ಸರಿಗಮಪದಲ್ಲಿ ಜಡ್ಜ್‌ಗಳನ್ನೇ ಕುಣಿಸಿದ ಈ ಪುಟಾಣಿ ಹುಡುಗಿ ಯಾರು? ಈಕೆಯ ಮುದ್ದಾಟಕ್ಕೆ ವೀಕ್ಷಕರು ಫಿದಾ

Published : Dec 18, 2024, 11:46 AM ISTUpdated : Dec 18, 2024, 11:54 AM IST
 ಸರಿಗಮಪದಲ್ಲಿ ಜಡ್ಜ್‌ಗಳನ್ನೇ ಕುಣಿಸಿದ ಈ ಪುಟಾಣಿ ಹುಡುಗಿ ಯಾರು?  ಈಕೆಯ ಮುದ್ದಾಟಕ್ಕೆ ವೀಕ್ಷಕರು ಫಿದಾ

ಸಾರಾಂಶ

 ಸೋಷಲ್ ಮೀಡಿಯಾದ ಈ ಜನಪ್ರಿಯ ಪೋರಿ ಸದ್ಯ ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಸರೆಗಮಪ' ದ ವೇದಿಕೆಯಲ್ಲಿ ಪ್ರತ್ಯಕ್ಷಳಾಗಿದ್ದಾಳೆ. ಅಲ್ಲಿ  ಇತ್ತೀಚೆಗೆ ಸಖತ್ ಪಾಪ್ಯುಲರ್ ಆಗಿರೋ ಹಾಡಿಗೆ ಹೆಜ್ಜೆ ಹಾಕಿ ಎಲ್ಲರ ಮನಗೆದ್ದಿದ್ದಾಳೆ. ವಿಜಯಪ್ರಕಾಶ್, ಅರ್ಜುನ್ ಜನ್ಯಾ ಮತ್ತು ರಾಜೇಶ್ ಕೃಷ್ಣನ್ ಈ ಪುಟಾಣಿಯ ಜೊತೆ ಕುಣಿದಿದ್ದಾರೆ.

ಸರೆಗಮಪ ದಕ್ಷಿಣ ಭಾರತದಲ್ಲೇ ಅತೀದೊಡ್ಡ ಸಂಗೀತ ರಿಯಾಲಿಟಿ ಶೋ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಕಾರ್ಯಕ್ರಮ. ಈ ಬಾರಿ ಮತ್ತಷ್ಟು ಅದ್ಧೂರಿಯಾಗಿ ಕಾರ್ಯಕ್ರಮ ಮೂಡಿ ಬರುತ್ತಿದೆ. ನಿರ್ದೇಶಕ, ಸಾಹಿತಿ, ಸಂಗೀತ ಬ್ರಹ್ಮ ಹಂಸಲೇಖ ಅವರು ಮಹಾಗುರುನ ಸ್ಥಾನ ಅಲಂಕರಿಸುವ ಸಾಧ್ಯತೆ ಇದೆ. ಎಂದಿನಂತೆ ಈ ಬಾರಿಯೂ ಕನ್ನಡ ಸಿನಿಮಾರಂಗದ ಜನಪ್ರಿಯ ಸಂಗೀತ ನಿರ್ದೇಶಕರಾದ ಅರ್ಜುನ್‌ ಜನ್ಯ, ಖ್ಯಾತ ಗಾಯಕ ವಿಜಯ ಪ್ರಕಾಶ್‌ ಮತ್ತು ಮೆಲೊಡಿ ಮಾಂತ್ರಿಕ ರಾಜೇಶ್‌ ಕೃಷ್ಣನ್‌ ಜಡ್ಜಸ್‌ ಸ್ಥಾನ ಅಲಂಕರಿಸಿದ್ದಾರೆ. ಅನುಶ್ರೀ ನಿರೂಪಕಿಯಾಗಿ ಮನರಂಜಿಸುತ್ತಾರೆ. ಹಿಂದೂಸ್ತಾನಿ, ಕರ್ಣಾಟಕ ಶಾಸ್ತ್ರೀಯ ಸಂಗೀಯ, ಜಾನಪದ, ರ್ಯಾಪ್ ಹೀಗೆ ನಾನಾ ವಿಭಾಗದಲ್ಲಿ ಪರಿಣಿತಿ ಹೊಂದಿರುವ ಗಾಯಕ, ಗಾಯಕಿಯರು ಜ್ಯೂರಿ ಪ್ಯಾನಲ್‌ನಲ್ಲಿ ಇದ್ದಾರೆ. ಸಂಗೀತ ಮಹಾಸಂಸ್ಥಾನವಾದ ಅರಮನೆ ರೀತಿಯ ಸೆಟ್‌ನಲ್ಲಿ ಈ ಕಾರ್ಯಕ್ರಮ ವರ್ಣರಂಜಿತವಾಗಿ ಮೂಡಿಬರುತ್ತಿದೆ. ಹಾಡುಗಳ ಹಬ್ಬದಂತಿರುವ ಈ ಕಾರ್ಯಕ್ರಮದಲ್ಲಿ ಈ ಬಾರಿ ಸೆನ್ಸೇಶನ್ ಮೂಡಿಸಿರೋದು ಒಬ್ಬ ಪುಟಾಣಿ. ಆಕೆ ಜಡ್ಜ್‌ಗಳನ್ನೇ ಕುಣಿಸಿದ ರೀತಿ ಕಂಡು ವೀಕ್ಷಕರು ಅವಕ್ಕಾಗಿದ್ದಾರೆ.

ಅಂದಹಾಗೆ ಈ ಪುಟಾಣಿ ಹೆಚ್ಚಿನ ಮಂದಿಗೆ ಗೊತ್ತಿರುವ ಹುಡುಗಿಯೇ. ಈ ಪುಟಾಣಿಯ ಸಂಗೀತ ಪ್ರತಿಭೆ ಕಂಡು ಹಿಂದೆ ಅನೇಕ ಸೆಲೆಬ್ರಿಟಿಗಳೇ ದಂಗಾಗಿದ್ದರು. ಈಗ ಈ ಮುದ್ದುಪೋರಿ ತನ್ನ ಮುದ್ದಾಟದಿಂದ ಸರೆಗಮಪ ವೇದಿಕೆಯಲ್ಲಿ ಮನರಂಜಿಸಲು ಮುಂದಾಗಿದ್ದಾಳೆ.

ಮ್ಯಾಕ್ಸಿ, ಕಾಳಿ ಜೊತೆ ಪುಟ್ಟಕ್ಕನ ಮಗಳ ಹೊಸ ಮೆಸ್! ಕಾಳು ಹಾಕೋ ಈ ಇಬ್ಬರಲ್ಲಿ ಸಹನಾ ಆಯ್ಕೆ ಯಾರು?

ಈಕೆ ಮತ್ಯಾರೂ ಅಲ್ಲ. ಕುಂದಾಪ್ರ ಮೂಲದ ಸೋಷಿಯಲ್ ಮೀಡಿಯಾ ಪುಟಾಣಿ ಸ್ಟಾರ್ ಆರ್ಯ ಸಿಂಚನಾ. ಇನ್ನೂ ಐದು ವರ್ಷ ತುಂಬದ ಈ ಪುಟಾಣಿಯ ವೀಡಿಯೋಗಳು ಸೋಷಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಈಕೆ ಅಜ್ಜಿ ತಾತಂಗೂ ಟೀಚರ್ ಥರ ಪಾಠ ಮಾಡಿರೋ ವೀಡಿಯೋ ಈ ಹಿಂದೆ ವೈರಲ್ ಆಗಿತ್ತು. ಇವಳ ಪಾಠಕ್ಕೆ ಲಕ್ಷಾಂತರ ಜನ ಫಿದಾ ಆಗಿದ್ದರು. ಜೊತೆಗೆ ಆಗ 'ಕಾಂತಾರ' ಸಿನಿಮಾದ ಹವಾ ಜೋರಾಗಿತ್ತು. ಆಗ ಈ ಪುಟಾಣಿ ಅಮ್ಮನ ಸಹಾಯದಿಂದ ಕಾಂತಾರ ಸಿನಿಮಾದ 'ಸಿಂಗಾರ ಸಿರಿಯೇ' ಹಾಡನ್ನು ಹಾಡಿದ್ದಳು. ಅದನ್ನು ಕಾಂತಾರದ ನಾಯಕಿ ಸಪ್ತಮಿ ಗೌಡ ಮನಸಾರೆ ಮೆಚ್ಚಿಕೊಂಡು ವೀಡಿಯೋ ಶೇರ್ ಮಾಡಿದ್ದರು.

ಇಷ್ಟೆಲ್ಲ ಹಿನ್ನೆಲೆ ಇರೋ ಈ ಪೋರಿ ಸದ್ಯ ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಸರೆಗಮಪ' ದ ವೇದಿಕೆಯಲ್ಲಿ ಪ್ರತ್ಯಕ್ಷಳಾಗಿದ್ದಾಳೆ. ಅಲ್ಲಿ ಈಕೆ ಇತ್ತೀಚೆಗೆ ಸಖತ್ ಪಾಪ್ಯುಲರ್ ಆಗಿರೋ ಹಾಡಿಗೆ ಹೆಜ್ಜೆ ಹಾಕಿ ಎಲ್ಲರ ಮನಗೆದ್ದಿದ್ದಾಳೆ. ಅಂದಹಾಗೆ ಈ ಹುಡುಗಿ ಕುಣಿದಿರೋದು ಗಣೇಶ್ ನಟನೆಯ ಇತ್ತೀಚೆಗೆ ಸಖತ್ ವೈರಲ್ ಆಗಿರೋ 'ನೋಡುತ ನೋಡುತ ನಾನಂತೂ ಅಂಗಾತ ಬಿದ್ಹೋದೆ ನೋಡೇ ಚಿನ್ನಮ್ಮಾ..' ಅನ್ನೋ ಹಾಡಿಗೆ ಈ ಪುಟಾಣಿ ಸ್ಟೆಪ್ಸ್ ಹಾಕಿದ್ದಾಳೆ. ಅಷ್ಟೇ ಆಗಿದ್ದರೆ ಪರ್ವಾಗಿರ್ತಿರಲಿಲ್ಲ, ಈಕೆ ಜಡ್ಜಸ್‌ಗಳನ್ನೂ ಕುಣಿಸಿದ್ದಾಳೆ. ಹೌದು, ವಿಜಯಪ್ರಕಾಶ್, ಅರ್ಜುನ್ ಜನ್ಯಾ ಮತ್ತು ರಾಜೇಶ್ ಕೃಷ್ಣನ್ ಈ ಪುಟಾಣಿಯ ಜೊತೆ ಕುಣಿದಿದ್ದಾರೆ.

ಯಶ್ ಬೆಳೆದಿರುವುದು ನೋಡಿ ಹೊಟ್ಟೆ ಕಿಚ್ಚು ಇಲ್ಲ, ಆಸೆ ಪಟ್ಟಿದ್ದು ಸಿಕ್ಕಿದೆ: 'ಅಮೃತಾದಾರೆ' ರಾಜೇಶ್ ಹೇಳಿಕೆ ವೈರಲ್

ಹೀಗೆ ಸೋಷಲ್ ಮೀಡಿಯಾದಲ್ಲಿ ತನ್ನ ಚೂಟಿತನದಿಂದ ಗಮನಸೆಳೆಯುತ್ತಿದ್ದ ಪುಟಾಣಿ ಪೋರಿ ಇದೀಗ 'ಸರೆಗಮಪ'ದಂಥಾ ಬಹುದೊಡ್ಡ ಸಂಗೀತ ರಿಯಾಲಿಟಿ ಶೋ ವೇದಿಕೆಗೂ ಬಂದು ತನ್ನ ಮುದ್ದಾಟದಿಂದ ವೀಕ್ಷಕರ ಮನರಂಜಿಸಲು ಮುಂದಾಗಿದ್ದಾಳೆ. ಸದ್ಯ ಜೀ ಕನ್ನಡ ಹೊರಬಿಟ್ಟಿರೋ ಪ್ರೋಮೋದಲ್ಲಿ ಈ ಪುಟಾಣಿಯ ಕುಣಿದಾಟಗಳು ಪ್ರಸಾರವಾಗಿದೆ. ಇದಕ್ಕೆ ಅನೇಕ ಮಂದಿ ವೀಕ್ಷಕರು ಪಾಸಿಟಿವ್ ಆಗಿ ಸ್ಪಂದಿಸಿದ್ದಾರೆ. ಆರ್ಯನಿಗೆ ಲವ್ ಇಮೋಜಿ ಹಾಕೋದರ ಜೊತೆಗೆ ಈ ಕಾರ್ಯಕ್ರಮದಲ್ಲಿ ಜಡ್ಜಸ್ ಆಗಿರುವ ಮೂರೂ ಮಂದಿಯೂ ಅಷ್ಟು ದೊಡ್ಡ ಸೆಲೆಬ್ರಿಟಿಗಳಾದರೂ ಸಣ್ಣ ಹಮ್ಮು ಬಿಮ್ಮೂ ಇಲ್ಲದೇ ಪುಟಾಣಿಯೊಂದಿಗೆ ಕುಣೀತಿರೋದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?
Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ