ಆರಂಭದಿಂದಲೂ ಕಥೆಯಲ್ಲಿ ಟ್ವೀಸ್ಟ್ ಕೊಡುತ್ತಿರೋ ಜೀ ಕನ್ನಡದ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮತ್ತೊಂದು ದೊಡ್ಡ ತಿರುವು. ಜಯಂತ್ ನಾಯಕನಲ್ಲ, ಸೈಕೋ ಅಂತಿರೋದು ಯಾಕೆ ನೆಟ್ಟಿಗರು ಇಲ್ಲಿದೆ ನೋಡಿ..
ಜಯಂತನಂಥ ಗಂಡ ಸಿಕ್ಕಿದ್ರೆ ಎಷ್ಟು ಚಂದ ಇರೋದು ಅಂತ ಯೋಚಿಸ್ತಿದ್ದ ಹೆಣ್ಣ ಮಕ್ಕಳಿಗೆ ಬಿಗ್ ಶಾಕ್ ಕೊಟ್ಟಿದೆ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ
ಭೂಮಿ ಮೇಲೆ ಇಷ್ಟು ಒಳ್ಳೆ ಗಂಡ ಎಲ್ಲಾದರೂ ಸಿಗೋಕೆ ಸಾಧ್ಯನಾ? ಗುಣ, ರೂಪ, ಹೆಸರು ಎಲ್ಲದರಲ್ಲೂ ಜಯಂತ್ ಪರ್ಫೆಕ್ಟ್. ಒಬ್ಬ ಒಳ್ಳೆ ಗಂಡ ಆಗೋ ಫುಲ್ ಪ್ಯಾಕೇಜ್ ನಮ್ಮ ಜಯಂತ್ ಎಂದು ಭಾವಿಸಿದ್ದ ವೀಕ್ಷಕರ ಲೆಕ್ಕ ಉಲ್ಟಾ ಮಾಡುತ್ತಿದೆ ಲಕ್ಷ್ಮೀ ನಿವಾಸ ಧಾರಾವಾಹಿಯ ಜಯಂತ್. ಜಯಂತ್ ಲಕ್ಷ್ಮೀ ನಿವಾಸಕ್ಕೆ ಒಳ್ಳೆಯ ಅಳಿಯ, ಹೆಂಡತಿಗೆ ಮುದ್ದಿನ ಗಂಡ ಆಗ್ತಾನೆ ಎನ್ನುವಷ್ಟರಲ್ಲೇ ಕಥೆಯಲ್ಲಿ ಹೊಸ ತಿರುವು ಕೊಟ್ಟು, ಅಭಿಮಾನಿಗಳ ಸಿಟ್ಟಿದೆ ಗುರಿಯಾಗಿದ್ದಾರೆ ನಿರ್ದೇಶಕರು. ಜಯಂತ್‌ನ ಕೆಟ್ಟವನಾಗಿ ತೋರಿಸಿದ್ರೆ ಧಾರಾವಾಹಿಯನ್ನೇ ನೋಡಲ್ಲವೆಂದು ರಚ್ಚೆ ಹಿಡಿಯುತ್ತಿದ್ದಾರೆ ಪ್ರೇಕ್ಷಕರು.
ಜಯಂತ್ ಶ್ರೀಮಂತ ಅನಾಥ ಹುಡುಗ. ಕೂಡು ಕುಟುಂಬದ ಜಾನು ನೋಡಿ ಫಿದಾ ಆಗಿ, ಡೈರೆಕ್ಟ್ ಮನೆಗೆ ಬಂದು ಹೆಣ್ಣು ಕೇಳಿ ಮದುವೆಯಾಗಿದ್ದಾನೆ. ಜಾನುವಿನ ಸಣ್ಣ ಪುಟ್ಟ ಆಸೆಗಳನ್ನೂ ಪೊರೈಸುತ್ತ ವೀಕ್ಷಕರ ಹೃದಯ ಗೆಲ್ಲುವಲ್ಲಿ ಯಶಸ್ವಿಯೂ ಆಗಿದ್ದಾನೆ. ಪ್ರೋಮೋಗಳ ಮೂಲಕ ಕಥೆಯ ನಾಯಕ ಎಂದು ಬಿಂಬಿಸಿದ್ದ ನಟ ರಘು ಮುಖರ್ಜಿ ಪಾತ್ರಕ್ಕೆ ಧಾರಾವಾಹಿಯ ಆರಂಭದಲ್ಲೇ ಅಂತ್ಯ ಹೇಳಲಾಗಿತ್ತು. ಆಗಲೇ ಈ ಧಾರಾವಾಹಿಯ ನಾಯಕ ಯಾರು ಎಂದು ಮೂಡಿದ್ದ ಕುತೂಹಲಕ್ಕೆ ಜಯಂತ್ ಆಗಮನ ವೀಕ್ಷಕರ ಖುಷಿಗೆ ಕಾರಣವಾಗಿತ್ತು. ಆದರೀಗ ಜಯಂತನ ವರ್ತನೆ ಕಂಡು ಇವನು ನಾಯಕನಲ್ಲ, ಸೈಕೋ ಎಂಬ ನಿರ್ಧಾರಕ್ಕೆ ಬರುವಂತಾಗಿದೆ.
ಮದುವೆಯಾಗಿ ಜಯಂತ್‌ನೊಂದಿಗೆ ಒಬ್ಬಂಟಿಯಾಗಿ ಗಂಡನ ಮನೆಗೆ ಬಲಗಾಲಿಟ್ಟು ಒಳಗೆ ಬಂದ ಜಾನುಗೆ ಇಷ್ಟು ಪ್ರೀತಿ ತೋರುವ ಗಂಡ ತನಗೆ ಸಿಕ್ಕಿದ್ದು, ಯಾವುದೋ ಜನ್ಮದ ಅದೃಷ್ಟವೆಂದೇ ಭಾವಿಸಿದ್ದಳು. ಆದರೀಗ ಅದೇ ಪ್ರೀತಿ ಅವಳಿಗೆ ಮುಳುವಾಗುತ್ತಿದೆ. ಮೊದಲ ರಾತ್ರಿಯೇ ಜಯಂತನಿಗೆ ಮತ್ತೊಂದು ಮುಖವಿದೆ ನೋಡು ಎಂಬುವಂತೆ ನಿರ್ದೇಶಕ ಕಥೆಯಲ್ಲಿ ಹೊಸ ತಿರುವು ನೀಡಿದ್ದಾನೆ. ಜಾನು ಬಳಿ ಬಂದ ಜಿರಳೆಯನ್ನು ಹಿಡಿದು ಹೊಸಕಿ ಹಾಕಿದ್ದಲ್ಲದೇ, ಅದನ್ನು ಹಾಲಿಗೆ ಹಾಕಿ ಕುಡಿದ ಜಯಂತನ ವರ್ತನೆ ಈತ ನಾಯಕನಲ್ಲ ಪಕ್ಕ ಸೈಕೋ.. ಅತಿ ವಿನಯಂ ಧೂರ್ತ ಲಕ್ಷಣಂ, ಗಿಳಿಯನ್ನು ಗಿಡುಗದ ಕೈಗೆ ಕೊಟ್ಟ ಹಾಗೆ ಆಯ್ತ ಎಂಬ ನಿರ್ಣಾಯಕ್ಕೆ ವೀಕ್ಷಕರು ಬಂದಾಗಿದೆ.
ಜಯಂತ್ - ಜಾನು ಮದ್ವೆಗೆ ಎಲ್ಲಾರೂ ರೆಡಿ, ತಾಳಿ ಕಟ್ಟಿದ್ದಕ್ಕೆ ವೀಕ್ಷಕರು ರಿಲ್ಯಾಕ್ಸ್!
ಲಕ್ಷ್ಮೀ ನಿವಾಸದಲ್ಲಿ ರೋಚಕ ತಿರುವು ಇದೇ ಮೊದಲಲ್ಲ!
ಭಾವನಾ ಮದ್ವೆಯಾಗುತ್ತೆಂದು ಕಾಯುತ್ತಿದ್ದ ಪ್ರೇಕ್ಷಕರಿಗೆ ಆರಂಭದಲ್ಲಿ ರಘು ಮುಖರ್ಜಿಯನ್ನು ಸಾಯಿಸಿ, ತಿರುವು ಕೊಟ್ಟಿತ್ತು ಈ ಸೀರಿಯಲ್. ಇನ್ನು ಜಾಹ್ನವಿಗೆ ಪ್ರಾಣ ಸ್ನೇಹಿತ ವಿಶ್ವನ ಪ್ರೀತಿ ಅರಿವಾಗಿ ಅವರಿಬ್ಬರ ನಡುವೆ ಪ್ರೇಮಾಂಕುರವಾಗುತ್ತದೆ, ಎನ್ನುವಷ್ಟರಲ್ಲೇ ಜಯಂತನ ಆಗಮನವಾಗಿದ್ದು ಮಾತ್ರವಲ್ಲ, ಮದುವೆಯೂ ನಡೆದು ಹೋಗಿದೆ. ಇಷ್ಟು ದಿನ ಮದುವೆ ಆಗುತ್ತೋ ಇಲ್ಲವೋ, ವಿಶ್ವ ಬಂದು ಮದುವೆ ನಿಲ್ಲಿಸುತ್ತಾನೆ ಅಂತ ಏನೇನೋ ಗೆಸ್ ಮಾಡುತ್ತಿದ್ದ ಪ್ರೇಕ್ಷಕರು ಜಯಂತ್ ಜಾನು ಕತ್ತಿಗೆ ತಾಳಿ ಕಟ್ಟಿದ ಕೂಡಲೇ ನಿರುಮ್ಮಳವೂ ಆಗಿದ್ದರು.ಆದರೀಗ ಛೇ ಯಾಕಾದ್ರೂ ಮದ್ವೆಯಾಯಿತೋ ಎಂದು ಆತಂಕ ಹುಟ್ಟುವಂತೆ ಮಾಡಿದೆ ಈ ಸೀರಿಯಲ್
ಜಯಂತನನ್ನು ವೀಕ್ಷಕರು ಹೀರೋ ಎಂದು ನೋಡುತ್ತಿರುವಾಗಲೇ, ಸಿದ್ದೇಗೌಡರ ಆಗಮನವೂ ಆಗಿದೆ. ಜಯಂತ್‌ನನ್ನು ಸೈಕೋ ರೀತಿ ತೋರಿಸಲಾಗುತ್ತಿದೆ. ಹಾಗಾದ್ರೆ ಸಿದ್ಧೇಗೌಡರೇ ಹೀರೋನಾ ಅನ್ನೋ ಅನುಮಾನ ಶುರುವಾಗಿದೆ ಈಗ. ಅಲ್ಲಿಯೂ ಕಥೆಗೆ ಏನು ತಿರುವು ಸಿಗುತ್ತೋ ಕಾದು ನೋಡಬೇಕು.
Lakshmi Nivasa ಸೀರಿಯಲ್ ಗೆ ಹೊಸ ಎಂಟ್ರಿ… ಸಿಂಚನಾ ಪಾತ್ರಕ್ಕೆ ದಿವ್ಯಶ್ರೀ ಗುಡ್ ಬೈ ಹೇಳಲು ಕಾರಣ ಕಲರ್ಸ್ ಕನ್ನಡ!