತು. ಫರ್ಹಾನ್ ನನ್ನನ್ನು ಕಂಟ್ರೋಲ್ ಮಾಡಲು ಶುರು ಮಾಡಿದ. ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲು ಆರಂಭಿಸಿದನು. ಅನಾರೋಗ್ಯದಿಂದ ಬಳಲುತ್ತಿದ್ದರೂ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸುತ್ತಿದ್ದನು. ನಾನು ಬೇರೆಯವರ ಜೊತೆಯಲ್ಲಿ ಅಕ್ರಮ ಸಂಬಂಧ ಹೊಂದಿದ್ದೇನೆ ಎಂದು ಅನುಮಾನಿಸಿ ಕಿರುಕುಳ ನೀಡುತ್ತಿದ್ದನು ಎಂದು ಚಾಹತ್ ಖನ್ನಾ ಹೇಳಿದ್ದಾರೆ.
80ರ ದಶಕದಲ್ಲೇ ಬೋಲ್ಡ್ ಆಗಿ ನಟಿಸಿದ ಮುಸ್ಲಿಂ ನಟಿ, ಹಿಂದೂ ಧರ್ಮಕ್ಕೆ ಬದಲಾದ್ರೂ ಮದುವೆ ಭಾಗ್ಯ ಸಿಗ್ಲಿಲ್ಲ!