ಗಂಡನನ್ನೇ ಮದ್ವೆಯಾಗ್ತಿರೋಳಿಗೆ 'ಕನ್ಯಾಶುದ್ಧಿ' ಮಾಡಿದ ಭಾಗ್ಯ! ಸಕತ್​ ಮಜಾ ಬರ್ತಿದೆ ಅಂತಿದ್ದಾರೆ ಫ್ಯಾನ್ಸ್​

By Suchethana D  |  First Published Aug 17, 2024, 5:50 PM IST

ತನ್ನ ಗಂಡ ತಾಂಡವ್​ನನ್ನೇ ಮದುವೆಯಾಗಹೊರಟಿರೋ ಶ್ರೇಷ್ಠಾಳಿಗೆ ಕನ್ಯಾಶುದ್ಧಿ ಮಾಡಿದ್ದಾಳೆ ಭಾಗ್ಯ. ಭಾಗ್ಯಲಕ್ಷ್ಮಿ ಸೀರಿಯಲ್​ ಪ್ರೇಮಿಗಳು ಖುಷಿಯಾಗಿದ್ದೇಕೆ?
 


ಸ್ಟಾರ್​ ಹೊಟೆಲ್​ನಲ್ಲಿ ಕೆಲಸ ಗಿಟ್ಟಿಸಿಕೊಂಡು ಅಳುಮುಂಜಿಯಿಂದ ಸ್ವಾವಲಂಬಿಯಾಗಿದ್ದ ಭಾಗ್ಯ ಮತ್ತೊಮ್ಮೆ ಅಳುಮುಂಜಿಯಾಗಿ ಮಾಡಲಾಗಿತ್ತು. ಇದನ್ನು ನೋಡಿ ಭಾಗ್ಯಲಕ್ಷ್ಮಿ ಸೀರಿಯಲ್​ ವೀಕ್ಷಕರು ಸಿಕ್ಕಾಪಟ್ಟೆ ಗರಂ  ಆಗಿಬಿಟ್ಟಿದ್ದರು.  ಬದಲಾದ ಭಾಗ್ಯಳನ್ನು ನೋಡಿ,  ಖುಷಿಪಟ್ಟಿದ್ದರು ವೀಕ್ಷಕರು. ನೀವೇ ನಮ್ಮ ಮಾಡೆಲ್​, ನಿಮ್ಮನ್ನು ನೋಡಿ ಅದೆಷ್ಟು ಹೆಣ್ಣುಮಕ್ಕಳಿಗೆ ಧೈರ್ಯ ಸಿಕ್ಕಿದೆ ಎಂದಿದ್ದರು. ಆದರೆ ಮತ್ತೆ ಅದೇ ಅಳುಮುಂಜಿಯಾಗಿ ತೋರಿಸಲಾಗಿತ್ತು. ಶ್ರೇಷ್ಠಾಳ ಕುತಂತ್ರದಿಂದ ಮತ್ತೆ ಭಾಗ್ಯ ನೋವು ಪಡುವಂತಾಗಿತ್ತು.  ಭಾಗ್ಯಳ ವಿರುದ್ಧ ಇಲ್ಲಸಲ್ಲದ ವಿಡಿಯೋಗಳನ್ನು ದುಡ್ಡು ಕೊಟ್ಟು ವೈರಲ್​  ಮಾಡಿಸಿದ್ದಳು ಶ್ರೇಷ್ಠಾ.  ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದು, ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಗಿಟ್ಟಿಸಿಕೊಂಡು ಒಂದರ್ಥದಲ್ಲಿ ಸೆಲೆಬ್ರಿಟಿಯಾಗಿದ್ದ ಭಾಗ್ಯಳ ಮಾನವನ್ನು ಹರಾಜು ಮಾಡುವಲ್ಲಿ ಅವಳು ಯಶಸ್ವಿಯಾಗಿದ್ದಾಳೆ. ನೌಕರಿ ಸಿಕ್ಕ ಕೂಡಲೇ ಡಿವೋರ್ಸ್​ ಕೊಡಲು ಮುಂದಾಗಿದ್ದಾಳೆ ಎಂದೆಲ್ಲಾ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾಳೆ. ಇನ್ನು ತಾಂಡವ್​ ಕೇಳಬೇಕೆ? ಹಿಗ್ಗಾಮುಗ್ಗ ಭಾಗ್ಯಳಿಗೆ ಬೈಯುತ್ತಾ ಇದ್ದು, ಮತ್ತೆ ಮೊದಲಿನಂತೆಯೇ ಆಗಿದ್ದಾಳೆ ಭಾಗ್ಯ. ಇದನ್ನು ನೋಡಿ ನೆಟ್ಟಿಗರು ಗರಂ ಆಗಿದ್ದರು. ಹೆಣ್ಣು ಮಕ್ಕಳು ಸ್ಟ್ರಾಂಗ್​ ಆಗಿ ಇರುವುದನ್ನು ನೋಡಲು ಆಗಲ್ವಾ? ಮತ್ಯಾಕೆ ಈ ರೀತಿ ಅವರನ್ನು ಅಳುಮುಂಜಿ ರೀತಿ ಪದೇ ಪದೇ ತೋರಿಸ್ತೀರಾ ಎಂದು ಸೀರಿಯಲ್​ ಪ್ರೇಮಿಗಳು ನಿರ್ದೇಶಕರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು.

ಆದರೆ ಈಗ ಮತ್ತೊಮ್ಮೆ ಭಾಗ್ಯಳಿಗೆ ಭಾಗ್ಯದ ಬಾಗಿಲು ತೆರೆದಿದೆ. ತನ್ನ ವಿರುದ್ಧ ವಿಡಿಯೋ ಹರಿಬಿಡುವಂತೆ  ಮಾಡಿದ್ದು ಶ್ರೇಷ್ಠಾಳೇ ಎನ್ನುವ ಸತ್ಯ ಭಾಗ್ಯಳಿಗೆ ತಿಳಿದಿದೆ. ಭಾಗ್ಯ ಇನ್ನು ತನ್ನ ತಂಟೆಗೆ ಬರುವುದಿಲ್ಲ ಎಂದು ಮದುವೆಗೆ ರೆಡಿ ಮಾಡಿಕೊಂಡಿದ್ದಾರೆ. ಆರಂಭದಲ್ಲಿ ನಡೆಯುವ ಕನ್ಯಾಶುದ್ಧಿಗೆ  ಶ್ರೇಷ್ಠಾಳ ಅಪ್ಪ-ಅಮ್ಮ ಬಂದಿದ್ದಾರೆ. ಆದರೆ ಇದರ ನಡುವೆಯೇ ಭಾಗ್ಯ ಅಲ್ಲಿಗೆ ಬಂದು ತಾನೇ ಕನ್ಯಾಶುದ್ಧಿ ಮಾಡುತ್ತೇನೆ ಎಂದಿದ್ದಾಳೆ. ಕೊನೆಗೆ ರೆಡಿಯಾಗಿ ಕುಳಿತಿದ್ದ ಶ್ರೇಷ್ಠಾಳಿಗೆ ಬಿಂದಿಗೆಯಿಂದ ನೀರು ಹೊಯ್ದಿದ್ದಾಳೆ. ಇದನ್ನು ನೋಡಿ ಎಲ್ಲರೂ ಶಾಕ್​ ಆಗಿದ್ದಾರೆ. 

Tap to resize

Latest Videos

ಮಸ್ತ್​ ಮಸ್ತ್​ ಹುಡುಗಿ ಬಂದ್ಲು... ಉಪ್ಪಿ ಗೆಟಪ್​ನಲ್ಲಿ ಆರ್ಯವರ್ಧನ್​ ಗುರೂಜಿ ಡಾನ್ಸ್​ ಹೇಗಿದೆ? ಇಲ್ಲಿದೆ ವಿಡಿಯೋ

ಆದರೆ ಅಲ್ಲಿಗೆ ಭಾಗ್ಯ ವಿಡಿಯೋ ಅಪ್​ಲೋಡ್​ ಮಾಡಿದ ಯುವತಿಯನ್ನೂ ಕರೆದುಕೊಂಡು ಬಂದಿದ್ದಾಳೆ. ಜೊತೆಗೆ ಪೂಜಾ ಮತ್ತು ಹಿತಾ ಬಂದಿದ್ದಾರೆ. ಆದರೆ ಅದನ್ನು ಶ್ರೇಷ್ಠಾ ನೋಡಲಿಲ್ಲ. ವಿಡಿಯೋ ಅಪ್​ಲೋಡ್​ ಮಾಡಿದ್ದ ಯುವತಿಯನ್ನು ಕಂಡುಹಿಡಿದಿದ್ದ ಪೂಜಾ, ಮೊದಲಿಗೆ ಆಕೆಗೆ ಕರೆ ಮಾಡಿ, ನಮಗೂ ಇಂಥ ವಿಡಿಯೋ ಮಾಡಿಸಬೇಕಿದೆ. ಎಷ್ಟು ದುಡ್ಡು ಖರ್ಚಾದರೂ ಪರವಾಗಿಲ್ಲ ಎಂದುಕೊಂಡು ಆಕೆಯನ್ನು ಸಂಪರ್ಕಿಸಿದ್ದಾರೆ. ಆಕೆ ಖುಷಿಯಿಂದ ಒಪ್ಪಿಕೊಂಡು ತನ್ನ ಮನೆಯ ವಿಳಾಸ ಕೊಟ್ಟಿದ್ದಾಳೆ. ಭಾಗ್ಯ, ಹಿತಾ  ಮತ್ತು ಪೂಜಾ ಅವಳಿದ್ದಲ್ಲಿಗೆ ಹೋಗಿ ಪೊಲೀಸ್​ ಕಂಪ್ಲೇಂಟ್​ ಕೊಡುವುದಾಗಿ ಬೆದರಿಸಿದಾಗ ಶ್ರೇಷ್ಠಾಳ ಹೆಸರನ್ನು ಆಕೆ ಬಾಯಿ ಬಿಟ್ಟಿದ್ದಾಳೆ. 

ಆದ್ದರಿಂದ ಶ್ರೇಷ್ಠಾಳಿಗೆ ಬುದ್ಧಿ ಕಲಿಸುವುದಾಗಿ ಪಣತೊಟ್ಟಿರೋ ಭಾಗ್ಯ ಈಗ ಎಲ್ಲರನ್ನೂ ಕರೆದುಕೊಂಡು ಶ್ರೇಷ್ಠಾಳ ಮನೆಗೆ ಬಂದು ಕನ್ಯಾಶುದ್ಧಿ ಮಾಡಿದ್ದಾಳೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಸೀರಿಯಲ್​ ಪ್ರೇಮಿಗಳು ಕುಣಿದಾಡಿದ್ದಾರೆ. ಇಂಥ ಭಾಗ್ಯ ನಮಗೆ ಬೇಕು. ಮತ್ತೆ ಅವಳನ್ನು ಸೋಲುವ ಹಾಗೆ ಮಾಡಬೇಡಿ. ಇವಳೇ ನಮಗೆ ಸ್ಫೂರ್ತಿ ಎನ್ನುತ್ತಿದ್ದಾರೆ. ಆದರೆ ವಿಚಿತ್ರ ಎಂದರೆ ಇದುವರೆಗೂ ಭಾಗ್ಯಂಗಾಗಲೀ ಆಕೆಯ ಮನೆಯವರಿಗಾಗಲೀ ಈಕೆ ಮದುವೆಯಾಗುತ್ತಿರುವುದು ತಾಂಡವ್​ನನ್ನೇ ಎನ್ನುವ ಸತ್ಯ ತಿಳಿಯದೇ ಇರುವುದು. ಅದು ತಿಳಿದ ಮೇಲೆ ಭಾಗ್ಯಳ ಸ್ಥಿತಿ ಇನ್ನೇನಾಗುತ್ತದೋ ಕಾದು ನೋಡಬೇಕಿದೆ! 

ಅತ್ತೆ ಮನೆಯಲ್ಲಿ ಅತಿಯಾದ ಒಳ್ಳೆತನವೂ ವಿಷವಾಗುತ್ತೆ ಹುಷಾರ್​! ನೀವೂ ಪೂರ್ಣಿ ಆಗದಿರಿ... ಹೆಣ್ಮಕ್ಕಳಿಗೆ ಕಿವಿಮಾತು

click me!